SaReGaMaPa Finale: ‘ಸರಿಗಮಪ’ ಫೈನಲಿಸ್ಟ್ ಇವರೇ ನೋಡಿ; ಫಿನಾಲೆ ಮತ್ತಷ್ಟು ಕಠಿಣ

SaReGaMaPa Finalist Name: ಸರಿಗಮಪ ಸಂಗೀತ ಕಾರ್ಯಕ್ರಮದ ಫೈನಲ್ ಹಂತಕ್ಕೆ ಆರು ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಈ ತಿಂಗಳಲ್ಲಿ ‘ಟಿಕೆಟ್ ಟು ಫಿನಾಲೆ’ ನಡೆದಿತ್ತು. ಈ ಪೈಕಿ 13 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ ಇಬ್ಬರಿಗೆ ಇಬ್ಬರಿ ಟಿಕೆಟ್ ಸಿಕ್ಕಿತ್ತು. ಕಳೆದ ವಾರ ನಡೆದ ಸೆಮಿ ಫೈನಲ್​ನಲ್ಲಿ ನಾಲ್ಕು ಮಂದಿಗೆ ಫಿನಾಲೆ ಟಿಕೆಟ್ ಸಿಕ್ಕಿದೆ.

SaReGaMaPa Finale: ‘ಸರಿಗಮಪ’ ಫೈನಲಿಸ್ಟ್ ಇವರೇ ನೋಡಿ; ಫಿನಾಲೆ ಮತ್ತಷ್ಟು ಕಠಿಣ
ಸರಿಗಮಪ ಫೈನಲಿಸ್ಟ್
Updated By: Digi Tech Desk

Updated on: May 26, 2025 | 8:38 AM

ಹಲವು ತಿಂಗಳ ಕಾಲ ಎಲ್ಲರನ್ನೂ ರಂಜಿಸಿದ ‘ಸರಿಗಮಪ’ ಶೋ (Saregamapa) ಈಗ ಫಿನಾಲೆ ಹಂತ ತಲುಪಿದೆ. ಸ್ಪರ್ಧಿಗಳ ಮಧ್ಯೆ ಒಳ್ಳೆಯ ಕಾಂಪಿಟೇಷನ್ ಇತ್ತು. ಹಲವು ತಿಂಗಳು ನಡೆದ ಈ ಶೋ ಈಗ ಫಿನಾಲೆ ಹಂತಕ್ಕೆ ಬಂದಿದೆ. ಕಳೆದ ವಾರ (ಮೇ 24 ಹಾಗೂ 25) ಅದ್ದೂರಿಯಾಗಿ ಸೆಮಿ ಫೈನಲ್ ನಡೆದಿದೆ. ಈ ಪೈಕಿ ಆರು ಮಂದಿ ಫೈನಲ್​ಗೆ ಆಯ್ಕೆ ಆಗಿದ್ದಾರೆ. ಇವರ ಪೈಕಿ ಫಿನಾಲೆಯಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲ ವೀಕ್ಷಕರಿಗೆ ಮೂಡಿದೆ. ಇನ್ನೂ ಕೆಲವರು ತಮ್ಮ ನೆಚ್ಚಿನ ಸ್ಪರ್ಧಿಗಳು ಫಿನಾಲೆಗೆ ಆಯ್ಕೆ ಆಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಈ ಬಾರಿ ತೀರ್ಪುಗಾರರ ಸ್ಥಾನದಲ್ಲಿ ಮೂವರು ಜಡ್ಜ್​ಗಳು ಇದ್ದರು. ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್. ಇವರಲ್ಲದೆ, ಜ್ಯೂರಿ ಸ್ಥಾನದಲ್ಲಿ ಸಂಗೀತ ಕ್ಷೇತ್ರದ ನಿಪುಣರು ಇದ್ದರು.  ಇವರೆಲ್ಲರ ಮಾರ್ಗದರ್ಶನದಲ್ಲಿ ಅನೇಕ ಸ್ಪರ್ಧಿಗಳು ವೇದಿಕೆ ಏರಿದ್ದರು. ಈ ಪೈಕಿ ಆರು ಮಂದಿಗೆ ಫೈನಲ್​ಗೆ ಏರುವ ಭಾಗ್ಯ ಸಿಕ್ಕಿದೆ.
ಈ ತಿಂಗಳಲ್ಲಿ ‘ಟಿಕೆಟ್ ಟು ಫಿನಾಲೆ’ ನಡೆದಿತ್ತು. ಈ ಪೈಕಿ 13 ಸ್ಪರ್ಧಿಗಳು ಭಾಗವಹಿಸಿದ್ದರು. ಬಾಳು ಬೆಳಗುಂದಿ, ದ್ಯಾಮೇಶ, ಲಹರಿ, ಭೂಮಿಕಾ, ಮನೋಜ್, ರಶ್ಮಿ ಡಿ, ಕಾರ್ತಿಕ್, ಅಮೋಘ ವರ್ಷ, ಸುಧೀಕ್ಷಾ, ಆಗಮ ಶಾಸ್ತ್ರೀ, ದೀಪಕ್, ಶಿವಾನಿ ಮತ್ತು ಆರಾಧ್ಯ ರಾವ್ ನಡುವೆ ಹಣಾಹಣಿ ಏರ್ಪಟ್ಟಿತ್ತು. ಈ ವೇಳೆ ಆರಾಧ್ಯಾ ಹಾಗೂ ಶಿವಾನಿ ಅವರಿಗೆ ನೇರವಾಗಿ ಫಿನಾಲೆ ಟಿಕೆಟ್ ಸಿಕ್ಕಿತ್ತು.

ಇದನ್ನೂ ಓದಿ
‘ಕಾಂತಾರ: ಚಾಪ್ಟರ್ 1’ ಅಡಚಣೆ; ಅಂದುಕೊಂಡ ದಿನಾಂಕದಲ್ಲೇ ಚಿತ್ರ ರಿಲೀಸ್
ಮಹೇಶ್ ಬಾಬು ಕುಟುಂಬದಲ್ಲಿ ಕೊವಿಡ್; ಅಭಿಮಾನಿಗಳಲ್ಲಿ ಹೆಚ್ಚಿತು ಆತಂಕ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು

ಜೀಕನ್ನಡ ಹಂಚಿಕೊಂಡ ಫಿನಾಲೆ ಸ್ಪರ್ಧಿಗಳು

ಮೇ 24 ಹಾಗೂ 25ರಂದು ನಡೆದ ಸೆಮಿ ಫೈನಲ್​ನಲ್ಲಿ ರಶ್ಮಿ, ಬಾಳು ಬೆಳಗುಂದಿ, ದ್ಯಾಮೇಶ್ ಹಾಗೂ ಅಮೋಘ ವರ್ಷಗೆ ಫಿನಾಲೆಗೆ ಏರುವ ಅವಕಾಶ ಸಿಕ್ಕಿದೆ. ಈ ಮೂಲಕ ಫಿನಾಲೆಯಲ್ಲಿ ಶಿವಾನಿ, ರಶ್ಮಿ ಡಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಇದ್ದಾರೆ.

ಇದನ್ನೂ ಓದಿ: ‘ಸರಿಗಮಪ’ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ

ಇನ್ನು ವೀಕ್ಷಕರಿಗೆ ನೆಚ್ಚಿನ ಶೋನಲ್ಲಿ ನೆಚ್ಚಿನ ಸ್ಪರ್ಧಿ ಇರುತ್ತಾರೆ. ಅವರು ಆಯ್ಕೆ ಆಗಿಲ್ಲ ಎಂದಾಗ ಬೇಸರ ಆಗೋದು ಸಾಮಾನ್ಯ. ಈ ರೀತಿ ಈ ಮೊದಲು ಕೂಡ ಆಗಿತ್ತು. ಅದೇ ರೀತಿ ಲಹರಿ ಉತ್ತಮವಾಗಿ ಹಾಡಿದ್ದು, ಅವರಿಗೆ ಟಿಕೆಟ್ ಸಿಗಬೇಕು ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:07 am, Mon, 26 May 25