AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರುತ್ತಿದ್ದಂತೆ ಹನುಮಂತನ ಹಿಂದೆ ಬಿದ್ದ ಶೋಭಾ ಶೆಟ್ಟಿ; ಇದರ ಹಿಂದಿದೆ ಮಾಸ್ಟರ್​ ಪ್ಲ್ಯಾನ್?

ಬಿಗ್ ಬಾಸ್ ಕನ್ನಡದಲ್ಲಿ ಹನುಮಂತ ಅವರ ಜನಪ್ರಿಯತೆ ಹೆಚ್ಚಾಗುತ್ತಿದೆ. ಶೋಭಾ ಶೆಟ್ಟಿ ಅವರ ವೈಲ್ಡ್ ಕಾರ್ಡ್ ಎಂಟ್ರಿಯ ನಂತರ, ಅವರು ಹನುಮಂತರ ಆಟವನ್ನು ಮೆಚ್ಚಿಕೊಂಡಿದ್ದಾರೆ. ಹನುಮಂತ ಅವರ ಬುದ್ಧಿವಂತಿಕೆ ಮತ್ತು ಆಟದ ತಂತ್ರಗಳನ್ನು ಶೋಭಾ ಶೆಟ್ಟಿ ಗಮನಿಸಿದ್ದಾರೆ.

ಬರುತ್ತಿದ್ದಂತೆ ಹನುಮಂತನ ಹಿಂದೆ ಬಿದ್ದ ಶೋಭಾ ಶೆಟ್ಟಿ; ಇದರ ಹಿಂದಿದೆ ಮಾಸ್ಟರ್​ ಪ್ಲ್ಯಾನ್?
ಶೋಭಾ
ರಾಜೇಶ್ ದುಗ್ಗುಮನೆ
|

Updated on:Nov 19, 2024 | 7:03 AM

Share

ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬಹುತೇಕ ಆಟಗಾರರಿಗೆ ಇವರೇ ಫೇವರಿಟ್. ಸುದೀಪ್ ಅವರು ಕೂಡ ಅನೇಕ ಬಾರಿ ಹನುಮಂತ ಆಟವನ್ನು ಹೊಗಳಿದ್ದು ಇದೆ. ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ರಿಯಾಲಿಟಿ ಶೋ ಮೂಲಕ ಫೇಮಸ್ ಆದ ರಜತ್ ಹಾಗೂ ತೆಲುಗು ಬಿಗ್ ಬಾಸ್​ನಲ್ಲಿ ಹಲ್ ಚಲ್ ಎಬ್ಬಿಸಿದ್ದ ಶೋಭಾ ಶೆಟ್ಟಿ ದೊಡ್ಮನೆ ಒಳಗೆ ಬಂದಿದ್ದಾರೆ. ಶೋಭಾ ಶೆಟ್ಟಿ ಅವರು ಸದ್ಯ ಹನುಮಂತನ ಹಿಂದೆ ಬಿದ್ದಿದ್ದಾರೆ.

ಹನುಮಂತ ಹಳ್ಳಿ ಹುಡುಗ ಇರಬಹುದು. ಆದರೆ, ಅವರಿಗೆ ಬಿಗ್ ಬಾಸ್ ಆಟದ ಬಗ್ಗೆ ಪಕ್ಕಾ ತಿಳಿದಿದೆ. ಯಾವಾಗ ಹೇಗೆ ನಡೆದುಕೊಳ್ಳಬೇಕು, ಹೊರಗಿನಿಂದ ಬಂದವರ ಜೊತೆ ಹೇಗೆ ಮಾತನಾಡಬೇಕು ಎಂಬುದು ಗೊತ್ತಿದೆ. ಇತ್ತೀಚೆಗೆ ಚೈತ್ರಾ ಅವರು ಆಸ್ಪತ್ರೆ ಸೇರಿದಾಗ ಹೊರಗಿನ ವಿಚಾರಗಳನ್ನು ಹೊತ್ತು ತಂದಿದ್ದರು. ಎಲ್ಲರ ಕಿವಿಯಲ್ಲೂ ಒಂದಷ್ಟು ವಿಚಾರಗಳನ್ನು ಹೇಳಿದ್ದರು. ಅಂತೆಯೇ ಹನುಮಂತನ ಆಟದ ಬಗ್ಗೆಯೂ ಕೆಲವು ವಿಚಾರಗಳನ್ನು ಅವರು ಹೇಳಿದ್ದರು. ಆದರೆ, ಹನುಮಂತ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಇದು ಅವರ ನಿಜವಾದ ಆಟವನ್ನು ತೋರಿಸುತ್ತದೆ.

ಹನುಮಂತನ ಆಟವನ್ನು ಶೋಭಾ ಶೆಟ್ಟಿ ಹೊರಗಿನಿಂದ ನೋಡಿ ಬಂದಿದ್ದಾರೆ. ಈ ಕಾರಣಕ್ಕೆ ಅವರ ಹಿಂದೆ ಬಿದ್ದಿದ್ದಾರೆ. ದೊಡ್ಮನೆಗೆ ಎಂಟ್ರಿ ಕೊಟ್ಟ ತಕ್ಷಣ ಎಲ್ಲರಿಗೂ ತಮ್ಮ ಪರಿಚಯ ಮಾಡಿಕೊಂಡರು ಶೋಭಾ. ಅದರಲ್ಲೂ ಹನುಮಂತನ ಬಳಿ ಬಂದು ವಿಶೇಷವಾಗಿ ತಮ್ಮ ಬಗ್ಗೆ ಹೇಳಿಕೊಂಡರು. ಆ ಬಳಿಕ ದೊಡ್ಮನೆ ತೋರಿಸುವಂತೆ ಹನುಮಂತನ ಬಳಿ ಕೇಳಿದ್ದರು.

ಇದನ್ನೂ ಓದಿ: ‘ಇವತ್ ಒಂದಿನ ಮಾತಾಡ್ತಿ ಅಷ್ಟೇ’: ರಜತ್​ಗೆ ಟಕ್ಕರ್ ಕೊಟ್ಟ ಹನುಮಂತ

ಹನುಮಂತ ಅವರಿಗೆ ಶೋಭಾ ಹಿನ್ನೆಲೆ ಬಗ್ಗೆ ಗೊತ್ತಿರಲಿಲ್ಲ. ಈ ಕಾರಣಕ್ಕೆ ಅವರು ಇಡೀ ಮನೆಯನ್ನು ಸುತ್ತಿಸಿದರು. ಆಗ ಅಲ್ಲಿದ್ದ ಇತರ ಸ್ಪರ್ಧಿಗಳು, ‘ಅವರು ಬಿಗ್ ಬಾಸ್ ನೋಡಿ ಬಂದಿದ್ದಾರೆ. ಅವರಿಗೆ ಮತ್ತೆ ತೋರಿಸಿಕೊಡೋ ಅಗತ್ಯ ಇಲ್ಲ’ ಎಂದರು. ಆಗ ಹನುಮಂತ, ‘ಈ ಮೊದಲು ಬಿಗ್ ಬಾಸ್​ಗೆ ಹೋಗಿದ್ರಾ’ ಎಂದು ಕೇಳಿದರು. ಆಗ ಅವರು ತಮ್ಮ ಹಿನ್ನೆಲೆ ಹೇಳಿಕೊಂಡರು. ಹನುಮಂತ ಒಳ್ಳೆಯ ರೀತಿಯಲ್ಲಿ ಆಡುತ್ತಿದ್ದಾರೆ ಎಂಬ ಕಾರಣಕ್ಕೆ ಅವರ ಹಿಂದೆ ಶೋಭಾ ಬಿದ್ದರೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:54 am, Tue, 19 November 24