‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 37: ರಾಮ್ ತಾತ ಸೂರ್ಯ ಪ್ರಕಾಶ್ ಅವರು ಯಾರಿಗೂ ಹೇಳದೇ ಆಫೀಸ್ ಗೆ ಬರುತ್ತಾರೆ. ಜೊತೆಗೆ ಸೀತಾಳ ಟಿಫನ್ ಬಾಕ್ಸ್ ಅನ್ನು ತಂದು ಅವಳ ಮುಂದೆ ನಾಟಕವಾಡುತ್ತಾ ರಾಮನಿಗೆ ಅವಮಾನ ಮಾಡುತ್ತಾರೆ. ಅದಕ್ಕೆಲ್ಲಾ ಏನು ಹೇಳದ ರಾಮ್ ತಾತ ಅಡ್ವಾನ್ಸ್ ಸ್ಯಾಲರಿ ಕೊಡುವುದಕ್ಕೆ ಓಕೆ ಎಂದಿದ್ದಕ್ಕೆ ಖುಷಿ ಪಡುತ್ತಾನೆ. ಅಶೋಕ್ ಮತ್ತು ಸೂರಿ ಸೀತಾಳ ಬಗ್ಗೆ ಹೇಳಿಕೊಂಡು ರಾಮನನ್ನು ಆಡಿಕೊಳ್ಳುತ್ತಾರೆ. ಇನ್ನು ಸೀತಾ ತನ್ನ ಟಿಫನ್ ಬಾಕ್ಸ್ ಸಿಕ್ಕ ಖುಷಿಯಲ್ಲಿರುತ್ತಾಳೆ. ಇದೇ ರೀತಿ ಒಂದು ಬಾಡಿಗೆ ಮನೆ ಸಿಕ್ಕರೆ ಸಾಕು ಎಂದುಕೊಳ್ಳುತ್ತಾಳೆ. ಅದಕ್ಕೆ ರಾಮ್ ಸೀತಾಳಿಗೆ ನಿಮ್ಮ ಮನೆ ಕೂಡ ಉಳಿಯಬಹುದು ಎನ್ನುತ್ತಾನೆ. ಅದಕ್ಕೆ, ದೇವರ ನಿರ್ಧಾರ ಹೇಗಿದ್ದರೂ ನಾನು ಒಪ್ಪಿಕೊಳ್ಳುತ್ತೇನೆ ಎನ್ನುತ್ತಾಳೆ ಸೀತಾ.
ಅಡ್ವಾನ್ಸ್ ಸ್ಯಾಲರಿ (ಮುಂಗಡ ಸಂಬಳ) ಕೊಡುವ ಬಗ್ಗೆ ಬಾಸ್ ಅನುಮೋದಿಸಿರುವುದನ್ನು ಕೇಳಿ ಸೀತಾ ಸಂತೋಷಪಡುತ್ತಾಳೆ. ಜೊತೆಗೆ ರಾಮನಿಗೂ ಕೂಡ ಬೇಗ ಒಂದು ಮದುವೆಯಾಗಲಿ ಎಂದು ಹರಸುತ್ತಾಳೆ. ಇನ್ನು ಸೀತಾಳ ಬಗ್ಗೆ ಅಜ್ಜಿ ಹೇಳಿದ ಮಾತು ಸಿಹಿಯ ಚಿಂತೆಗೆ ಕಾರಣವಾಗುತ್ತದೆ. ತನ್ನ ಅಮ್ಮ ಮಾತ್ರ ದುಡಿದು ತನ್ನನ್ನು ಸಾಕುತ್ತಿದ್ದಾಳೆ ಎಂಬುದು ಅವಳನ್ನು ಯೋಚನೆಗೆ ದುಡಿರುತ್ತದೆ.
ಇದನ್ನೂ ಓದಿ:ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ; ಹೆಚ್ಚಿತು ‘ಗೀತಾ’ ಸೀರಿಯಲ್ ಟಿಆರ್ಪಿ
ಭಾರ್ಗವಿಗೆ ಅಡ್ವಾನ್ಸ್ ಸ್ಯಾಲರಿ ಬಗ್ಗೆ ತಿಳಿದು ಚರಣ್ ಡಿ ಗೆ ಫೋನ್ ಮಾಡಿ ಸೀತಾಗೆ ಹಣ ನೀಡಬೇಡಿ ಎಂದು ಹೇಳುತ್ತಾಳೆ. ರಾಮ್ ಮೆಚ್ಚಿರುವ ಹುಡುಗಿ ಸೀತಾ ಎಂಬುದು ಭಾರ್ಗವಿಗೆ ತಿಳಿಯುತ್ತಾ? ಅಡ್ವಾನ್ಸ್ ಸ್ಯಾಲರಿ ಸೀತಾಳ ಕೈ ತಪ್ಪಿ ಹೋಗುತ್ತಾ? ಕಾದು ನೋಡೋಣ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ