ಮದುವೆಗೆ ನೋ ಎಂದ ಸೀತಾ; ನೋವಲ್ಲಿ ಮುಳುಗೆದ್ದ ತಾಯಿಗೆ ಸಿಹಿಯ ಪ್ರೀತಿಯೇ ಆಸರೆ

ಭಾರ್ಗವಿ, ರಾಮ್ ಬಳಿ ಉಪಾಯ ಮಾಡಿ ಆಫೀಸ್​ನಲ್ಲಿ ಆಗುವ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವ ಪಯತ್ನ ಮಾಡುತ್ತಿದ್ದಾಳೆ. ಆದರೆ ರಾಮ್ ಗೆಳೆಯ ಅಶೋಕ್ ಇದನ್ನು ತಡೆದಿದ್ದಾನೆ.

ಮದುವೆಗೆ ನೋ ಎಂದ ಸೀತಾ; ನೋವಲ್ಲಿ ಮುಳುಗೆದ್ದ ತಾಯಿಗೆ ಸಿಹಿಯ ಪ್ರೀತಿಯೇ ಆಸರೆ
ಸೀತಾ-ರಾಮ ಧಾರಾವಾಹಿ
Edited By:

Updated on: Jul 29, 2023 | 12:24 PM

ಮುಂದೆ ಏನಾಗಬಹುದು ಎಂಬ ಕುತೂಹಲ ಇದ್ದಾಗಲೇ ಕಥೆ ಗೆಲ್ಲುತ್ತದೆ. ಸದ್ಯ ‘ಸೀತಾ ರಾಮ’ (Seetha Raama Serial) ಧಾರಾವಾಹಿ ಇದೇ ರೀತಿಯಲ್ಲಿ ಬರುತ್ತಿದೆ. ಧಾರವಾಹಿಯಲ್ಲಿ ಹೊಸ ಪಾತ್ರ ಪರಿಚಯವೂ ಆಗುತ್ತಿರುವುದರಿಂದ ಕಥೆಗೆ ಇನ್ನಷ್ಟು ಬಲ ಸಿಕ್ಕಿದೆ. ಆಫೀಸ್​ನಲ್ಲಿ ರಾಮ್ ಮೊದಲ ದಿನ ಆರಂಭಿಸಿದ್ದು ಸತ್ಯ ಶೋಧನೆಗೆ ಹೊಸ ಹೆಜ್ಜೆ ಇಟ್ಟಂತಾಗಿದೆ. ಮಧ್ಯಾಹ್ನದ ಊಟವೂ ಜೊತೆಯಾಗಿ ಆಗಿದೆ.

ಮನೆಯಲ್ಲಿ ತಾತ ಅಜ್ಜಿಯ ಜೊತೆ ಇರುವ ಸಿಹಿಗೆ ಹೆಣ್ಣು ಮಕ್ಕಳ ತವರು ಮನೆಯ ಬಗ್ಗೆ ಪಾಠವೂ ನಡೆಯುತ್ತಿದೆ. ಇನ್ನು ಸೀತಮ್ಮ ಕಚೇರಿ ಕೆಲಸ ಮುಗಿಸಿ ಮನೆಗೆ ಬರುವಾಗ ಸಿಹಿ ಅಜ್ಜಿಯಿಂದ ಮದುವೆ ಒತ್ತಾಯವು ನಡೆದಿದೆ. ಆದರೆ ಅವರದ್ದು ಒಳ್ಳೆ ಉದ್ದೇಶ. ಗಂಡು ದಿಕ್ಕಿಲ್ಲದ ಮನೆಯಲ್ಲಿ ಹೆಣ್ಣು ಒಬ್ಬಳೇ ಇರಲು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯ. ಸೀತಾಳದ್ದು ಇದಕ್ಕೆಲ್ಲಾ ಒಂದೇ ಮಾತು, “ಮದುವೆ, ಜೀವನದ ಸಂಬಂಧ ಆಗಬೇಕೇ ಹೊರತು ಒಪ್ಪಂದ ಆಗಬಾರದು. ನನ್ನ ಬದುಕಲ್ಲಿ ನಾನು ಸಿಹಿ ಅಷ್ಟೇ” ಎಂಬುದು. ಆದರೆ ಇದನ್ನೆಲ್ಲಾ ಕೇಳಿರುವ ಸಿಹಿಗೆ ಅಮ್ಮ ನನ್ನನ್ನು ಬಿಟ್ಟು ಹೋದರೇ ಅನ್ನೋದೆ ಚಿಂತೆ. ಅವಳ ಚಿಂತೆಗೆಲ್ಲಾ ಪರಿಹಾರ ಸಿಗೋ ಮೊದಲೇ ಲಾಯರ್ ಮನೆಗೆ ಬಂದಿದ್ದಾನೆ. ಮದುವೆ ಪ್ರಸ್ತಾಪವನ್ನೂ ಮಾಡಿದ್ದಾನೆ. ಅತ್ತಿಗೆ ಮಾಡಿರೋ ಈ ಉಪಾಯ ಸೀತಾಳಿಗೆ ಇನ್ನಷ್ಟು ಕೋಪ ತರಿಸಿದೆ. ಆದರೆ ಸಿಹಿಯ ಪ್ರೀತಿ ಅವಳ ನೋವನ್ನು ಮರೆಸಿ ಮತ್ತೆ ನಗುವಂತೆ ಮಾಡಿದೆ.

ಇದನ್ನೂ ಓದಿ: ಹೊರಬಿತ್ತು ‘ಸೀತಾ ರಾಮ’ ಟಿಆರ್​ಪಿ; ಟಾಪ್​ 10ರಲ್ಲಿ ಈ ಧಾರಾವಾಹಿಗೆ ಎಷ್ಟನೇ ಸ್ಥಾನ?

ಇನ್ನು ಭಾರ್ಗವಿಗೆ ಆಫೀಸ್ ಲಾಗಿನ್ ಪಾಸ್ವರ್ಡ್ ಬದಲಾಗಿದೆ ಅನ್ನೋದೇ ಸಹಿಸೋದಕ್ಕೆ ಆಗದೇ, ರಾಮ್ ಬಳಿ ಉಪಾಯ ಮಾಡಿ ಆಫೀಸ್ ನಲ್ಲಿ ಆಗುವ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವ ಪಯತ್ನ ಮಾಡುತ್ತಿದ್ದಾಳೆ. ಆದರೆ ರಾಮ್ ಗೆಳೆಯ ಅಶೋಕ್, ಅದನ್ನು ತಡೆದು, ಭಾರ್ಗವಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ. ಮುಂದೇನಾಗಬಹುದು? ರಾಮನಿಗೆ ಕಳ್ಳರ ಸುಳಿವು ಸಿಗಬಹುದಾ? ಸೀತಾ ವರಿಸಲು ಬಂದ ಲಾಯರ್ ಮತ್ತೆ ಬರುತ್ತಾನಾ? ಕಾದು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ