ಬಿಗ್ ಬಾಸ್ 10ರ ಸ್ಪರ್ಧಿಯೇ ಕಾರ್ತಿಕ್ ಜೀವನ ಸಂಗಾತಿ; ತಾಯಿಯಿಂದ ಗ್ರೀನ್ ಸಿಗ್ನಲ್
ಬಿಗ್ ಬಾಸ್ ಶೋನಲ್ಲಿ ಇದ್ದಾಗ ಕಾರ್ತಿಕ್ ಮಹೇಶ್ ಅವರು ಮೊದಲಿಗೆ ಸಂಗೀತಾ ಶೃಂಗೇರಿ ಜತೆ ಹೆಚ್ಚು ಕ್ಲೋಸ್ ಆಗಿದ್ದರು. ಆ ನಂತರ ಅವರಿಬ್ಬರ ಮಧ್ಯೆ ಬಿರುಕು ಮೂಡಿತು. ಬಿಗ್ ಬಾಸ್ ಮುಗಿಯುವ ಹಂತ ಬಂದಾಗ ಮನಸ್ತಾಪ ಹೆಚ್ಚಾಗಿತ್ತು. ಒಂದಷ್ಟು ದಿನ ನಮ್ರತಾ ಗೌಡ ಜತೆ ಕಾರ್ತಿಕ್ಗೆ ಆಪ್ತತೆ ಬೆಳೆದಿತ್ತು. ಆದರೆ ಅದು ಸಹ ಹೆಚ್ಚು ದಿನ ಉಳಿಯಲಿಲ್ಲ. ಸದ್ಯಕ್ಕೆ ಅವರು ಸಿಂಗಲ್.
ನಟ ಕಾರ್ತಿಕ್ ಮಹೇಶ್ (Karthik Mahesh) ಅವರು ಸಿನಿಮಾ ಮತ್ತು ಕಿರುತೆರೆ ಎರಡಲ್ಲೂ ಗುರುತಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಸಿ ಗೆದ್ದ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ. ಹುಡುಗಿಯರ ಜೊತೆ ಕಾರ್ತಿಕ್ ಮಹೇಶ್ ಅವರು ಕ್ಲೋಸ್ ಆಗಿ ಮಾತನಾಡುತ್ತಾರೆ ಎಂಬುದು ಗೊತ್ತಿರುವ ವಿಚಾರ. ಸದ್ಯಕ್ಕಂತೂ ಅವರು ಸಿಂಗಲ್ ಆಗಿದ್ದಾರೆ. ಅವರ ಜೀವನ ಸಂಗಾತಿ ಯಾರಾಗಬಹುದು ಎಂಬ ಪ್ರಶ್ನೆ ಅಭಿಮಾನಿಗಳಿಗೆ ಇದೆ. ಈ ಬಗ್ಗೆ ಕಾರ್ತಿಕ್ ಮಹೇಶ್ ತಾಯಿ ವೀನಾಕ್ಷಿ (Karthik Mahesh Mother Meenakshi) ಅವರು ಒಂದು ಸುಳಿವು ನೀಡಿದ್ದಾರೆ. ಕಾರ್ತಿಕ್ಗೆ ಲೈಫ್ ಪಾರ್ಟ್ನರ್ ಆಗುವವರು ಬಿಗ್ ಬಾಸ್ ಕನ್ನಡ ಸೀಸನ್ 10ರ (BBK 10) ಸ್ಪರ್ಧಿಯೇ ಆಗಿರುತ್ತಾರಾ ಎಂದು ಹೇಳಿದ್ದಕ್ಕೆ ಅವರು ಹೌದು ಎಂದು ಉತ್ತರ ನೀಡಿದ್ದಾರೆ. ಅವರ ಈ ಹೇಳಿಕೆ ಅಚ್ಚರಿ ಮೂಡಿಸಿದೆ.
ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಿದವರು ‘ಕಲರ್ಸ್ ಕನ್ನಡ’ ವಾಹಿನಿಯ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅದೇ ರೀತಿ ಕಾರ್ತಿಕ್ ಮಹೇಶ್ ಅವರು ‘ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3’ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದಾರೆ. ತಾಯಿಯ ಜೊತೆಯಲ್ಲೇ ಅವರು ಭಾಗಿ ಆಗಿದ್ದಾರೆ. ಈ ವೇಳೆ ನಿರೂಪಕಿ ಸುಷ್ಮಾ ಕೆ. ರಾವ್ ಅವರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಮುಗಿಬಿದ್ದ ಅಭಿಮಾನಿಗಳಿಗೆ ತಾಳ್ಮೆಯಿಂದ ಸೆಲ್ಫಿ ನೀಡಿದ ಕಾರ್ತಿಕ್ ಮಹೇಶ್
‘ಕಾರ್ತಿಕ್ ಅವರು ಹುಡುಗಿಯರ ಹತ್ತಿರ ಇಷ್ಟು ಚೆನ್ನಾಗಿ ಮಾತನಾಡುತ್ತಾರೆ ಎಂಬುದು ನಿಮಗೆ ಬಿಗ್ ಬಾಸ್ ಶೋ ಮೂಲಕವೇ ಗೊತ್ತಾಗಿದ್ದಾ’ ಎಂದು ಮೀನಾಕ್ಷಿ ಅವರಿಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಅವರು ‘ಹಾಗೇನೂ ಇಲ್ಲ. ಹೊರಗಡೆಯೂ ಮಾತನಾಡುತ್ತಾನೆ. ಎಲ್ಲರ ಜೊತೆಯೂ ಫ್ರೆಂಡ್ಲಿ ಆಗಿರುತ್ತಾನೆ’ ಎಂದು ಹೇಳಿದ್ದಾರೆ. ‘ಕಾರ್ತಿಕ್ಗೆ ಲೈಫ್ ಪಾರ್ಟ್ನರ್ ಆಗುವವರು ಬಿಗ್ ಬಾಸ್ ಸೀಸನ್ 10ರಲ್ಲೇ ಇದ್ದಾರೆ. ಹೌದೋ ಅಲ್ಲವೋ’ ಎಂದು ಕೇಳಿದ್ದ ‘ಹೌದು’ ಎಂದು ಮೀನಾಕ್ಷಿ ಅವರು ಉತ್ತರಿಸಿದ್ದಾರೆ! ತಾಯಿಯಿಂದ ಇಂಥ ಉತ್ತರ ಬಂದಿದ್ದಕ್ಕೆ ಕಾರ್ತಿಕ್ ಮಹೇಶ್ ಬೆರಗಾಗಿದ್ದಾರೆ.
‘ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3’ ಪ್ರೋಮೋ:
View this post on Instagram
ಬಿಗ್ ಬಾಸ್ ಮನೆಯಲ್ಲಿ ಮೊದಲಿಗೆ ಕಾರ್ತಿಕ್ ಮಹೇಶ್ ಅವರು ಸಂಗೀತಾ ಶೃಂಗೇರಿ ಜೊತೆ ಕ್ಲೋಸ್ ಆಗಿದ್ದರು. ಆ ಬಳಿಕ ಅವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿತು. ಕಡೆಕಡೆಗೆ ಶತ್ರುಗಳ ರೀತಿ ವರ್ತಿಸಲು ಆರಂಭಿಸಿದರು. ಆ ಬಳಿಕ ನಮ್ರತಾ ಗೌಡ ಜೊತೆ ಕಾರ್ತಿಕ್ ಅವರು ಆಪ್ತತೆ ಬೆಳೆಸಿಕೊಂಡಿದ್ದರು. ಅದು ಕೂಡ ಹೆಚ್ಚು ದಿನ ಉಳಿಯಲಿಲ್ಲ. ಶೋ ಮುಗಿಯುವಾಗ ಕಾರ್ತಿಕ್ ಮಹೇಶ್ ಅವರು ಬಹುತೇಕ ಸಿಂಗಲ್ ಆಗಿದ್ದರು. ಹಾಗಿದ್ದರೆ ಕಾರ್ತಿಕ್ ಮಹೇಶ್ ಅವರ ತಾಯಿ ಯಾರನ್ನು ಮನಸ್ಸಿನಲ್ಲಿಟ್ಟುಕೊಂಡು ‘ಹೌದು’ ಎಂಬ ಉತ್ತರ ನೀಡಿದ್ದಾರೆ ಎಂಬುದನ್ನು ಕಾದುನೋಡಬೇಕು. ಶನಿವಾರ, ಭಾನುವಾರ ರಾತ್ರಿ 7.30ಕ್ಕೆ ‘ನನ್ನಮ್ಮ ಸೂಪರ್ ಸ್ಟಾರ್ 3’ ಶೋ ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ