ಚಂದ್ರಪ್ರಭ ಕಾಮಿಡಿ ಕಿಕ್: ನಕ್ಕು ನಕ್ಕು ಸುಸ್ತಾದ ಬಿಗ್ ಬಾಸ್ ಮನೆ ಮಂದಿ
ಡಬಲ್ ಮೀನಿಂಗ್ ಕಾಮಿಡಿ ಮಾಡುತ್ತಾರೆ ಎಂಬ ಆರೋಪದಿಂದ ಚಂದ್ರಪ್ರಭ ಹೊರಬಂದಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಎಲ್ಲರನ್ನೂ ನಗಿಸುವ ಮೂಲಕ ಅವರು ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿದ್ದಾರೆ. ಡಾಗ್ ಸತೀಶ್ ಮತ್ತು ಚಂದ್ರಪ್ರಭ ಅವರು ದೊಡ್ಮನೆಯಲ್ಲಿ ಜಂಟಿಯಾಗಿ ಆಟ ಆಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ಕಾಮಿಡಿ ಶೋಗಳ ಮೂಲಕ ಜನರಿಗೆ ಪರಿಚಯವಾಗಿದ್ದ ಚಂದ್ರಪ್ರಭ (Chandraprabha) ಅವರು ಈಗ ಬಿಗ್ ಬಾಸ್ ಸ್ಪರ್ಧಿ ಆಗಿದ್ದಾರೆ. ಬೇರೆ ಕಾರ್ಯಕ್ರಮಗಳಲ್ಲಿ ಅವರು ಡಬಲ್ ಮೀನಿಂಗ್ ಕಾಮಿಡಿ ಮಾಡುತ್ತಾರೆ ಎಂಬ ಆರೋಪ ಇತ್ತು. ಆದರೆ ರಿಯಲ್ ಲೈಫ್ನಲ್ಲಿ ಚಂದ್ರಪ್ರಭ ವ್ಯಕ್ತಿತ್ವ ಬೇರೆಯೇ ಇದೆ. ಅದು ಬಿಗ್ ಬಾಸ್ ಶೋನಲ್ಲಿ ಅನಾವರಣ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಸಂಚಿಕೆಗಳಲ್ಲಿ ಚಂದ್ರಪ್ರಭ ಕಾಮಿಡಿಗೆ ವೀಕ್ಷಕರು ಮನಸೋಲುತ್ತಿದ್ದಾರೆ. ಅಲ್ಲದೇ, ದೊಡ್ಮನೆ ಒಳಗೆ ಇರುವ ಸದಸ್ಯರು ಕೂಡ ಬಿದ್ದು ಬಿದ್ದು ನಗುತ್ತಿದ್ದಾರೆ.
ಪ್ರತಿ ಬಾರಿಯೂ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಒಂದು ಕಾನ್ಸೆಪ್ಟ್ ಇರುತ್ತದೆ. ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಜಂಟಿಗಳು ಮತ್ತು ಒಂಟಿಗಳು ಎಂಬ ಕಾನ್ಸೆಪ್ಟ್ ಪರಿಚಯಿಸಲಾಗಿದೆ. 6 ಜನರು ಒಂಟಿಗಳಾಗಿ ಎಂಟ್ರಿ ನೀಡಿ ಹೆಚ್ಚು ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. ಇನ್ನುಳಿದವರು ಜಂಟಿಗಳಾಗಿ ಟಾಸ್ಕ್ ನಿಭಾಯಿಸುತ್ತಿದ್ದಾರೆ. ಚಂದ್ರಪ್ರಭ ಕೂಡ ಜಂಟಿ ಆಗಿದ್ದಾರೆ. ಅವರಿಗೆ ಡಾಗ್ ಸತೀಶ್ ಜೋಡಿ ಆಗಿದ್ದಾರೆ.
ಡಾಗ್ ಸತೀಶ್ ಮತ್ತು ಚಂದ್ರಪ್ರಭ ಅವರ ಕಾಂಬಿನೇಷನ್ ಎಲ್ಲರಿಗೂ ಇಷ್ಟ ಆಗುತ್ತಿದೆ. ಡಾಗ್ ಸತೀಶ್ ಅವರು ನೂರಾರು ಕೋಟಿ ರೂಪಾಯಿ ಒಡೆಯ. ಅವರ ಲೈಫ್ ಸ್ಟೈಲ್ ತುಂಬ ಐಷಾರಾಮಿ ಆಗಿದೆ. ಅದನ್ನು ನೋಡಿ ಚಂದ್ರಪ್ರಭ ಅವರಿಗೆ ಅಚ್ಚರಿ ಆಗುತ್ತಿದೆ. ಡಾಗ್ ಸತೀಶ್ ಅವರನ್ನು ಹತ್ತಿರದಿಂದ ನೋಡಿದ ಚಂದ್ರಪ್ರಭ ಅವರು ಹರಿಕಥೆ ರೂಪದಲ್ಲಿ ಅದನ್ನು ಮನೆಮಂದಿಗೆ ವಿವರಿಸಿದ್ದಾರೆ. ಈ ವೇಳೆ ಎಲ್ಲರೂ ನಕ್ಕು ಎಂಜಾಯ್ ಮಾಡಿದ್ದಾರೆ.
ಈ ರೀತಿ ಮನರಂಜನೆ ನೀಡುವುದನ್ನು ಮುಂದುವರಿಸಿದರೆ ಚಂದ್ರಪ್ರಭ ಅವರಿಗೆ ಪ್ರೇಕ್ಷಕರಿಂದ ಹೆಚ್ಚು ಓಟ್ ಸಿಗಲಿದೆ. ಅಲ್ಲದೇ ಮನೆಯೊಳಗಿನ ಸದಸ್ಯರ ಸ್ನೇಹ ಕೂಡ ಬೆಳೆಸಬಹುದು. ಎಲ್ಲರ ಜೊತೆಗೂ ಅವರು ಬೆರೆಯುತ್ತಾರೆ ಎಂಬುದು ಖಚಿತ ಆಗುತ್ತದೆ. ಇದರಿಂದ ಚಂದ್ರಪ್ರಭ ಅವರ ಬಿಗ್ ಬಾಸ್ ಜರ್ನಿ ಚೆನ್ನಾಗಿ ಮುಂದುವರಿಯಲು ಸಹಕಾರಿ ಆಗುತ್ತದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಡಾಗ್ ಸತೀಶ್ ಜೀವನ ನೀವಂದುಕೊಂಡಂತೆ ಇಲ್ಲ; ಎಲ್ಲವನ್ನೂ ವಿವರಿಸಿದ ಚಂದ್ರಪ್ರಭ
ಬಿಗ್ ಬಾಸ್ ಮನೆಯಲ್ಲಿ ಇರುವ ಇನ್ನೋರ್ವ ಕಾಮಿಡಿ ಕಲಾವಿದ ಗಿಲ್ಲಿ ನಟ. ಅವರು ಕೂಡ ಈ ಮೊದಲು ಹಲವು ಕಾರ್ಯಕ್ರಮಗಳಲ್ಲಿ ಪ್ರಾಪರ್ಟಿ ಕಾಮಿಡಿ ಮಾಡಿ ಗಮನ ಸೆಳೆದಿದ್ದರು. ಆದರೆ ಬಿಗ್ ಬಾಸ್ ಮನೆಯೊಳಗೆ ಅವರ ಕಾಮಿಡಿ ಅಷ್ಟೇನೂ ವರ್ಕೌಟ್ ಆಗುತ್ತಿಲ್ಲ. ಬದಲಿಗೆ ಇನ್ನುಳಿದ ಸ್ಪರ್ಧಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಗಿಲ್ಲಿ ನಟ ವರಸೆ ಬದಲಾಯಿಸಿಕೊಳ್ಳಬೇಕಾದ ಅಗತ್ಯ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




