‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶೋಭಾ ಶೆಟ್ಟಿ ಅವರು ಎಲಿಮಿನೇಟ್ ಆಗುವ ನಿರ್ಧಾರ ತೆಗೆದುಕೊಂಡರು. ಈ ನಿರ್ಧಾರದಿಂದ ಎಲಿಮಿನೇಟ್ ಆಗುವ ಹಂತದಲ್ಲಿ ಇದ್ದ ಶಿಶಿರ್ ಹಾಗೂ ಐಶ್ವರ್ಯಾ ಪೈಕಿ ಒಬ್ಬರು ಎಲಿಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಈ ಮೊದಲು ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಶೋಭಾ ತ್ಯಾಗದಿಂದ ಕಂಗಾಲಾಗಿರುವ ಶಿಶಿರ್ ಹಾಗೂ ಐಶ್ವರ್ಯಾಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ.
ಎಲಿಮಿನೇಷನ್ ಪ್ರಕ್ರಿಯೆ ಕೊನೆಯ ಹಂತದಲ್ಲಿ ಇತ್ತು. ಐಶ್ವರ್ಯಾ ಹಾಗೂ ಶಿಶಿರ್ ಅವರು ಕೊನೆಯದಾಗಿ ಉಳಿದುಕೊಂಡಿದ್ದರು. ಇಬ್ಬರೂ ಒಳ್ಳೆಯ ಫ್ರೆಂಡ್ಸ್. ಯಾರೇ ಎಲಿಮಿನೇಟ್ ಆಗಿದ್ದರೂ ಅದು ಮತ್ತೊಬ್ಬರ ಮೇಲೆ ಪ್ರಭಾವ ಬೀರುತ್ತಿತ್ತು. ಅದರಲ್ಲೂ ಐಶ್ವರ್ಯಾಗೆ ತಾವೇ ಹೊರ ಹೊಗುವುದು ಎನ್ನುವ ಭಯ ಬಹುವಾಗಿ ಕಾಡಿತ್ತು. ಈ ಕಾರಣಕ್ಕೆ ಅವರು ಕಣ್ಣೀರು ಹಾಕುತ್ತಿದ್ದರು. ಆಗ ನಡೆದಿತ್ತು ಮ್ಯಾಜಿಕ್.
ಶೋಭಾ ಶೆಟ್ಟಿ ಅವರು ತಾವೇ ಮನೆಯಿಂದ ಹೊರ ಹೋಗುವುದಾಗಿ ಸುದೀಪ್ ಬಳಿ ಹೇಳಿದರು. ಆದರೆ, ಇದಕ್ಕೆ ಸುದೀಪ್ ಆರಂಭದಲ್ಲಿ ಒಪ್ಪಿಗೆ ಕೊಟ್ಟಿರಲಿಲ್ಲ. ಆ ಬಳಿಕ ಇದಕ್ಕೆ ಅವರು ಸಮ್ಮತಿ ಕೊಟ್ಟರು. ಶೋಭಾ ಶೆಟ್ಟಿ ಹೊರ ಹೋದ ಬಳಿಕ ಶಿಶಿರ್ ಹಾಗೂ ಐಶ್ವರ್ಯಾ ನಿಟ್ಟುಸಿರು ಬಿಟ್ಟಿದ್ದಾರೆ.
‘ಅವರು ಕಂಗ್ರಾಜ್ಯುಲೇಶನ್ ಎಂದಾಗ ಖುಷಿಪಡಬೇಕೋ ಅಥವಾ ಬೇಸರ ಮಾಡಿಕೊಳ್ಳಬೇಕೋ ಗೊತ್ತಾಗಲಿಲ್ಲ. ಇದನ್ನು ಭಿಕ್ಷೆ ಅಂದುಕೊಳ್ಳಬೇಕಾ’ ಎಂದು ಶಿಶಿರ್ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಂಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಬೇಕು ಎನ್ನುವ ಛಲ ಅವರಿಗೆ ಬಂದಿದೆ. ಐಶ್ವರ್ಯಾ ಅವರಿಗೂ ಇದೇ ರೀತಿ ಅನಿಸಿದೆ.
ಇದನ್ನೂ ಓದಿ: ಬಿಗ್ಬಾಸ್ನಿಂದ ಬಂದು ಕಿಚ್ಚ ಸುದೀಪ್ ಉದ್ದೇಶಿಸಿ ಪೋಸ್ಟ್ ಹಾಕಿದ ಶೋಭಾ ಶೆಟ್ಟಿ
ಒಂದೊಮ್ಮೆ ಶೋಭಾ ಶೆಟ್ಟಿ ಹೊರ ಹೋಗುವ ನಿರ್ಧಾರ ಮಾಡದೆ ಇದ್ದಿದ್ದರೆ ಶಿಶಿರ್ ಅಥವಾ ಐಶ್ವರ್ಯಾ ಪೈಕಿ ಒಬ್ಬರು ಎಲಿಮಿನೇಟ್ ಆಗುತ್ತಿದ್ದರು. ಶಿಶಿರ್ಗೆ ಹೋಲಿಕೆ ಮಾಡಿದರೆ ಐಶ್ವರ್ಯಾಗೆ ಕಡಿಮೆ ವೋಟ್ ಬಿದ್ದಿರೋ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಅವರೇ ಎಲಿಮಿನೇಟ್ ಆಗಿದ್ದರೂ ಅಚ್ಚರಿ ಏನಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.