ಕ್ಯಾಪ್ಟನ್ ಆದರೂ ಭವ್ಯಾ ಗೌಡಗೆ ಇಲ್ಲ ಅಧಿಕಾರ; ಎಲ್ಲವನ್ನೂ ಕಸಿದುಕೊಂಡ ಶೋಭಾ ಶೆಟ್ಟಿ

ಬಿಗ್ ಬಾಸ್ ಕನ್ನಡದಲ್ಲಿ ಈ ವಾರ ಕ್ಯಾಪ್ಟನ್ ಆಗಿದ್ದ ಭವ್ಯಾ ಗೌಡ ಅವರ ಅಧಿಕಾರವನ್ನು ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ ಕಸಿದುಕೊಂಡಿದ್ದಾರೆ. ಇದರಿಂದ ಭವ್ಯಾ ಅವರಲ್ಲಿ ಕೋಪ ಉಂಟಾಗಿದೆ. ಶೋಭಾ ಮತ್ತು ರಜತ್ ಅವರಿಗೆ ವಿಶೇಷ ಅಧಿಕಾರ ನೀಡಲಾಗಿದೆ, ಅಡುಗೆ ಮನೆ ವಿಭಾಗಗದ ಮೇಲೆ ಅವರಿಗೆ ನಿಯಂತ್ರಣ ಇದೆ.

ಕ್ಯಾಪ್ಟನ್ ಆದರೂ ಭವ್ಯಾ ಗೌಡಗೆ ಇಲ್ಲ ಅಧಿಕಾರ; ಎಲ್ಲವನ್ನೂ ಕಸಿದುಕೊಂಡ ಶೋಭಾ ಶೆಟ್ಟಿ
ಶೋಭಾ-ಭವ್ಯಾ

Updated on: Nov 19, 2024 | 7:30 AM

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆದವರಿಗೆ ವಿಶೇಷ ಅಧಿಕಾರ ಇರುತ್ತದೆ. ಮನೆಯಲ್ಲಿ ಎಲ್ಲವೂ ಇವರ ಆಣತಿಯಂತೆ ನಡೆಯುತ್ತದೆ. ಯಾವ ವಿಭಾಗವನ್ನು ಯಾರು ನಿರ್ವಹಿಸಬೇಕು ಎಂದು ನಿರ್ಧರಿಸುವುದು ಕೂಡ ಇವರೇ. ಈ ವಾರ ಭವ್ಯಾ ಗೌಡ ಅವರು ಕ್ಯಾಪ್ಟನ್ ಆಗಿದ್ದರು. ಆದರೆ, ಅವರಿಗೆ ವಿಶೇಷ ಅಧಿಕಾರ ಮಾತ್ರ ಸಿಗುತ್ತಿಲ್ಲ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಶೋಭಾ ಅವರು ಈ ಅಧಿಕಾರವನ್ನು ಕಸಿದುಕೊಂಡಿದ್ದಾರೆ. ಇದು ಭವ್ಯಾ ಅವರ ಕೋಪಕ್ಕೆ ಕಾರಣ ಆಗಿದೆ. ಒಳಗೊಳಗೆ ಉರಿದುಕೊಳ್ಳುತ್ತಿದ್ದಾರೆ.

ಶೋಭಾ ಶೆಟ್ಟಿ ಅವರು ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದರು. ಇವರ ಜೊತೆ ರಜತ್ ಕೂಡ ಬಂದಿದ್ದಾರೆ. ಈಗಾಗಲೇ ಉಳಿದ ಸ್ಪರ್ಧಿಗಳು ದೊಡ್ಮನೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ, ಶೋಭಾ ಶೆಟ್ಟಿ ಹಾಗೂ ರಜತ್ ಅವರಿಗೆ ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಬೇಕಿದೆ. ಈ ಕಾರಣಕ್ಕೆ ಶೋಭಾ ಹಾಗೂ ರಜತ್​ಗೆ ಬಿಗ್ ಬಾಸ್ ವಿಶೇಷ ಅಧಿಕಾರ ನೀಡಿದ್ದಾರೆ.

ಈ ಅಧಿಕಾರದ ಪ್ರಕಾರ ಶೋಭಾ ಅವರು ಹಾಗೂ ರಜತ್ ಕೈಯಲ್ಲಿ ಎಲ್ಲ ಅಧಿಕಾರ ಇರುತ್ತದೆ. ಅಡುಗೆ ಮನೆಯ ಸಂಪೂರ್ಣ ಹಕ್ಕು ಇವರಿಗೆ ಸಿಕ್ಕಿದೆ. ಅಡುಗೆ ಮನೆಯಲ್ಲಿ ಏನೇ ತೆಗೆದುಕೊಳ್ಳುವುದಾದರೂ ಶೋಭಾ ಅವರನ್ನು ಕೇಳಿಯೇ ಮುಂದುವರಿಯಬೇಕು. ಅಲ್ಲದೆ, ಅಡುಗೆ ಮನೆಯ ಕೆಲಸಗಳನ್ನು ನಿರ್ವಹಿಸಬೇಕಿರೋದು ಯಾರು ಎಂಬುದನ್ನು ಕೂಡ ಶೋಭಾ ಹಗೂ ರಜತ್ ನಿರ್ಧರಿಸಿದರು.

ಇದನ್ನೂ ಓದಿ: ಬರುತ್ತಿದ್ದಂತೆ ಹನುಮಂತನ ಹಿಂದೆ ಬಿದ್ದ ಶೋಭಾ ಶೆಟ್ಟಿ; ಇದರ ಹಿಂದಿದೆ ಮಾಸ್ಟರ್​ ಪ್ಲ್ಯಾನ್?

ತಮ್ಮ ಅಧಿಕಾರವನ್ನು ಕಿತ್ತುಕೊಂಡಂತೆ ಭವ್ಯಾಗೆ ಭಾಸವಾಗುತ್ತಿದೆ. ಭವ್ಯಾ ಕಾಫಿ ಮಗ್​ನ ಎತ್ತಿಕೊಳ್ಳಲು ಅಡುಗೆ ಮನೆಗೆ ಬರುತ್ತಿದ್ದರು. ಅಲ್ಲಿ ಅಡುಗೆ ಮಾಡುತ್ತಿದ್ದ ಗೌತಮಿ, ‘ಏಕಾಏಕಿ ನುಗ್ಗಬಾರದು. ಶೋಭಾ ಅವರನ್ನು ಕೇಳಿ ಅಡುಗೆ ಮನೆಗೆ ಬರಬೇಕು’ ಎಂದರು. ಇದರಿಂದ ಭವ್ಯಾ ಸಿಟ್ಟು ನೆತ್ತಿಗೇರಿದೆ. ‘ನಾನೇನು ಎಲ್ಲರ ಬಳಿ ಕೂಗಿ ಹೇಳಿ ಬರಬೇಕಾ? ಅವರಿಗೆ ಹೇಳಿ ಬಂದಿದ್ದೇನೆ’ ಎಂದು ಭವ್ಯಾ ಕೋಪದಲ್ಲೇ ಉತ್ತರಿಸಿದರು. ಈ ಉತ್ತರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.