Seetha Raama: ಸೀತಾ ಮತ್ತು ಸಿಹಿ ನೋಡಲು ರಾಮ್ ಬರುತ್ತಾನಾ? ಭಾರ್ಗವಿಗೆ ಶ್ರೀರಾಮನ ಗೆಳೆತನದ ಬಗ್ಗೆ ತಿಳಿಯುತ್ತಾ?

ಚಿಕ್ಕಿಯ ಕಣ್ಣು ತಪ್ಪಿಸಿ, ರಾಮ್ ಮತ್ತು ಅಶೋಕ್ ಇಬ್ಬರೂ ಪೂಜೆ ಮಾಡುವ ಜಾಗದಿಂದ ಕಾಣೆಯಾಗುತ್ತಾರೆ. ಇನ್ನು ಸೀತಾ ಮತ್ತು ಸಿಹಿ ಕೃಷ್ಣ, ಯಶೋದೆಯಾಗಿ ನೃತ್ಯ ಮಾಡುತ್ತಾರೆ. ಸೀತಾ ಮತ್ತು ಸಿಹಿ ನೋಡಲು ರಾಮ ಬರುತ್ತಾನಾ? ಭಾರ್ಗವಿಗೆ ಶ್ರೀರಾಮನ ಗೆಳೆತನದ ಬಗ್ಗೆ ತಿಳಿಯುತ್ತಾ? ಕಾದು ನೋಡೋಣ.

Seetha Raama: ಸೀತಾ ಮತ್ತು ಸಿಹಿ ನೋಡಲು ರಾಮ್ ಬರುತ್ತಾನಾ? ಭಾರ್ಗವಿಗೆ ಶ್ರೀರಾಮನ ಗೆಳೆತನದ ಬಗ್ಗೆ ತಿಳಿಯುತ್ತಾ?
ಗಗನ್​ ಚಿನ್ನಪ್ಪ, ವೈಷ್ಣವಿ ಗೌಡ
Follow us
ಪ್ರೀತಿ ಭಟ್​, ಗುಣವಂತೆ
| Updated By: ಮದನ್​ ಕುಮಾರ್​

Updated on: Sep 09, 2023 | 9:14 AM

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 41: ಸೀತಾ ಮತ್ತು ಸಿಹಿ ಇರುವ ವಠಾರ ನಂದ ಗೋಕುಲವಾಗಿ, ಸಿಹಿ ಬಾಲ ಕೃಷ್ಣನಾಗುತ್ತಾಳೆ. ಜೊತೆಗೆ ತನ್ನ ಮನೆಯವರೊಂದಿಗೆ ಸೇರಿ ಕೃಷ್ಣನ ಬಾಲ್ಯದ ದಿನಗಳ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾ, ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾಳೆ. ಎಲ್ಲದಕ್ಕೂ ಅವಳ ಅಜ್ಜಿ ಉತ್ತರ ಕೊಡುತ್ತಾಳೆ. ಸಿಹಿ ತನ್ನ ಡಾನ್ಸ್ ನೋಡಲು ಫ್ರೆಂಡ್ ಶ್ರೀರಾಮನನ್ನು ಕೆರೆಯುತ್ತೇನೆ ಎನ್ನುತ್ತಾಳೆ. ಸೀತಾ ಏನೆ ಹೇಳಿದರೂ ಅವನನ್ನು ಕರೆಯಲೇ ಬೇಕು ಎಂದು ಹಠ ಮಾಡುತ್ತಾಳೆ.

ಇನ್ನು ಭಾರ್ಗವಿ ಮ್ಯಾನೇಜರ್ ಚರಣ್ ಗೆ ಫೋನ್ ಮಾಡಿ ಸೀತಾಗೆ ಹೋಗುವ ದುಡ್ಡನ್ನು ತಡೆಯಬೇಕು, ನಿಮ್ಮ ಬಾಸ್ ಆಫೀಸಿಗೆ ಬರುವುದಿಲ್ಲ ಎನ್ನುತ್ತಾಳೆ. ಅಷ್ಟೇ ಹೊತ್ತಿಗೆ ಅಲ್ಲಿಗೆ ಬಂದ ಅಶೋಕ್ ಅವರು ತಮ್ಮ ಮ್ಯಾನೇಜರ್ ಜೊತೆಗೆ ಮಾತನಾಡುತ್ತಿರಬಹುದು ಎಂದು ತಿಳಿದು ಅವರಿಗೂ ಕರೆ ಮಾಡಿ ನೋಡುತ್ತಾನೆ. ಅಲ್ಲಿಯೂ ಫೋನ್ ಎಂಗೇಜ್ ಬರುವುದನ್ನು ನೋಡಿ ಭಾರ್ಗವಿ ಮತ್ತು ಚರಣ್ ಮಾತನಾಡುತ್ತಿರಬಹುದು ಎಂದು ಊಹಿಸುತ್ತಾನೆ. ಸ್ಪಷ್ಟವಾಗಿ ಹೇಳುವುದಕ್ಕೆ ಅವನ ಬಳಿ ಯಾವುದೇ ಪುರಾವೆಗಳಿರುವುದುದಿಲ್ಲ. ಹಾಗಾಗಿ ಅವರೇ ಕಳ್ಳರಿರಬಹುದು ಎಂದು ಹೇಳುವುದು ಅಷ್ಟು ಸುಲಭವೂ ಅಲ್ಲ ಎಂಬುದು ಅಶೋಕ್​ಗೆ ತಿಳಿದಿರುತ್ತದೆ.

ಇದನ್ನೂ ಓದಿ: ಟಿಆರ್​ಪಿ ವಿವರ: ಎರಡನೇ ಸ್ಥಾನದಲ್ಲೇ ಮುಂದುವರಿದ ‘ಸೀತಾ ರಾಮ’; ಟಾಪ್ 5 ಧಾರಾವಾಹಿಗಳಿವು..

ಇನ್ನು ಸಿಹಿ ಬಾಲ ಕೃಷ್ಣನಾದ ಮೇಲೆ ಸೀತಾ ಯಶೋದೆ ಆಗಲೇ ಬೇಕಲ್ಲ. ಅದೇ ರೀತಿ ಇಬ್ಬರೂ ಸೇರಿ ಡಾನ್ಸ್ ಮಾಡುವುದಕ್ಕೆ ರೆಡಿ ಆಗುತ್ತಾರೆ. ಸಿಹಿ ಕೂಡ ಫೋನ್ ಮಾಡಿ ರಾಮನನ್ನು ಬರ ಹೇಳುತ್ತಾಳೆ. ರಾಮ್ ಮನೆಯಲ್ಲೂ ಹಬ್ಬದ ಕಳೆ ಕಟ್ಟಿರುತ್ತದೆ. ಆದರೆ ಸಿಹಿ ಹೇಳಿದ ಮೇಲೆ ರಾಮ್​ನಿಗೆ ಬರುವುದಿಲ್ಲ ಎನ್ನಲು ಮನಸ್ಸಾಗುವುದಿಲ್ಲ. ಚಿಕ್ಕಿಯ ಕಣ್ಣು ತಪ್ಪಿಸಿ, ರಾಮ್ ಮತ್ತು ಅಶೋಕ್ ಇಬ್ಬರೂ ಪೂಜೆ ಮಾಡುವ ಜಾಗದಿಂದ ಕಾಣೆಯಾಗುತ್ತಾರೆ. ಇನ್ನು ಸೀತಾ ಮತ್ತು ಸಿಹಿ ಕೃಷ್ಣ, ಯಶೋದೆಯಾಗಿ ನೃತ್ಯ ಮಾಡುತ್ತಾರೆ. ರಾಮ, ಸೀತಾ ಮತ್ತು ಸಿಹಿ ನೋಡಲು ಬರುತ್ತಾನಾ? ಭಾರ್ಗವಿಗೆ ಶ್ರೀರಾಮನ ಗೆಳೆತನದ ಬಗ್ಗೆ ತಿಳಿಯುತ್ತಾ? ಕಾದು ನೋಡೋಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ