‘ಇವತ್ ಒಂದಿನ ಮಾತಾಡ್ತಿ ಅಷ್ಟೇ’: ರಜತ್​ಗೆ ಟಕ್ಕರ್ ಕೊಟ್ಟ ಹನುಮಂತ

ಸಿಂಗರ್ ಹನುಮಂತ ಅವರು ಯಾರಿಗೂ ತಲೆ ಕೆಡಿಸಿಕೊಳ್ಳುವವರಲ್ಲ. ಯಾವ ಸ್ಪರ್ಧಿಯೇ ಎದುರಿಗೆ ಇದ್ದರೂ ಅವರು ತಮ್ಮ ಮಾತನ್ನು ನೇರವಾಗಿ ಹೇಳುತ್ತಾರೆ. ಈ ವಾರ ಬಿಗ್ ಬಾಸ್ ಮನೆಗೆ ರಜತ್ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದಾರೆ. ಭಾರಿ ಉತ್ಸಾಹದಲ್ಲಿ ಮಾತನಾಡುತ್ತಿದ್ದ ರಜತ್ ಅವರಿಗೆ ಹನುಮಂತ ಟಕ್ಕರ್ ನೀಡಿದ್ದಾರೆ.

‘ಇವತ್ ಒಂದಿನ ಮಾತಾಡ್ತಿ ಅಷ್ಟೇ’: ರಜತ್​ಗೆ ಟಕ್ಕರ್ ಕೊಟ್ಟ ಹನುಮಂತ
ರಜತ್, ಹನುಮಂತ
Follow us
ಮದನ್​ ಕುಮಾರ್​
|

Updated on: Nov 18, 2024 | 10:51 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ 50 ದಿನಗಳು ಕಳೆದಿವೆ. ಎಲ್ಲ ಸ್ಪರ್ಧಿಗಳಿಗೂ ದೊಡ್ಮನೆಯ ರೀತಿ-ನೀತಿ ಏನು ಎಂಬುದು ಸಂಪೂರ್ಣ ಅರ್ಥ ಆಗಿದೆ. ಈಗ ಸ್ಪರ್ಧಿಗಳ ಮನದಲ್ಲಿ ಹಲ್​ಚಲ್​ ಎಬ್ಬಿಸಲು ವೈಲ್ಡ್ ಕಾರ್ಡ್​ ಸ್ಪರ್ಧಿಗಳನ್ನು ಕಳಿಸಲಾಗಿದೆ. ಈಗಾಗಲೇ ಒಂದಷ್ಟು ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಅನುಭವ ಪಡೆದಿರುವ ರಜತ್ ಅವರು ಈಗ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರ ಜೊತೆ ಶೋಭಾ ಶೆಟ್ಟಿ ಕೂಡ ಎಂಟ್ರಿ ನೀಡಿದ್ದಾರೆ. ಮೊದಲ ದಿನ ಆದ್ದರಿಂದ ರಜತ್ ಅವರು ಸಿಕ್ಕಾಪಟ್ಟೆ ಮಾತನಾಡುತ್ತಿದ್ದರು. ಅವರಿಗೆ ಹನುಮಂತ ಮೊದಲ ದಿನವೇ ಟಕ್ಕರ್ ನೀಡಿದ್ದಾರೆ.

ರಜತ್ ಅವರು ಬಿಗ್ ಬಾಸ್ ವೇದಿಕೆಯಲ್ಲೇ ಸಿಕ್ಕಾಪಟ್ಟೆ ಮಾತನಾಡಿದ್ದರು. ಒಳಗೆ ಬಂದ ಬಳಿಕವೂ ಅವರು ಎಲ್ಲರ ಬಗ್ಗೆ ಕಮೆಂಟ್ ಮಾಡುತ್ತಿದ್ದರು. ಈ ನಡುವೆ ಅಡುಗೆ ಮನೆಯ ಉಸ್ತುವಾರಿಯಾಗಿ ಅವರಿಗೆ ಅಧಿಕಾರ ಕೂಡ ಸಿಕ್ಕಿತು. ಮೊದಲ ದಿನ ಆದ್ದರಿಂದ ಅವರಲ್ಲಿ ಸಾಕಷ್ಟು ಎನರ್ಜಿ ಇದೆ. ಆ ಉತ್ಸಾಹದಲ್ಲೇ ಹನುಮಂತನ ಎದುರು ಮಾತನಾಡಲು ಕುಳಿತಾಗ ಅವರಿಗೆ ಹನುಮ ಮಾತಿನ ಚಾಟಿ ಬೀಸಿದರು.

ಇದನ್ನೂ ಓದಿ: ‘ಮಂಜು ತಿಕ್ಲ, ಚೈತ್ರಾ ಪುಕ್ಲು’: ಬಿಗ್ ಬಾಸ್ ಮನೆಗೆ ಬರುತ್ತಲೇ ವಿವಾದ ಎಬ್ಬಿಸಿದ ರಜತ್

‘ಇವತ್ ಒಂದಿನ ಮಾತಾಡ್ತಿ ಅಷ್ಟೇ’ ಎಂದು ರಜತ್​ಗೆ ಹನುಮಂತ ಹೇಳಿದ್ದಾರೆ. ಒಂದೆರಡು ದಿನಗಳು ಕಳೆದ ಬಳಿಕ ದೊಡ್ಮನೆಯಲ್ಲಿ ರಜತ್ ಧ್ವನಿ ಸೈಲೆಂಟ್ ಆಗಲಿದೆ ಎಂಬುದು ಹನುಮಂತ ಅಭಿಪ್ರಾಯ. ಪ್ರತಿ ಸೀಸನ್​ನಲ್ಲೂ ವೈಲ್ಡ್ ಕಾರ್ಡ್​ ಮೂಲಕ ಬರುವ ಸ್ಪರ್ಧಿಗಳು ಇನ್ನುಳಿದ ಸ್ಪರ್ಧಿಗಳಿಗಿಂತ ಜಾಸ್ತಿ ಜೋಶ್​ನಲ್ಲಿ ಇರುತ್ತಾರೆ. ಯಾಕೆಂದರೆ ಅವರಿಗೆ ದೊಡ್ಮನೆಯ ಅನುಭವ ಇನ್ನೂ ಆಗಿರುವುದಿಲ್ಲ. ರಜತ್ ಮುಂದಿನ ದಿನಗಳಲ್ಲಿ ಹೇಗೆ ಇರುತ್ತಾರೆ ಎಂಬುದನ್ನು ಕಾದು ನೋಡಬೇಕು.

ರಜತ್ ಅವರು ಬರುಬರುತ್ತಿದ್ದಂತೆಯೇ ಚೈತ್ರಾ ಕುಂದಾಪುರ ಅವರನ್ನು ಟಾರ್ಗೆಟ್​​ ಮಾಡಿದ್ದಾರೆ. ‘ನೀವು ಯಾರ ಜೊತೆ ಅಂತರ ಕಾಯ್ದುಕೊಳ್ಳುತ್ತೀರಿ’ ಎಂದು ಬಿಗ್ ಬಾಸ್ ಪ್ರಶ್ನೆ ಕೇಳಿದ್ದಕ್ಕೆ ರಜತ್ ಅವರು ಚೈತ್ರಾ ಹೆಸರನ್ನು ಹೇಳಿದ್ದಾರೆ. ‘ಯಾರು ಮುಖವಾಡ ಹಾಕಿಕೊಂಡಿದ್ದಾರೆ’ ಎಂಬ ಪ್ರಶ್ನೆಗೂ ಚೈತ್ರಾ ಹೆಸರನ್ನು ರಜತ್ ಹೇಳಿದ್ದಾರೆ. ಆಸ್ಪತ್ರೆಗೆ ಹೋಗಿ ಬಂದು ಹೊರಗಡೆಯ ವಿಷಯವನ್ನು ಒಳಗಡೆ ಹೇಳಿದ್ದಕ್ಕಾಗಿ ಚೈತ್ರಾ ಅವರನ್ನು ಮತ್ತೊಮ್ಮೆ ರಜತ್ ಮಾತಿನ ಮೂಲಕ ತಿವಿದಿದ್ದಾರೆ. ಈ ಎಲ್ಲ ಘಟನೆಗಳಿಂದ ಚೈತ್ರಾ ಕುಗ್ಗಿದ್ದಾರೆ. ರಜತ್ ಸದ್ಯಕ್ಕಂತೂ ಸದ್ದು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ