
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಹೆಸರಿನ ಪಾತ್ರವನ್ನು ಮಾಡುತ್ತಿದ್ದ ಸಂಜನಾ ಬುರ್ಲಿ (Sanjana Burli) ಅವರು ಅರ್ಧಕ್ಕೆ ಧಾರಾವಾಹಿಯಿಂದ ಹೊರ ನಡೆದಿದ್ದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಈ ಚರ್ಚೆಯ ಬಳಿಕ ಅವರು ಎಲ್ಲಿಯೂ ಸ್ಪಷ್ಟನೆ ಕೊಡಲೇ ಇಲ್ಲ. ಸಂಜನಾ ಅವರು ಈ ಬಗ್ಗೆ ಮೌನವಹಿಸಿದ್ದರು. ಈಗ ಅವರು ‘ಶ್ರೀ ಗಂಧದಗುಡಿ’ ಧಾರಾವಾಹಿ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ ಮತ್ತು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಬಿಟ್ಟಿದ್ದರ ಹಿಂದಿನ ಕಾರಣ ಹೇಳಿದ್ದಾರೆ.
‘ಪುಟ್ಟಕ್ಕನ್ನ ಮಕ್ಕಳು’ ಧಾರಾವಾಹಿಯಲ್ಲಿ ಸಂಜನಾ ಅವರು ಪುಟ್ಟಕ್ಕನ ಮಗಳು ಸ್ನೇಹಾ ಆಗಿ ಕಾಣಿಸಿಕೊಂಡಿದ್ದರು. ಅವರು ಧಾರಾವಾಹಿಯಿಂದ ಹೊರ ನಡೆದಿದ್ದರಿಂದ ಅವರ ಪಾತ್ರ ಅರ್ಧಕ್ಕೆ ಕೊನೆ ಆಯಿತು. ಅವರು ಸತ್ತಂತೆ ತೋರಿಸಲಾಯಿತು. ಆದರೆ, ಇದು ಅವರು ಏಕಾಏಕಿ ತೆಗೆದುಕೊಂಡು ನಿರ್ಧಾರ ಅಲ್ಲ ಎಂದು ಸಂಜನಾ ಅವರು ಹೇಳಿದರು.
‘ಶ್ರೀ ಗಂಧದಗುಡಿ’ ಹೆಸರಿನ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಅಕ್ಟೋಬರ್ 6ರಿಂದ ಧಾರಾವಾಹಿಯು ರಾತ್ರಿ 8 ಗಂಟೆಗೆ ಕಲರ್ಸ್ನಲ್ಲಿ ಪ್ರಸಾರ ಕಾಣಲಿದೆ. ಈ ಧಾರಾವಾಹಿ ಸುದ್ದಿಗೋಷ್ಠಿ ವೇಳೆ ಅವರು ‘ಟಿವಿ9 ಕನ್ನಡ’ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದರು.
‘ಧಾರಾವಾಹಿ ಬಿಟ್ಟಿರೋ ಕಾರಣವನ್ನು ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ಒಬ್ಬೊಬ್ಬರು ಒಂದೊಂದು ಕಾರಣ ಹೇಳಿದ್ದಾರೆ. ನನಗೆ ಹೇಳಬೇಕು ಎಂದು ಎನಿಸಿಲ್ಲ. ಒಂದು ಕಾರಣ ನನ್ನ ಎಜ್ಯುಕೇಶನ್ ಆಗಿತ್ತು. ಇದರ ಜೊತೆಗೆ ಇನ್ನೂ ಕೆಲವು ಪರಿಸ್ಥಿತಿಗಳು ಇದ್ದವು. ಒಂದು ವರ್ಷ ಯೋಚನೆ ಮಾಡಿ ತೆಗೆದುಕೊಂಡ ನಿರ್ಧಾರ’ ಎಂದರು ಸಂಜನಾ ಬುರ್ಲಿ.
ಇದನ್ನೂ ಓದಿ: ಸಂಜನಾ ಬುರ್ಲಿ ಬಿಗ್ ಬಾಸ್ಗೆ ಬರೋದು ಅನುಮಾನ?
‘ನಾನು ನೋಟಿಸ್ ಪೀರಿಯಡ್ ಕೂಡ ಮಾಡಿದ್ದೆ. ಮೂರು ತಿಂಗಳು ಮೊದಲೇ ಹೇಳಿ, ಶೂಟಿಂಗ್ ಎಲ್ಲವನ್ನೂ ನೀಟ್ ಆಗಿ ಮುಗಿಸಿಕೊಟ್ಟು ಬಂದಿದ್ದೇನೆ. ನಾನು ಓದೋಕೆ ದೆಹಲಿಗೆ ಹೋಗಿದ್ದೆ. ಅಲ್ಲಿ ಪರಿಸ್ಥಿತಿ ಸರಿ ಇಲ್ಲ ಅಂತ ಎರಡು ತಿಂಗಳು ಬಿಟ್ಟು ಬಂದೆ. ಈಗ ಆನ್ಲೈನ್ನಲ್ಲಿ ಓದುತ್ತಿದ್ದೇನೆ. ಮಾಸ್ಟರ್ಸ್ ಮಾಡುತ್ತಿದ್ದೇನೆ. ಬಿಟ್ಟಮೇಲೆ ಕೊಟ್ಟ ರಿಯಾಕ್ಷನ್ ನೋಡಿ ಜನರು ನನ್ನ ಎಷ್ಟು ಇಷ್ಟಪಡ್ತಿದಾರೆ ಅನ್ನೋದು ಗೊತ್ತಾಯಿತು. ಈಗ ನಟನೆಗೆ ಕಂಬ್ಯಾಕ್ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.