ಶಿವಣ್ಣನ ಎದುರು ಖಡಕ್ ಡೈಲಾಗ್ ಹೇಳಿದ ಬಾಲಕಿ; ಶಿವರಾಜ್​ಕುಮಾರ ರಿಯಾಕ್ಷನ್ ಹೇಗಿತ್ತು?

|

Updated on: May 13, 2023 | 3:24 PM

ಬೆಂಗಳೂರಿನ ಲೇಖನಾ ಹೆಸರಿನ ಆರು ವರ್ಷದ ಬಾಲಕಿ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾಳೆ. ಅವಳ ಡ್ಯಾನ್ಸ್ ನೋಡಿ ಕಾರ್ಯಕ್ರಮದ ಜಡ್ಜ್​​ಗಳು ಮೆಚ್ಚಿಕೊಂಡಿದ್ದಾರೆ.

ಶಿವಣ್ಣನ ಎದುರು ಖಡಕ್ ಡೈಲಾಗ್ ಹೇಳಿದ ಬಾಲಕಿ; ಶಿವರಾಜ್​ಕುಮಾರ ರಿಯಾಕ್ಷನ್ ಹೇಗಿತ್ತು?
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಆಡಿಷನ್
Follow us on

ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಹಲವು ರಿಯಾಲಿಟಿ ಶೋಗಳು ಪ್ರಸಾರ ಕಂಡಿವೆ. ಈ ಕಾರ್ಯಕ್ರಮಗಳ ಮೂಲಕ ಹಲವು ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ. ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಒಂದೊಳ್ಳೆಯ ವೇದಿಕೆ ಸಿಕ್ಕಿದೆ. ಈಗ ಜೀ ಕನ್ನಡ ವಾಹಿನಿಯಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ ಸೀಸನ್ 7’  (DKD 7) ಆರಂಭ ಆಗುತ್ತಿದೆ. ಇದರ ಮೆಗಾ ಆಡಿಷನ್ ನಡೆದಿದ್ದು, ಇಂದು (ಮೇ 13) ಪ್ರಸಾರ ಕಾಣಲಿದೆ. ಈ ಶೋನಲ್ಲಿ ಶಿವರಾಜ್​ಕುಮಾರ್ (Shivarajkumar) ಅವರು ಜಡ್ಜ್ ಆಗಿ ಭಾಗಿ ಆಗಿದ್ದಾರೆ. ಪುಟ್ಟ ಬಾಲಕಿ ಹೇಳಿದ ಡೈಲಾಗ್​ ಕೇಳಿ ಅವರು ಖುಷಿಪಟ್ಟಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​’ ರಿಯಾಲಿಟಿ ಶೋ ಆರು ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಹಲವು ಪ್ರತಿಭೆಗಳು ಈ ವೇದಿಕೆ ಮೇಲೆ ಬಂದಿದ್ದಾರೆ. ಈಗ ಹೊಸ ಸೀಸನ್ ಆರಂಭ ಆಗುತ್ತಿದೆ. ಇದಕ್ಕೆ ಮೆಗಾ ಆಡಿಷನ್ ಕೂಡ ನಡೆದಿದೆ. ಹಲವು ಪ್ರತಿಭೆಗಳು ಈ ಸೀಸನ್​ಗೆ ಬರುತ್ತಿದ್ದಾರೆ.

ಬೆಂಗಳೂರಿನ ಲೇಖನಾ ಹೆಸರಿನ ಆರು ವರ್ಷದ ಬಾಲಕಿ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾಳೆ. ಅವಳ ಡ್ಯಾನ್ಸ್ ನೋಡಿ ಕಾರ್ಯಕ್ರಮದ ಜಡ್ಜ್​​ಗಳು ಮೆಚ್ಚಿಕೊಂಡಿದ್ದಾರೆ. ವೇದಿಕೆ ಮೇಲೆ ಕುಳಿತಿದ್ದ ಚಿನ್ನಿ ಪ್ರಕಾಶ್ ಮಾಸ್ಟರ್ ಕೂಡ ಲೇಖನಾಳನ್ನು ಹೊಗಳಿದರು. ಶಿವರಾಜ್​ಕುಮಾರ್ ಅವರು ಲೇಖನಾ ಅವಳನ್ನು ಎತ್ತಿಕೊಂಡಿದ್ದಾರೆ. ಈ ವೇಳೆ ಆಕೆ ಶಿವಣ್ಣನ ಡೈಲಾಗ್ ಹೇಳಿದ್ದಾಳೆ.

ಇದನ್ನೂ ಓದಿ:  ಹೆಚ್ಚಾದ ಆಕ್ರೋಶ; ಶಿವರಾಜ್​ಕುಮಾರ್ ಬಗ್ಗೆ ಹೇಳಿದ ಮಾತು ಹಿಂಪಡೆದ ಪ್ರಶಾಂತ್ ಸಂಬರ್ಗಿ

‘ಇದಕ್ಕೆ ಅಂಥ ಒಂದು ಸ್ಟೈಲ್ ಇದೆ, ಏನ್ ಹೇಳು ಒಂದು ಗ್ರಿಪ್ ಇದೆ’ ಎಂದು ಖಡಕ್ ಆಗಿ ಡೈಲಾಗ್ ಹೇಳಿದ್ದಾಳೆ ಲೇಖನಾ. ಅವಳ ಡೈಲಾಗ್ ಕೇಳಿ ಶಿವರಾಜ್​ಕುಮಾರ್ ಅವರು ಮೆಚ್ಚಿಕೊಂಡಿದ್ದಾರೆ. ಅವರಿಗೆ ಸಖತ್ ಖುಷಿ ಆಗಿದೆ. ಈ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ‘ಡಿಕೆಡಿ ವೇದಿಕೆಯಲ್ಲಿ ಸಂಚಲನ ಸೃಷ್ಟಿಸಿದ ಮಂಡ್ಯದ ಅಂಜಲಿ ಮತ್ತು ಬೆಂಗಳೂರಿನ ಲೇಖನಾ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 ಮೆಗಾ ಆಡಿಷನ್. ಇಂದು ರಾತ್ರಿ 7.30ಕ್ಕೆ’ ಎಂದು ಕ್ಯಾಪ್ಶನ್ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:23 pm, Sat, 13 May 23