‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 39- 40: ರುದ್ರಪ್ರತಾಪನ ಸಂಚಿಗೆ ಸೀತಾ ಬಲಿಯಾಗುವಷ್ಟರಲ್ಲಿ ರಾಮ್ ಅವಳನ್ನು ಕಾಪಾಡುತ್ತಾನೆ. ಸೀತಾಳಿಗೆ ಹೋದ ಉಸಿರು ಬಂದಂತಾಗುತ್ತದೆ. ರಾಮನನ್ನು ಬೈದಿದ್ದಕ್ಕೆ ಸೀತಾ ಕ್ಷಮೆ ಕೇಳಿ ಸಹಾಯ ಮಾಡಿದ್ದಕ್ಕೆ ಧನ್ಯವಾದ ಹೇಳುತ್ತಾಳೆ. ಜೊತೆಗೆ ಈ ಲಾಯರ್ನಿಂದ ನಿಮಗೇನಾದರೂ ಸಹಾಯ ಆಗುತ್ತಾ? ಎಂದಿದ್ದಕ್ಕೆ ಸೀತಾ ಹಿಂದೆ ಅವರು ಸಂಬಂಧ ಬೆಳೆಸಲು ಬಂದಿದ್ದು, ಜೊತೆಗೆ ಅವಳ ಅತ್ತಿಗೆಯ ಬಗ್ಗೆ ಎಲ್ಲ ವಿಷಯವನ್ನು ಹೇಳುತ್ತಾಳೆ.
ಸೀತಾ ಮತ್ತು ರಾಮ್ ಇಬ್ಬರೂ ಜೊತೆಗೆ ಮನೆಗೆ ಬರುತ್ತಾರೆ. ಮನೆಗೆ ಬಂದು ಸೀತಾ, ಸಿಹಿಯನ್ನು ಹುಡುಕುತ್ತಾಳೆ. ಆದರೆ ಅವಳು ಎಲ್ಲೂ ಕಾಣದಿದ್ದಾಗ ವಠಾರವನ್ನೆಲ್ಲಾ ಹುಡುಕುತ್ತಾಳೆ. ಆಗ ಒಬ್ಬರ ಮನೆಯಲ್ಲಿ ಸಿಹಿ ಕಸ ಗುಡಿಸುವುದು ಸೀತಾಳ ಕಣ್ಣಿಗೆ ಬೀಳುತ್ತದೆ. ಅದನ್ನು ನೋಡಿ ಗಾಬರಿಗೊಂಡ ಸೀತಾ ಮಗಳನ್ನು ಗದರುತ್ತಾಳೆ. ರಾಮ್ ಸಿಹಿಗೆ ಸಮಾಧಾನ ಮಾಡುತ್ತಾನೆ. ಆದರೆ ಅವಳು ಅದನ್ನೆಲ್ಲಾ ಕೇಳುವ ಪರಿಸ್ಥಿತಿಯಲ್ಲಿರುವುದಿಲ್ಲ.
ಸೀತಮ್ಮನಿಗೆ ಸಹಾಯ ಮಾಡಲು ನಾನು ಕೆಲಸ ಮಾಡುತ್ತೇನೆ ಎನ್ನುತ್ತಾಳೆ. ಆದರೂ ಅವಳನ್ನು ರಾಮ್ ಸಮಾಧಾನ ಪಡಿಸುತ್ತಾನೆ. ಸಿಹಿ ಅಮ್ಮನ ಬಳಿ ಕ್ಷಮೆಯನ್ನೂ ಕೇಳುತ್ತಾಳೆ. ಮಕ್ಕಳು ಕಷ್ಟಪಟ್ಟರೆ ಅಮ್ಮನಿಗೆ ಇಷ್ಟವಾಗಲ್ಲ. ಹಾಗೆ ಅಮ್ಮ ಕಷ್ಟ ಪಟ್ಟರೂ ಕೂಡ ಮಕ್ಕಳಿಗೆ ಇಷ್ಟವಾಗಲ್ಲ ಎನ್ನುತ್ತಾಳೆ. ಅಮ್ಮ ದುಡಿಯದಿದ್ದರೆ ಮನೆ ಉಳಿಸಿಕೊಳ್ಳುವುದು ಕಷ್ಟ ಎಂಬುದು ಸಿಹಿಗೆ ತಿಳಿದಿರುತ್ತದೆ. ಹಾಗಾಗಿ ಈ ಕೆಲಸ ಮಾಡಿದ್ದೇನೆ, ನಮ್ಮ ಮನೆ ನಮ್ಮದೇ ಅಲ್ಲವಾ? ಎನ್ನುತ್ತಾಳೆ. ಅದಕ್ಕೆ ರಾಮ್ ನಿನ್ನ ಮನೆ ಬಗ್ಗೆ ಚಿಂತೆ ಮಾಡಬೇಡ. ಅದು ನಿನ್ನದು ಮಾತ್ರ ಎನ್ನುತ್ತಾನೆ. ಅವನ ಮಾತಿಗೆ ಸಮಾಧಾನ ಮಾಡಿಕೊಂಡ ಸಿಹಿ, ಸೀತಾಳನ್ನು ಸಮಾಧಾನ ಮಾಡುತ್ತಾಳೆ.
ಮನೆಗೆ ಬಂದ ರಾಮ್ ಚಿಕ್ಕಪ್ಪ ಸತ್ಯನ ಬಳಿ ಹೋಗಿ ನನಗಾಗಿ ಕುಡಿಯುವುದನ್ನು ಬಿಟ್ಟು ಬಿಡಿ ಎನ್ನುತ್ತಾನೆ. ಅವನ ಮೇಲಿರುವ ಪ್ರೀತಿಯಿಂದ ಸತ್ಯ ಕೂಡ ಅದಕ್ಕೆ ಒಪ್ಪಿಕೊಳ್ಳುತ್ತಾನೆ. ಚಿಕ್ಕಪ್ಪನ ರೂಮಿನಿಂದ ರಾಮ್ ಹೊರಬರುವುದನ್ನು ನೋಡಿದ ಭಾರ್ಗವಿ ಏನು ಮಾತನಾಡಿರಬಹುದು ಎಂದು ಯೋಚಿಸುತ್ತಾಳೆ. ರಾಮ್ ಸೀತಾಳಿಗೆ ಫೋನ್ ಮಾಡಿ ಸಿಹಿಯ ಬಗ್ಗೆ ವಿಚಾರಿಸುತ್ತಾನೆ. ಇನ್ನು ಭಾರ್ಗವಿ ಕೂಡ ರಾಮನನ್ನು ಓಲೈಸುವುದಕ್ಕಾಗಿ ನಾಟಕವಾಡುತ್ತಾಳೆ. ಹಿಂದಿನ ನೆನಪುಗಳನ್ನು ಕೆದಕಿ ಅವನಿಗೆ ಹಳೆಯ ನೆನಪಾಗುವವಂತೆ ಮಾಡುತ್ತಾಳೆ. ಜೊತೆಗೆ ಯಾವ ವಿಷಯವನ್ನು ನೀನು ನನಗೆ ಹೇಳುವುದಿಲ್ಲ ಎಂದು ದೂರುತ್ತಾಳೆ. ಆದರೆ ಅದಕ್ಕೆ ರಾಮನದ್ದು ಯಾವುದೇ ಉತ್ತರವಿರುವುದಿಲ್ಲ. ಅದೇ ಸರಿಯಾದ ಸಮಯ ಎಂದುಕೊಂಡ ಭಾರ್ಗವಿ ನಾಳೆ ಒಂದು ದಿನ ಆಫೀಸ್ ಗೆ ಹೋಗಬೇಡ ಎನ್ನುತ್ತಾಳೆ. ಅವಳ ಮಾತಿಗೆ ಕಟ್ಟುಬಿದ್ದ ರಾಮ್ ಅದಕ್ಕೆ ಒಪ್ಪಿಕೊಳ್ಳುತ್ತಾನೆ.
ಇದನ್ನೂ ಓದಿ: ಟಿಆರ್ಪಿ ವಿವರ: ಎರಡನೇ ಸ್ಥಾನದಲ್ಲೇ ಮುಂದುವರಿದ ‘ಸೀತಾ ರಾಮ’; ಟಾಪ್ 5 ಧಾರಾವಾಹಿಗಳಿವು..
ಇನ್ನು ಸೀತಾ ಮತ್ತು ರಾಮ್ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆಮಾಡಿರುತ್ತದೆ. ಸಿಹಿ ಕೃಷ್ಣನಾಗಿ ಮನೆಯನ್ನೇ ಗೋಕುಲ ಮಾಡಿಕೊಳ್ಳುತ್ತಾಳೆ. ಆದರೆ ರಾಮ್ ಮನೆಯಲ್ಲಿ, ಭಾರ್ಗವಿ ಮಾತ್ರ ರಾಮ್ ಆಫೀಸ್ ಗೆ ಹೋಗುವುದಿಲ್ಲ ಎಂಬುದನ್ನು ಬಳಸಿಕೊಂಡು ತನ್ನ ಕೆಲಸ ಮಾಡಿ ಎಂದು ಮ್ಯಾನೇಜರ್ ಚರಣ್ ಗೆ ತಿಳಿಸುತ್ತಾಳೆ. ಅದರಲ್ಲಿ ಸೀತಾಳಿಗೆ ದುಡ್ಡು ಕೊಡುವುದನ್ನು ನಿಲ್ಲಿಸಬೇಕು ಎಂಬುದೂ ಸೇರಿರುತ್ತದೆ. ಭಾರ್ಗವಿಯ ಮೋಸ ಅಶೋಕ್ ನಿಗೆ ತಿಳಿಯುತ್ತಾ? ಸೀತಾಗೆ ತಲುಪಬೇಕಾದ ಹಣ ಅವಳ ಕೈಗೆ ತಲುಪುತ್ತಾ? ಕಾದು ನೋಡೋಣ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ