ಹೊರಬಿತ್ತು ಧಾರಾವಾಹಿ ಟಿಆರ್​ಪಿ ಲಿಸ್ಟ್​; ‘ಗಟ್ಟಿಮೇಳ’-‘ಸೀತಾ ರಾಮ’ ಮಧ್ಯೆ ಭರ್ಜರಿ ಸ್ಪರ್ಧೆ

|

Updated on: Aug 10, 2023 | 1:05 PM

Kannada Serials TRP: ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್ ಮೊದಲಾದವರು ನಟಿಸಿರುವ ‘ಗಟ್ಟಿಮೇಳ’ ಧಾರಾವಾಹಿ ಈಗಲೂ ಭರ್ಜರಿ ಟಿಆರ್​ಪಿ ಗಳಿಸುತ್ತಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆತ್​ಪಿ ರೇಸ್​ನಲ್ಲಿ ಮೊದಲ ಸ್ಥಾನದಲ್ಲಿದೆ. ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ ಎಂಬ ಬಗ್ಗೆ ಇಲ್ಲಿದೆ ವಿವರ. 

ಹೊರಬಿತ್ತು ಧಾರಾವಾಹಿ ಟಿಆರ್​ಪಿ ಲಿಸ್ಟ್​; ‘ಗಟ್ಟಿಮೇಳ’-‘ಸೀತಾ ರಾಮ’ ಮಧ್ಯೆ ಭರ್ಜರಿ ಸ್ಪರ್ಧೆ
ಸೀರಿಯಲ್ ಟಿಆರ್​ಪಿ
Follow us on

ಕನ್ನಡ ಧಾರಾವಾಹಿಗಳ ಮಧ್ಯೆ ಸಖತ್ ಸ್ಪರ್ಧೆ ಏರ್ಪಟ್ಟಿದೆ. ತಮ್ಮ ಧಾರಾವಾಹಿ ಉತ್ತಮವಾಗಿ ಮೂಡಿಬರಬೇಕು ಎನ್ನುವ ಕಾರಣಕ್ಕೆ ತಂಡದವರು ಹೆಚ್ಚು ಮುತುವರ್ಜಿ ವಹಿಸುತ್ತಿದ್ದಾರೆ. ಅದ್ದೂರಿಯಾಗಿ ಧಾರಾವಾಹಿಯನ್ನು ತೆರೆಮೇಲೆ ತರುವ ಪ್ರಯತ್ನ ನಡೆಯುತ್ತಿದೆ. 31ನೇ ವಾರದ ಟಿಆರ್​ಪಿ ಲಿಸ್ಟ್ ಹೊರಬಿದ್ದಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ (Puttakkana Makkalu Serial) ಮೊದಲ ಸ್ಥಾನದಲ್ಲಿದೆ. ಸಾವಿರ ಎಪಿಸೋಡ್​ಗಳನ್ನು ದಾಟಿರುವ ‘ಗಟ್ಟಿಮೇಳ’ (Gattimele Serial) ಎರಡನೇ ಸ್ಥಾನ ಕಾಪಾಡಿಕೊಂಡಿದೆ. ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ ಎಂಬ ಬಗ್ಗೆ ಇಲ್ಲಿದೆ ವಿವರ.

‘ಪುಟ್ಟಕ್ಕನ ಮಕ್ಕಳು’

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಭರ್ಜರಿ ಟಿಆರ್​ಪಿಯೊಂದಿಗೆ ಸಾಗುತ್ತಿದೆ. ಕನ್ನಡ ಕಿರುತೆರೆ ಲೋಕದಲ್ಲಿ ಇತ್ತೀಚಿನ ತಿಂಗಳಲ್ಲಿ ಅತಿ ಹೆಚ್ಚು ಟಿಆರ್​​ಪಿ ರೇಟಿಂಗ್ ಪಡೆದು ಮುನ್ನುಗ್ಗುತ್ತಿರುವ ಉಮಾಶ್ರೀ  ನಟನೆಯ ಈ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಈ ಧಾರಾವಾಹಿಯ ಟಿಆರ್​ಪಿ ಸದ್ಯಕ್ಕಂತೂ ಕಡಿಮೆ ಆಗುವಂಥದ್ದಲ್ಲ.

‘ಗಟ್ಟಿಮೇಳ’

ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್ ಮೊದಲಾದವರು ನಟಿಸಿರುವ ‘ಗಟ್ಟಿಮೇಳ’ ಧಾರಾವಾಹಿ ಈಗಲೂ ಭರ್ಜರಿ ಟಿಆರ್​ಪಿ ಗಳಿಸುತ್ತಿದೆ. ಈ ಧಾರಾವಾಹಿ ಟಾಪ್ ಏಳರಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಕೆಲ ತಿಂಗಳಿಂದ ಈ ಧಾರಾವಾಹಿ ಎರಡನೇ ಸ್ಥಾನ ಕಾಪಾಡಿಕೊಂಡು ಬರುತ್ತಿದೆ.

‘ಸೀತಾ ರಾಮ’

‘ಸೀತಾ ರಾಮ’ ಧಾರಾವಾಹಿ ಇತ್ತೀಚೆಗೆ ಪ್ರಸಾರ ಆರಂಭಿಸಿದೆ. ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಮೊದಲಾದವರು ನಟಿಸಿರುವ ಈ ಧಾರಾವಾಹಿ ಸೂಪರ್ ಹಿಟ್ ಆಗಿದೆ. ರೀತು ಸಿಂಗ್ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ. ಈ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ‘ಗಟ್ಟಿಮೇಳ’ ಹಾಗೂ ‘ಸೀತಾ ರಾಮ’ ಧಾರಾವಾಹಿಯ ಟಿಆರ್​ಪಿಯಲ್ಲಿ ಕೂದಲೆಳೆಯ ಅಂತರ ಇದೆ.

ಇದನ್ನೂ ಓದಿ: ಕಿರುತೆರೆ ಇತಿಹಾಸದಲ್ಲಿ ‘ಅಮೃತಧಾರೆ’ ಹೊಸ ದಾಖಲೆ; ಧಾರಾವಾಹಿ ಹಾಡುಗಳಿಗೊಂದು ಜೂಕ್ ​ಬಾಕ್ಸ್

‘ಅಮೃತಧಾರೆ’

ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಒಟ್ಟಾಗಿ ನಟಿಸುತ್ತಿರುವ ‘ಅಮೃತಧಾರೆ’ ಧಾರಾವಾಹಿ ವೀಕ್ಷಕರಿಂದ ಭೇಷ್ ಎನಿಸಿಕೊಂಡಿದೆ. ಈ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ. ‘ಅಮೃತಧಾರೆ’ ಆರಂಭ ಆದಾಗಿನಿಂದಲೂ ಒಂದೇ ರೀತಿಯ ಟಿಆರ್​ಪಿ ಕಾಪಾಡಿಕೊಂಡು ಸಾಗುತ್ತಿದೆ. ದೊಡ್ಡ ಪಾತ್ರವರ್ಗ ಧಾರಾವಾಹಿಯಲ್ಲಿದೆ.

ಉಳಿದ ಧಾರಾವಾಹಿಗಳು

‘ಸತ್ಯ’ ಧಾರಾವಾಹಿ ಐದನೇ ಸ್ಥಾನದಲ್ಲಿದೆ. ಆರನೇ ಸ್ಥಾನದಲ್ಲಿ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಇದೆ. ಏಳನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇದೆ. ಟಾಪ್ ಆರು ಧಾರಾವಾಹಿಗಳು ಜೀ ಕನ್ನಡದಲ್ಲೇ ಪ್ರಸಾರ ಕಾಣುತ್ತಿವೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ