ಜೀ ಕನ್ನಡದಲ್ಲಿ ಆರಂಭ ಆಯ್ತು ಸರಿಗಮಪ ಹೊಸ ಸೀಸನ್; ಈ ಬಾರಿ ಇದೆ ಹಲವು ವಿಶೇಷತೆ

|

Updated on: Dec 14, 2024 | 12:51 PM

ಜೀ ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ’ ಹೊಸ ಸೀಸನ್‌ನೊಂದಿಗೆ ಮತ್ತೆ ಆರಂಭವಾಗುತ್ತಿದೆ. ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಮತ್ತು ವಿಜಯ್ ಪ್ರಕಾಶ್ ಅವರು ಜಡ್ಜ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ, ಅನುಶ್ರೀ ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿ ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

ಜೀ ಕನ್ನಡದಲ್ಲಿ ಆರಂಭ ಆಯ್ತು ಸರಿಗಮಪ ಹೊಸ ಸೀಸನ್; ಈ ಬಾರಿ ಇದೆ ಹಲವು ವಿಶೇಷತೆ
ಸರಿಗಮಪ ಶೋ
Follow us on

ಹಾಡಿನ ರಿಯಾಲಿಟಿ ಶೋ ಎಂದಾಗ ತಕ್ಷಣ ನೆನಪಿಗೆ ಬರೋದು ‘ಸರಿಗಮಪ’ ರಿಯಾಲಿಟಿ ಶೋ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಈ ರಿಯಾಲಿಟಿ ಶೋ ಅನೇಕ ಟ್ಯಾಲೆಂಟ್​ಗಳಿಗೆ ವೇದಿಕೆ ಆಗಿದೆ. ಈ ವೇದಿಕೆ ಏರಿದ ಅನೇಕರು ಈಗ ಸಂಗೀತ ಲೋಕದಲ್ಲಿ ಹೆಸರು ಮಾಡುತ್ತಿದ್ದಾರೆ. ಸಂಜಿತ್ ಹೆಗಡೆ, ಪೃಥ್ವಿ ಭಟ್, ಜಸ್ಕರಣ್ ಸಿಂಗ್, ಆಶಾ ಭಟ್, ಐಶ್ವರ್ಯ ರಂಗರಾಜನ್, ಹನುಮಂತು, ದಿಯಾ ಹೆಗ್ಡೆ, ಶ್ರೀನಿಧಿ ಶಾಸ್ತ್ರಿ, ರಜತ್ ಹೆಗಡೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈಗ ಹೊಸ ಸೀಸನ್ ಆರಂಭಕ್ಕೆ ಜೀ ಕನ್ನಡ ವಾಹಿನಿ ಸಜ್ಜಾಗಿದೆ. ಇಂದಿನಿಂದ (ಡಿಸೆಂಬರ್ 14) ‘ಸರಿಗಮಪ’ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ.

ರಾಜೇಶ್ ಕೃಷ್ಣನ್ ಅವರು ಈ ಮೊದಲು ‘ಸರಿಗಮಪ’ ಜಡ್ಜ್ ಆಗಿದ್ದರು. ಆ ಬಳಿಕ ಅವರು ಕೆಲ ವರ್ಷ ಶೋ ತೊರೆದು ಹೋಗಿದ್ದರು. ಈ ಸೀಸನ್​ಗೆ ಅವರು ಮರಳಿದ್ದಾರೆ. ಈ ಬಾರಿ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಜೊತೆ ರಾಜೇಶ್ ಕೃಷ್ಣನ್ ಮತ್ತೆ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಅನುಶ್ರೀ ಈ ಸೀಸನ್​ನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಸೀಸನ್​ನಲ್ಲಿ ಆರು ವರ್ಷದಿಂದ 60 ವರುಷದವರೆಗಿನ ವಯೋಮಿತಿಯ ಸ್ಪರ್ಧಿಗಳು ಭಾಗವಿಸಲಿದ್ದಾರೆ.

ಈ ಬಾರಿ ಶೋ ಕೇವಲ ಕರ್ನಾಟಕ ಸ್ಪರ್ಧಿಗಳಿಗೆ ಮಾತ್ರ ಸೀಮಿತವಾಗಿಲ್ಲ. ದೇಶದ ಹಲವು ಭಾಗಗಳಿಂದ ಸ್ಪರ್ಧಿಗಳು ಆಗಮಿಸಲಿದ್ದಾರೆ. ಈ ಬಾರಿ ಸ್ಪರ್ಧಿಗಳ ಆಯ್ಕೆಗೆ ಹೊಸ ತಂತ್ರ ಬಳಸಲಾಗಿದೆ. ಈ ಬಾರಿ ಜೀ ಕನ್ನಡದ ‘ಸರಿಗಮಪ’ ಇನ್​ಸ್ಟಾಗ್ರಾಂನ ಅಧಿಕೃತ ಪೇಜ್​ನಲ್ಲಿ ಆಡಿಷನ್ ವೀಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಅತಿ ಹೆಚ್ಚು ಲೈಕ್ ಪಡೆಯುವ ಸ್ಪರ್ಧಿಗಳನ್ನು ಮೆಗಾ ಆಡಿಷನ್​ಗೆ ಬಡ್ತಿ ಪಡೆದಿದ್ದಾರೆ.

ಇದನ್ನೂ ಓದಿ: ಬರ್ತಿದೆ ‘ಸರಿಗಮಪ’ ಶೋ; ಜಡ್ಜ್ ಸ್ಥಾನಕ್ಕಾಗಿ ಮತ್ತೆ ಬಂದ ರಾಜೇಶ್ ಕೃಷ್ಣನ್

ಸಮಯ?

ಜೀ ಕನ್ನಡ ವಾಹನಿ ವೀಕೆಂಡ್​ನಲ್ಲಿ ಭರ್ಜರಿ ಮನರಂಜನೆ ಸಿಗಲಿದೆ. ಈ ರಿಯಾಲಿಟಿ ಶೋ ಸಂಜೆ 7.30ಕ್ಕೆ ಪ್ರಸಾರ ಕಾಣಲಿದೆ. ಕೇವಲ ಸ್ಪರ್ಧೆ ಮಾತ್ರವಲ್ಲದೆ, ಸ್ಪರ್ಧಿಗಳು ತಾವು ನಡೆದು ಬಂದ ಕಷ್ಟದ ಹಾದಿಯನ್ನು ಕೂಡ ನೆನಪಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.