ಹಿಂದಿಗೆ ರಿಮೇಕ್ ಆಗ್ತಿದೆ ಕನ್ನಡದ ‘ಸೀತಾ ರಾಮ’ ಧಾರಾವಾಹಿ; ಪ್ರೋಮೋ ವೈರಲ್

| Updated By: ರಾಜೇಶ್ ದುಗ್ಗುಮನೆ

Updated on: Mar 24, 2024 | 6:30 AM

ಜೀ ಟಿವಿಯಲ್ಲಿ ‘ಮೇ ಹೂ ಸಾತ್ ತೆರೆ’ ಧಾರಾವಾಹಿ ಪ್ರಸಾರ ಕಾಣಲಿದೆ. ಸದ್ಯ ಪ್ರೋಮೋಗಳ ಮೂಲಕ ಧಾರಾವಾಹಿ ಗಮನ ಸೆಳೆಯುತ್ತಿದೆ. ಕನ್ನಡದಲ್ಲಿ ಗಗನ್ ಚಿನ್ನಪ್ಪ ಮಾಡಿರೋ ಪಾತ್ರವನ್ನು ಹಿಂದಿಯಲ್ಲಿ ಕರಣ್ ವೋಹ್ರಾ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ಅವರ ಪಾತ್ರವನ್ನು ಉಲ್ಕಾ ಗುಪ್ತಾ ಮಾಡುತ್ತಿದ್ದಾರೆ.

ಹಿಂದಿಗೆ ರಿಮೇಕ್ ಆಗ್ತಿದೆ ಕನ್ನಡದ ‘ಸೀತಾ ರಾಮ’ ಧಾರಾವಾಹಿ; ಪ್ರೋಮೋ ವೈರಲ್
ಸೀತಾ ರಾಮ
Follow us on

ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಸೀತಾ ರಾಮ’ (Seetha Rama Serial) ಧಾರಾವಾಹಿ ಪ್ರೇಕ್ಷಕರ ಮನ ಗೆದ್ದಿದೆ. ಈ ಧಾರಾವಾಹಿಗೆ ಒಳ್ಳೆಯ ಟಿಆರ್​ಪಿ ಸಿಗುತ್ತಿದೆ. ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್, ಪೂಜಾ ಲೋಕೇಶ್, ಅಶೋಕ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈಗ ಈ ಧಾರಾವಾಹಿ ಹಿಂದಿಗೆ ರಿಮೇಕ್ ಆಗುತ್ತಿದೆ. ಇದಕ್ಕೆ ‘ಮೇ ಹೂ ಸಾತ್ ತೆರೆ’ ಎನ್ನುವ ಶೀರ್ಷಿಕೆ ಇಡಲಾಗಿದೆ.

‘ಸೀತಾ ರಾಮ’ ಧಾರಾವಾಹಿ ಮರಾಠಿಯ ‘ಮಜಿ ತುಜಿ ರೆಶಿಮಗತ್’ ಧಾರಾವಾಹಿಯ ಕಥೆಯನ್ನು ಆಧರಿಸಿದೆ. ಜೀ ಮರಾಠಿಯಲ್ಲಿ 2021 ಆಗಸ್ಟ್​ ತಿಂಗಳಿಂದ 2023 ಜನವರಿವರೆಗೆ ಈ ಧಾರಾವಾಹಿ ಪ್ರಸಾರ ಕಂಡಿತ್ತು. ಈ ಧಾರಾವಾಹಿ ಒಟ್ಟೂ 458 ಎಪಿಸೋಡ್​ಗಳನ್ನು ಹೊಂದಿತ್ತು. ಪ್ರಾರ್ಥನಾ ಬೆಹೆರೆ ಹಾಗೂ ಶ್ರೇಯಸ್ ತಲ್ಪಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯನ್ನು ಕನ್ನಡಕ್ಕೆ ‘ಸೀತಾ ರಾಮ’ ಹೆಸರಲ್ಲಿ ರಿಮೇಕ್ ಮಾಡಲಾಯಿತು. ಈಗ ಧಾರಾವಾಹಿ ಹಿಂದಿಗೂ ರಿಮೇಕ್ ಆಗುತ್ತಿದೆ.

ಜೀ ಟಿವಿಯಲ್ಲಿ ‘ಮೇ ಹೂ ಸಾತ್ ತೆರೆ’ ಧಾರಾವಾಹಿ ಪ್ರಸಾರ ಕಾಣಲಿದೆ. ಸದ್ಯ ಪ್ರೋಮೋಗಳ ಮೂಲಕ ಧಾರಾವಾಹಿ ಗಮನ ಸೆಳೆಯುತ್ತಿದೆ. ಕನ್ನಡದಲ್ಲಿ ಗಗನ್ ಚಿನ್ನಪ್ಪ ಮಾಡಿರೋ ಪಾತ್ರವನ್ನು ಹಿಂದಿಯಲ್ಲಿ ಕರಣ್ ವೋಹ್ರಾ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ಅವರ ಪಾತ್ರವನ್ನು ಉಲ್ಕಾ ಗುಪ್ತಾ ಮಾಡುತ್ತಿದ್ದಾರೆ. ಉಲ್ಕಾ ಗುಪ್ತಾ ಅವರು ‘ಜಾನ್ಸಿ ಕಿ ರಾಣಿ’ ಧಾರಾವಾಹಿ ಮೂಲಕ ಫೇಮಸ್ ಆಗಿದ್ದಾರೆ.

ಕಥೆಯಲ್ಲಿ ಕೊಂಚ ಬದಲಾವಣೆ

ಕನ್ನಡದಲ್ಲಿ ಕಥಾ ನಾಯಕಿ ಮಧ್ಯಮ ವರ್ಗದ ಹುಡುಗಿ. ಹಿಂದಿಯಲ್ಲಿ ಕಥಾ ನಾಯಕಿ ಸಿಂಗರ್ ಆಗಬೇಕು ಎಂದು ಕನಸು ಕಾಣುವ ಸಿಂಗಲ್ ಪೇರೇಂಟ್ ಆಗಿ ತೋರಿಸಲಾಗಿದೆ. ಕನ್ನಡದಲ್ಲಿ ಕಥಾ ನಾಯಕ ಉದ್ಯಮಿ. ಹಿಂದಿಯಲ್ಲಿ ಕರಣ್ ಅವರು ಉದ್ಯಮಿಯ ಪಾತ್ರವನ್ನೇ ಮಾಡುತ್ತಿದ್ದಾರೆ. ಕನ್ನಡದಲ್ಲಿ ಕಥಾ ನಾಯಕಿಗೆ ಮಗಳಿದ್ದಾಳೆ. ಹಿಂದಿಯಲ್ಲಿ ಕಥಾ ನಾಯಕಿಗೆ ಮಗ ಇರುವುದಾಗಿ ತೋರಿಸಲಾಗಿದೆ. ‘ಫುಲ್ ಹೌಸ್ ಮೀಡಿಯಾ’ ‘ಮೇ ಹೂ ಸಾತ್ ತೇರೆ’ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಏಪ್ರಿಲ್​ನಿಂದ ಈ ಧಾರಾವಾಹಿ ಪ್ರಸಾರ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ: ‘ಸೀತಾ ರಾಮ’ ಮಾತ್ರವಲ್ಲ ತೆಲುಗಿನ ಈ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ ಗಗನ್ ಚಿನ್ನಪ್ಪ

ಕಥೆ ಏನು?

‘ಸೀತಾ ರಾಮ’ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಸೀತಾ (ವೈಷ್ಣವಿ) ಮಧ್ಯಮ ವರ್ಗದ ಹುಡುಗಿ. ರಾಮ (ಗಗನ್) ಶ್ರೀಮಂತ ವ್ಯಕ್ತಿ. ಸೀತಾಗೆ ಆಗಲೇ ಮದುವೆ ಆಗಿ ಒಂದು ಮಗು (ರೀತು ಸಿಂಗ್) ಇರುತ್ತದೆ. ಆದರೆ, ಸೀತಾಳ ಗಂಡ ಆಕೆಯನ್ನು ಬಿಟ್ಟು ಹೋಗಿರುತ್ತಾನೆ. ಹೀಗಾಗಿ, ಮಗಳನ್ನು ಸಾಕೋ ಜವಾಬ್ದಾರಿ ಸಂಪೂರ್ಣವಾಗಿ ಅವಳದ್ದೇ. ಈಗ ರಾಮ ಹಾಗೂ ಸೀತೆಯ ಮಧ್ಯೆ ಪ್ರೇಮ ಮೂಡಿದೆ. ಇದಕ್ಕೆ ಸಿಹಿ ಸೇತುವೆ ಆಗಿದ್ದಾಳೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ