ಐಶ್ವರ್ಯಾ ಹಾಗೂ ತಮ್ಮ ಬಗ್ಗೆ ಹರಿದಾಡಿದ ವದಂತಿಗೆ ಸ್ಪಷ್ಟನೆ ನೀಡಿದ ಶಿಶಿರ್
ಶಿಶಿರ್ ಹಾಗೂ ಐಶ್ವರ್ಯಾ ಶಿಂಧೋಗಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಪರಸ್ಪರ ಪರಿಚಯ ಆದರು. ಈ ಶೋನಲ್ಲಿ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಸಾಮಾನ್ಯವಾಗಿ ಈ ಗೆಳೆತನ ಬಿಗ್ ಬಾಸ್ ಮನೆಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ, ಶಿಶಿರ್ ಅವರು ಬಿಗ್ ಬಾಸ್ನಿಂದ ಹೊರ ಬಂದ ಬಳಿಕವೂ ಗೆಳೆತನ ಮುಂದುವರಿದಿದೆ.

ಶಿಶಿರ್ ಅವರು ಸದ್ಯ ಸುದ್ದಿಯಲ್ಲಿ ಇದ್ದಾರೆ. ಅವರ ನಟನೆಯ ‘ಶ್ರೀ ಗಂಧದಗುಡಿ’ ಧಾರಾವಾಹಿಯು ಕಲರ್ಸ್ ಕನ್ನಡದಲ್ಲಿ ಅಕ್ಟೋಬರ್ 6ರಿಂದ ರಾತ್ರಿ 8 ಗಂಟೆಗೆ ಪ್ರಸಾರ ಕಾಣಲಿದೆ. ಬಿಗ್ ಬಾಸ್ ಮೂಲಕ ಅವರು ಜನಪ್ರಿಯತೆ ಪಡೆದರು. ಬಿಗ್ ಬಾಸ್ ಬಳಿಕ ಅವರು ನಟಿಸುತ್ತಿರುವ ಮೊದಲ ಧಾರಾವಾಹಿ ಇದು. ಹೀಗಿರುವಾಗಲೇ ಶಿಶಿರ್ ಅವರು ತಮ್ಮ ಬಗ್ಗೆ ಹರಿದಾಡಿದ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಏನು ವಿವಾದ? ಅವರ ಬಗ್ಗೆ ಹುಟ್ಟಿಕೊಂಡ ವದಂತಿ ಏನು? ಎಂಬುದರ ಕುರಿತು ಇಲ್ಲಿದೆ ವಿವರ.
ಶಿಶಿರ್ ಹಾಗೂ ಐಶ್ವರ್ಯಾ ಶಿಂಧೋಗಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಪರಸ್ಪರ ಪರಿಚಯ ಆದರು. ಈ ಶೋನಲ್ಲಿ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಸಾಮಾನ್ಯವಾಗಿ ಈ ಗೆಳೆತನ ಬಿಗ್ ಬಾಸ್ ಮನೆಗೆ ಮಾತ್ರ ಸೀಮಿತವಾಗಿರುತ್ತವೆ. ಆದರೆ, ಶಿಶಿರ್ ಅವರು ಬಿಗ್ ಬಾಸ್ನಿಂದ ಹೊರ ಬಂದ ಬಳಿಕವೂ ಗೆಳೆತನ ಮುಂದುವರಿದಿದೆ.
ಈ ಗೆಳೆತನದ ಬಗ್ಗೆ ಅನೇಕರು ನಾನಾ ರೀತಿಯಲ್ಲಿ ಮಾತನಾಡಿದ್ದು ಇದೆ. ಕೆಲವರು ಇವರು ಲಿವಿನ್ನಲ್ಲಿ ಇದ್ದಾರೆ ಎಂದು ಕೂಡ ಸುದ್ದಿ ಹಬ್ಬಿಸಿದ್ದಾರೆ. ಈ ವಿಚಾರವು ಶಿಶಿರ್ಗೆ ಬೇಸರ ಮೂಡಿಸಿದೆ. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಆ ರೀತಿ ಏನು ಇಲ್ಲ ಎಂದಿದ್ದಾರೆ. ಶಿಶಿರ್ ಅವರು ತಂದೆ-ತಾಯಿ ಜೊತೆ ವಾಸವಾಗಿದ್ದರಂತೆ. ಇನ್ನು, ಐಶ್ವರ್ಯಾ ಅವರು ಹಾಯಾಗಿ ತಮ್ಮ ಶ್ವಾನ ಸಿಂಬಾ ಜೊತೆ ವಾಸವಿದ್ದಾರೆ. ‘ನಾವು ಲಿವಿನ್ನಲ್ಲಿ ಇಲ್ಲ’ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಗಿಲ್ಲಿ ನಟನಿಗೆ ಕಾಮಿಡಿಯೇ ಮುಳುವಾಯ್ತು: ಬಿಗ್ ಬಾಸ್ ಕಡೆಯಿಂದ ಖಡಕ್ ಎಚ್ಚರಿಕೆ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಿಶಿರ್ ಸ್ಪರ್ಧಿಯಾಗಿ ಕಾಣಿಸಿಕೊಂಡರು. ಆ ಬಳಿಕ ಇವರ ಬೇಡಿಕೆ ಹೆಚ್ಚಾಯಿತು. ಈಗ ಅವರು ‘ಶ್ರೀ ಗಂಧದಗುಡಿ’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಸಹೋದರರ ಕಥೆ. ಅಪ್ಪ-ಅಮ್ಮ ಇಲ್ಲದ ಮನೆಗೆ ಹೆಣ್ಣೊಬ್ಬಳು ಬರುತ್ತಾಳೆ. ಅವರು ಎದುರಿಸೋ ಸಮಸ್ಯೇಗಳೇ ಧಾರಾವಾಹಿಯ ಹೈಲೈಟ್ ಆಗಿರಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:13 am, Wed, 1 October 25







