ಸುದೀಪ್ ಎದುರೇ ಅನುಷಾ ರೈಗೆ ಸಿಕ್ತು ಲಕ್ಷ ಲಕ್ಷ ರೂಪಾಯಿ ಚೆಕ್; ಇಲ್ಲಿದೆ ಬಹುಮಾನ ಮೊತ್ತ

ಅನುಷಾ ರೈ ಅವರು ಬಿಗ್ ಬಾಸ್ ಕನ್ನಡದಿಂದ ಎಲಿಮಿನೇಟ್ ಆಗಿದ್ದಾರೆ. 50 ದಿನಗಳ ಉಳಿದ ಅವರು ಲಕ್ಷ ಲಕ್ಷ ಬಹುಮಾನಗಳನ್ನು ಗಳಿಸಿದ್ದಾರೆ. ಅವರ ಬಿಗ್ ಬಾಸ್ ಸಂಭಾವನೆಯ ಬಗ್ಗೆ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಸುದೀಪ್ ಎದುರೇ ಅನುಷಾ ರೈಗೆ ಸಿಕ್ತು ಲಕ್ಷ ಲಕ್ಷ ರೂಪಾಯಿ ಚೆಕ್; ಇಲ್ಲಿದೆ ಬಹುಮಾನ ಮೊತ್ತ
ಅನುಷಾ ರೈ
Follow us
ರಾಜೇಶ್ ದುಗ್ಗುಮನೆ
|

Updated on:Nov 18, 2024 | 12:28 PM

ಅನುಷಾ ರೈ ಅವರು ‘ಬಿಗ್ ಬಾಸ್​’ನಿಂದ ಎಲಿಮಿನೇಟ್ ಆಗಿದ್ದಾರೆ. 50 ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದ ಅವರು ಈಗ ಹೊರಕ್ಕೆ ಬಂದಿದ್ದಾರೆ. ಅನುಷಾ ಅವರಿಗೆ ‘ಬಿಗ್ ಬಾಸ್’ ಮನೆಯಲ್ಲಿ ಲಕ್ಷ ಲಕ್ಷ ಸಂಭಾವನೆ ಸಿಕ್ಕಿದೆ. ಅದೇ ರೀತಿ ಅವರಿಗೆ ಸಿಕ್ಕ ಬಹುಮಾನದ ಮೊತ್ತವೂ ತುಂಬಾನೇ ದೊಡ್ಡದಿದೆ. ಅವರು ದೊಡ್ಮನೆಯಿಂದ ಹೊರ ಹೋಗಲು ಕಾರಣವಾದ ಅಂಶ ಹಾಗೂ ಹೊರ ಹೋದ ಅವರಿಗೆ ಸಿಕ್ಕ ಬಹುಮಾನದ ಮೊತ್ತದ ಬಗ್ಗೆ ಇಲ್ಲಿದೆ ವಿವರ.

ಅನುಷಾ ರೈ ಅವರ ಕಿರುತೆರೆ ಹಾಗೂ ಹಿರಿತೆರೆ ಮೂಲಕ ಫೇಮಸ್ ಆದವರು. ಅವರು ದೊಡ್ಮನೆಗೆ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆದರು. ಅವರು ಧರ್ಮ ಕೀರ್ತಿರಾಜ್ ಜೊತೆಗಿನ ಗೆಳೆತನದ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದರು. ಅವರು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅವರು ದೊಡ್ಮನೆಯಿಂದ ಹೊರಕ್ಕೆ ಹೋಗಿದ್ದಾರೆ. ಉಳಿದ ಸ್ಪರ್ಧಿಗಳಿಗ ಹೋಲಿಸಿದರೆ ಅನುಷಾ ವೀಕ್ ಸ್ಪರ್ಧಿ ಎನಿಸಿಕೊಂಡರು. ರ

ಮೂರು ವಾರಗಳ ಹಿಂದೆ ಅನುಷಾ ನಾಮಿನೇಟ್ ಆಗುವ ಹಂತದಲ್ಲಿ ಇದ್ದರು. ಆದರೆ, ಅವರು ಕೊನೆಯ ಹಂತದಲ್ಲಿ ಬಚಾವ್ ಆದರು. ಎರಡು ವಾರಗಳ ಹಿಂದೆ ನಾಮಿನೇಟ್ ಆಗದೆ ಅವರು ಬಚಾವ್ ಆದರು. ಕಳೆದ ವಾರ ಬರೋಬ್ಬರಿ 10 ಮಂದಿ ನಾಮಿನೇಟ್ ಆಗಿದ್ದರು. ಕೊನೆಯ ಹಂತದಲ್ಲಿ ಧರ್ಮ ಹಾಗೂ ಅನುಷಾ ಇದ್ದರು. ಈ ಪೈಕಿ ಅನುಷಾ ಎಲಿಮಿನೇಟ್ ಆಗಿದ್ದಾರೆ.

ಅನುಷಾಗೂ ಸ್ಪಾನ್ಸರ್ಸ್ ಕಡೆಯಿಂದ ಬಹುಮಾನದ ಮೊತ್ತ ಸಿಕ್ಕಿದೆ. ತುಪ್ಪದ ಕಂಪನಿಯೊಂದರಿಂದ 1 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಸಿಕ್ಕಿದೆ. ಮೊಬೈಲ್ ಸ್ಟೋರ್ ಒಂದರ ಕಡೆಯಿಂದ 50 ಸಾವಿರ ರೂಪಾಯಿ ಗಿಫ್ಟ್ ವೋಚರ್ ದೊರೆತಿದೆ. ಅದೇ ರೀತಿ ಎಲಿವೇಟರ್ ಸಂಸ್ಥೆ ಕಡೆಯಿಂದ 50 ಸಾವಿ ರೂಪಾಯಿ ದೊರೆತಿದೆ. ಈ ಮೂಲಕ ಅನುಷಾ ಅವರಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಕ್ಕಂತೆ ಆಗಿದೆ.

ಇದನ್ನೂ ಓದಿ: ‘ತೆಲುಗು ಬಿಗ್ ಬಾಸ್ ಕಾದು’; ಮಿತಿಮೀರಿ ನಡೆದುಕೊಂಡ ಶೋಭಾ ಶೆಟ್ಟಿಗೆ ವೇದಿಕೆ ಮೇಲೆ ಸುದೀಪ್ ಕ್ಲಾಸ್

ಇದು ಅನುಷಾಗೆ ಸಿಕ್ಕಿರುವ ಬಹುಮಾನ ಮೊತ್ತ ಮಾತ್ರ. ಇದರ ಜೊತೆಗೆ ಅವರಿಗೆ 50 ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದಿದ್ದಕ್ಕೆ ಸಂಭಾವನೆ ದೊರೆತಿದೆ. ಅದನ್ನು ಅವರು ರಿವೀಲ್ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿದೆ. ಈಗ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಲಿದ್ದಾರೆ. ಅದರಲ್ಲಿ ಈ ವಿಚಾರ ರಿವೀಲ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:45 am, Mon, 18 November 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ