Shamita Shetty: ಗೆಳೆಯ ರಾಕೇಶ್​ಗೆ ಶಮಿತಾ ಪ್ರೀತಿಯ ಕಿಸ್; ಡಿನ್ನರ್ ಡೇಟ್ ಸಂದರ್ಭದ ವಿಡಿಯೋ ವೈರಲ್

Shamita Shetty | Raqesh Bapat: ಶಮಿತಾ ಹಾಗೂ ರಾಕೇಶ್ ಈಗಾಗಲೇ ಜತೆಯಾಗಿ ಓಡಾಡುತ್ತಿದ್ದಾರೆ. ಇಂದು ಶಮಿತಾ ಜನ್ಮದಿನ. ಜತೆಯಾಗಿ ಈರ್ವರೂ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

Shamita Shetty: ಗೆಳೆಯ ರಾಕೇಶ್​ಗೆ ಶಮಿತಾ ಪ್ರೀತಿಯ ಕಿಸ್; ಡಿನ್ನರ್ ಡೇಟ್ ಸಂದರ್ಭದ ವಿಡಿಯೋ ವೈರಲ್
ಶಮಿತಾ ಶೆಟ್ಟಿ, ರಾಕೇಶ್ ಬಾಪಟ್
Updated By: shivaprasad.hs

Updated on: Feb 02, 2022 | 6:44 PM

ಮುಂಬೈ: ‘ಬಿಗ್​ ಬಾಸ್ 15’ರಲ್ಲಿ ಕಾಣಿಸಿಕೊಂಡಿದ್ದ ಶಮಿತಾ ಶೆಟ್ಟಿ (Shamita Shetty) ಪ್ರಶಸ್ತಿ ಗೆಲ್ಲದೇ ಹೋದರೂ ಕೂಡ ಅಪಾರ ಅಭಿಮಾನಿ ಬೆಂಬಲವನ್ನು ಗಳಿಸಿ ಹೊರಬಂದಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡಾಗ ಪರಿಚಯವಾಗಿದ್ದ ಮತ್ತೋರ್ವ ಸ್ಪರ್ಧಿ ರಾಕೇಶ್ ಬಾಪಟ್ (Raqesh Bapat) ಜತೆ ಶಮಿತಾ ಸ್ನೇಹವೂ ಕುದುರಿದೆ. ಅರ್ಥಾತ್ ಇದು ಸ್ನೇಹಕ್ಕಿಂತಲೂ ತುಸು ಹೆಚ್ಚೇ ಎನ್ನುಬಹುದು. ಇದಕ್ಕೆ ಪುಷ್ಠಿ ನೀಡುವಂತೆ ಶಮಿತಾ ಹಾಗೂ ರಾಕೇಶ್ ತಮ್ಮೀರ್ವರ ನಡುವೆ ಸ್ನೇಹಕ್ಕೂ ಮಿಗಿಲಾದ ಬಂಧವಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಇಂದು ಶಮಿತಾ ಜನ್ಮದಿನ. ಈ ಹಿನ್ನೆಲೆಯಲ್ಲಿ ರಾಕೇಶ್ ಹಾಗೂ ಶಮಿತಾ ಜತೆಯಾಗಿ ಕಾಣಿಸಿಕೊಂಡಿರುವುದಲ್ಲದೇ ಜನ್ಮದಿನದ ವಿಶೇಷ ಡೇಟ್​ಗೂ ಹೋಗಿದ್ದಾರೆ. ಈ ಸಂದರ್ಭದ ಚಿತ್ರಗಳನ್ನು ರಾಕೇಶ್ ಬಾಪಟ್ ಹಂಚಿಕೊಂಡಿದ್ದು, ವೈರಲ್ ಆಗಿವೆ.

‘ಹ್ಯಾಪಿ ಬರ್ಥ್​​ಡೇ ಲವ್’ ಎಂದು ಪ್ರೀತಿಯ ವಿಶ್ ಮಾಡಿದ ರಾಕೇಶ್ ಬಾಪಟ್:

ಈ ಹಿಂದೆ ಜತೆಯಾಗಿ ಕಾಣಿಸಿಕೊಂಡು ಕ್ಯಾಮೆರಾಗಳಿಗೆ ಸಖತ್ ಪೋಸ್ ನೀಡಿದ್ದ ಶಮಿತಾ ಹಾಗೂ ರಾಕೇಶ್, ಮೊದಲು ಈರ್ವರೂ ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು. ಈ ಮೂಲಕ ಅಡ್ಡಗೋಡೆಯ ದೀಪವಿರಿಸುವಂತೆ ಹೇಳಿಕೆ ನೀಡಿದ್ದರು. ಇದೀಗ ಬಿಗ್ ಬಾಸ್​ ಫೈನಲ್​ವರೆಗೆ ತಲುಪಿದ್ದ ಶಮಿತಾ ರಾಕೇಶ್ ಜತೆ ಭರ್ಜರಿಯಾಗಿ ಜನ್ಮದಿನವನ್ನು ಆಚರಿಸಿದ್ದಾರೆ. 43ನೇ ವಸಂತಕ್ಕೆ ಕಾಲಿಟ್ಟಿರುವ ಶಮಿತಾಗೆ ‘ಹ್ಯಾಪಿ ಬರ್ಥ್​ಡೆ ಲವ್’ ಎಂದು ಬರೆದು ಪೋಸ್ಟ್ ಶೇರ್ ಮಾಡಿರುವ ರಾಕೇಶ್ ಶುಭಾಶಯ ಕೋರಿದ್ದಾರೆ.

ವಿಶೇಷವೆಂದರೆ ರಾಕೇಶ್ ಶಮಿತಾರನ್ನು ಎತ್ತಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಇದಲ್ಲದೇ ಈರ್ವರೂ ಆಲಂಗಿಸಿಕೊಂಡಿರುವ ಚಿತ್ರಗಳೂ ಅಭಿಮಾನಿ ಖಾತೆಗಳಲ್ಲಿ ವೈರಲ್ ಆಗಿವೆ. ಹುಟ್ಟುಹಬ್ಬವನ್ನು ರಾಕೇಶ್ ಜತೆ ಪಾರ್ಟಿಯಲ್ಲಿ ಭಾಗವಹಿಸುವ ಮೂಲಕ ಶಮಿತಾ ಆಚರಿಸಿದ್ದಾರೆ. ಈ ಸಂದರ್ಭದ ಚಿತ್ರಗಳು ಇವಾಗಿವೆ.

ರಾಕೇಶ್ ಬಾಪಟ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಶಮಿತಾ ಹಾಗೂ ರಾಕೇಶ್ ತಮ್ಮ ಡೇಟ್ ಸಂದರ್ಭದಲ್ಲಿ ಪಾಪರಾಜಿಗಳಿಗೆ ಭರ್ಜರಿ ಪೋಸ್ ನೀಡಿದ್ದಾರೆ. ಅಲ್ಲದೇ ಈರ್ವರೂ ಆಲಂಗಿಸಿಕೊಂಡು ಕಿಸ್ ಮಾಡಿದ್ದಾರೆ. ಈ ಮೂಲಕ ತಾವೀರ್ವರೂ ಮತ್ತಷ್ಟು ಹತ್ತಿರವಾಗಿರುವುದನ್ನು ಸಾರಿದ್ದಾರೆ. ಅಭಿಮಾನಿಗಳು ಸೇರಿದಂತೆ ಖ್ಯಾತ ತಾರೆಯರು ಈ ಚಿತ್ರಗಳಿಗೆ ಕಾಮೆಂಟ್ ಮಾಡಿದ್ದು, ಶಮಿತಾಗೆ ಜನ್ಮದಿನದ ಶುಭಾಶಯ ಹೇಳಿದ್ದಾರೆ.

ರಾಕೇಶ್​ಗೆ ಶಮಿತಾ ಪ್ರೀತಿಯ ಕಿಸ್; ವಿಡಿಯೋ ಇಲ್ಲಿದೆ:

ಬಿಗ್ ಬಾಸ್​​ನಲ್ಲಿ ಶಮಿತಾ ವಿವಿಧ ಕಾರಣಗಳಿಗೆ ಸುದ್ದಿಯಾಗಿದ್ದರು. ಶೋನಲ್ಲಿ ಶಮಿತಾಗೆ ಬಾಡಿ ಶೇಮಿಂಗ್ ಕೂಡ ಎದುರಾಗಿತ್ತು. ಇದೆಲ್ಲವನ್ನೂ ದಾಟಿ ಫೈನಲ್ ತಲುಪಿದ ಶಮಿತಾಗೆ ರಾಕೇಶ್ ‘‘ನಿನ್ನ ಬಗ್ಗೆ ಹೆಮ್ಮೆ ಇದೆ’’ ಎಂದು ಇತ್ತೀಚೆಗೆ ಪೋಸ್ಟ್ ಹಂಚಿಕೊಂಡಿದ್ದರು.

ಇದನ್ನೂ ಓದಿ:

ರಿಲೀಸ್ ಡೇಟ್​​ ಘೋಷಿಸಿಕೊಂಡ ಅಜಿತ್​ ‘ವಲಿಮೈ’ ಚಿತ್ರ; ಕನ್ನಡ ಸಿನಿಮಾಗಳು ನೀಡಲಿವೆ ಪೈಪೋಟಿ

Shiva Rajkumar: ‘ಜೇಮ್ಸ್’ನಲ್ಲಿ ಪುನೀತ್ ಪಾತ್ರಕ್ಕೆ ಯಾರ ಧ್ವನಿ? ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ