‘ಬಿಗ್ ಬಾಸ್ 20’ ಟ್ರೇಲರ್: ಈ ಬಾರಿ ಸಲ್ಮಾನ್ ಖಾನ್ ಕೊಡ್ತಾರೆ ‘ಎಕ್ಸ್‌ಟ್ರಾ ಜೀವನ್ ದಾನ್’

ಬಿಗ್ ಬಾಸ್ ರಿಯಾಲಿಟಿ ಶೋ ಹೊಸ ಸೀಸನ್ ಆರಂಭಕ್ಕೆ ಸಕಲ ತಯಾರಿ ನಡೆದಿದೆ. ಪ್ರತಿ ಬಾರಿಯಂತೆ ಈ ಸಲ ಕೂಡ ಹೊಸ ಟ್ವಿಸ್ಟ್ ನೀಡಲಾಗುತ್ತಿದೆ. ಶೋ ನಿರೂಪಕ ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ 20’ ಟ್ರೇಲರ್​ನಲ್ಲಿ ಆ ಬಗ್ಗೆ ಸುಳಿವು ನೀಡಿದ್ದಾರೆ.

‘ಬಿಗ್ ಬಾಸ್ 20’ ಟ್ರೇಲರ್: ಈ ಬಾರಿ ಸಲ್ಮಾನ್ ಖಾನ್ ಕೊಡ್ತಾರೆ ‘ಎಕ್ಸ್‌ಟ್ರಾ ಜೀವನ್ ದಾನ್’
Salman Khan
Image Credit source: JioHotstar

Updated on: Aug 12, 2026 | 8:43 PM

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss) ಹಿಂದಿಯ 20ನೇ ಆವೃತ್ತಿ ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಬಾರಿ ಆಟದಲ್ಲಿ ವಿಶೇಷ ತಿರುವೊಂದನ್ನು ನೀಡಲಾಗಿದೆ. ಹೊಸ ಸೀಸನ್‌ನ ಟ್ರೇಲರ್ ಬಿಡುಗಡೆಯಾಗಿದ್ದು, ನಿರೂಪಕ ಸಲ್ಮಾನ್ ಖಾನ್ (Salman Khan) ‘ಎಕ್ಸ್‌ಟ್ರಾ ಜೀವನ್ ದಾನ್’ (Extra Jeevan Daan) ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ. ಈ ಹೊಸ ನಿಯಮವು ಸ್ಪರ್ಧಿಗಳ ಆಟದ ರೀತಿ ಹಾಗೂ ಅವರು ತೆಗೆದುಕೊಳ್ಳುವ ನಿರ್ಧಾರಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆಯಿದೆ.

ಟ್ರೇಲರ್‌ನ ಆರಂಭದಲ್ಲಿ ಇಬ್ಬರು ಯೋಧರು ತೀವ್ರವಾಗಿ ಕಾದಾಡುತ್ತಿರುತ್ತಾರೆ. ಈ ವೇಳೆ ಪ್ರವೇಶಿಸುವ ಸಲ್ಮಾನ್ ಖಾನ್, ಆ ಕಾಳಗವನ್ನು ತಡೆದು, ‘ಬಿಗ್ ಬಾಸ್‌ನಲ್ಲಿ ಸಿಗಲಿದೆ ಮೇರಿ ಜಾನ್… ಎಕ್ಸ್‌ಟ್ರಾ ಜೀವನ್ ದಾನ್’ ಎಂದು ಹೇಳಿ ತಮ್ಮದೇ ಶೈಲಿಯಲ್ಲಿ ‘ತಥಾಸ್ತು’ (Tathas-two) ಎನ್ನುತ್ತಾರೆ. ಆ ಮೂಲಕ ಅವರು ಹೊಸ ಥೀಮ್ ಬಗ್ಗೆ ಕುತೂಹಲ ಮೂಡಿಸಿದ್ದಾರೆ.

ಸ್ಪರ್ಧಿಗಳಿಗೆ ಆಟದಲ್ಲಿ ಮತ್ತೊಂದು ಅವಕಾಶ (ಎರಡನೇ ಜೀವನ) ಸಿಗಲಿದೆ ಎಂಬುದನ್ನು ಟ್ರೇಲರ್ ಖಚಿತಪಡಿಸಿದೆಯಾದರೂ, ಈ ‘ಎಕ್ಸ್‌ಟ್ರಾ ಜೀವನ್ ದಾನ್’ ನಿಯಮವು ಹೇಗೆ ಮತ್ತು ಯಾವಾಗ ಉಪಯೋಗಕ್ಕೆ ಬರಲಿದೆ ಎಂಬ ವಿವರಗಳನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ. ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ ನಂತರವೇ ಈ ಸಸ್ಪೆನ್ಸ್ ಹೊರಬೀಳಲಿದೆ. ಸದ್ಯದ ಮಟ್ಟಿಗೆ, ಈ ಸೀಸನ್‌ನಲ್ಲಿ ಸೇಫ್ ಗೇಮ್ ಆಡಲು ಅವಕಾಶವಿಲ್ಲ ಎಂಬುದು ಸ್ಪಷ್ಟವಾಗಿದೆ.

‘ಬಿಗ್ ಬಾಸ್ 20’ ಟ್ರೇಲರ್:

Bigg Boss | Official Trailer | Streaming 6th September | JioHotstar

ಹೊಸ ಥೀಮ್ ಬಗ್ಗೆ ಮಾತನಾಡಿರುವ ಸಲ್ಮಾನ್ ಖಾನ್, ‘ಬಿಗ್ ಬಾಸ್‌ನಲ್ಲಿ ಪ್ರತಿ ವರ್ಷ ಆಟ ಬದಲಾಗುತ್ತದೆ. ಆದರೆ ಈ ಬಾರಿ ಬರೀ ಆಟ ಮಾತ್ರವಲ್ಲ, ಆಡುವ ರೀತಿಯೂ ಬದಲಾಗಲಿದೆ. ಜೀವನ್ ದಾನ್ ಎಂಬುದು ಕೇಳಲು ಎಷ್ಟು ಸರಳವಾಗಿದೆಯೋ, ಅಷ್ಟೊಂದು ಸರಳವಾಗಿರುವುದಿಲ್ಲ. ಬಾಕಿ ವಿಷಯಗಳು ಮನೆ ಒಳಗೆ ಹೋದ ಮೇಲೆಯೇ ತಿಳಿಯಲಿವೆ’ ಎಂದು ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ಏಕಕಾಲದಲ್ಲಿ ಶುರುವಾಗಲಿದೆ 6 ಭಾಷೆಗಳ ‘ಬಿಗ್ ಬಾಸ್’ ಹೊಸ ಶೋ

‘ಯಾವುದೇ ಮನರಂಜನಾ ಫ್ರಾಂಚೈಸಿಗೆ 20 ಸೀಸನ್‌ಗಳನ್ನು ಪೂರೈಸುವುದು ದೊಡ್ಡ ಸಾಧನೆ. ಈ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವಾಗ, ಸ್ಪರ್ಧಿಗಳು ಮತ್ತು ಪ್ರೇಕ್ಷಕರಿಗೆ ಹೊಸತನ, ಅಚ್ಚರಿ ಹಾಗೂ ರೋಮಾಂಚನ ನೀಡುವಂತೆ ಆಟವನ್ನು ಮರುರೂಪಿಸಲು ನಾವು ಬಯಸಿದ್ದೆವು’ ಎಂದು ಬಿಗ್ ಬಾಸ್ ಶೋ ಆಯೋಜಕರು ಹೇಳಿದ್ದಾರೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us