AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತೆಲುಗು ಬಿಗ್ ಬಾಸ್ ಕಾದು’; ಮಿತಿಮೀರಿ ನಡೆದುಕೊಂಡ ಶೋಭಾ ಶೆಟ್ಟಿಗೆ ವೇದಿಕೆ ಮೇಲೆ ಸುದೀಪ್ ಕ್ಲಾಸ್

ಬಿಗ್ ಬಾಸ್ ಕನ್ನಡ ಸೀಸನ್ 11ರ 50ನೇ ದಿನಕ್ಕೆ ರಜತ್ ಮತ್ತು ಶೋಭಾ ಶೆಟ್ಟಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಶೋಭಾ ಶೆಟ್ಟಿ ಅವರ ಉತ್ತರಗಳಿಗೆ ಸುದೀಪ್ ಅವರು ತರಾಟೆಗೆ ತೆಗೆದುಕೊಂಡಿದ್ದು, ತೆಲುಗು ಬಿಗ್ ಬಾಸ್ ಮತ್ತು ಕನ್ನಡ ಬಿಗ್ ಬಾಸ್ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಾರೆ.

‘ತೆಲುಗು ಬಿಗ್ ಬಾಸ್ ಕಾದು’; ಮಿತಿಮೀರಿ ನಡೆದುಕೊಂಡ ಶೋಭಾ ಶೆಟ್ಟಿಗೆ ವೇದಿಕೆ ಮೇಲೆ ಸುದೀಪ್ ಕ್ಲಾಸ್
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Nov 18, 2024 | 6:56 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ 50ನೇ ದಿನಕ್ಕೆ ಕಾಲಿಟ್ಟಿದೆ. ಹೀಗಿರುವಾಗಲೇ ಎರಡು ವೈಲ್ಡ್​ ಕಾರ್ಡ್ ಎಂಟ್ರಿಗಳನ್ನು ಕರೆಸಲಾಗಿದೆ. ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆದ ರಜತ್ ಹಾಗೂ ತೆಲುಗು ಬಿಗ್ ಬಾಸ್​ನಲ್ಲಿ ಸ್ಪರ್ಧಿಸಿದ ಅನುಭವ ಇರುವ ಶೋಭಾ ಶೆಟ್ಟಿ ದೊಡ್ಮನೆಗೆ ಎಂಟ್ರಿ ಪಡೆದಿದ್ದಾರೆ. ವೇದಿಕೆ ಏರಿದಾಗ ಸುದೀಪ್ ಅವರ ಬಗ್ಗೆ ಶೋಭಾ ಮೆಚ್ಚುಗೆ ವ್ಯಕ್ತಪಡಿಸಿದರು. ಸಲಿಗೆ ಪಡೆಯಲು ಪ್ರಯತ್ನಿಸಿದ ಅವರಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಶೋಭಾ ಶೆಟ್ಟಿ ತೆಲುಗು ಬಿಗ್ ಬಾಸ್​ನಲ್ಲಿ ಈ ಮೊದಲು ಸ್ಪರ್ಧಿಸಿದ್ದರು. ಅಲ್ಲಿ ಆ್ಯಂಕರ್ ಅಕ್ಕಿನೇನಿ ನಾಗಾರ್ಜುನ. ಅವರು ನಿರೂಪಣೆಯನ್ನು ಚೆನ್ನಾಗಿಯೇ ಮಾಡುತ್ತಾರೆ. ಆದರೆ, ಸುದೀಪ್ ರೀತಿ ಖಡಕ್ ಆಗಿ ಅವರು ನಿರೂಪಣೆ ಮಾಡಿದ್ದು ಕಡಿಮೆ. ಹೀಗಾಗಿ, ಏನೇ ಮಾತನಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಅಲ್ಲಿನ ಸ್ಪರ್ಧಿಗಳಿಗೆ ಮೂಡಿರುತ್ತದೆ. ಈಗ ಶೋಭಾ ಶೆಟ್ಟಿ ಅವರು ಸುದೀಪ್ ಎದುರು ಚಿಲ್ ಆಗಿ ಮಾತನಾಡಿಕೊಂಡಿದ್ದರು. ಆದರೆ, ಅವರು ಯಾವಾಗ ಲಯ ತಪ್ಪಿದರು ಎಂಬುದು ಗೊತ್ತಾಯಿತೋ ಆಗ ಸುದೀಪ್ ಕ್ಲಾಸ್ ತೆಗೆದುಕೊಂಡರು. ಇದರ ಬಿಸಿ ಶೋಭಾಗೆ ತಟ್ಟಿದೆ.

‘ನಿಮ್ಮ ಫೇವರಿಟ್ ಸ್ಪರ್ಧಿ ಯಾರು’ ಎಂದು ಸುದೀಪ್ ಕೇಳಿದರು. ‘ನಾನು ಫೇವರಿಟ್ ಸ್ಪರ್ಧಿ ಅಂತ ಹೇಳೋಕೆ ಆಗಲ್ಲ. ನಾವು ಹೊರಗೆ ನೋಡೋದೇ ಬೇರೆ ಇರುತ್ತದೆ..’ ಎಂದು ಏನನ್ನೋ ಹೇಳಲು ಹೊರಟರು ಶೋಭಾ. ಆಗ ಸುದೀಪ್ ನಗುತ್ತಲೇ ಶೋಭಾಗೆ ಕ್ಲಾಸ್ ತೆಗೆದುಕೊಂಡರು. ‘ನಿಮ್ಮ ಪ್ರಶ್ನೆಯನ್ನು ನೀವೆ ಆಯ್ಕೆ ಮಾಡಿಕೊಳ್ಳಬೇಡಿ. ಇದು ತೆಲುಗು ಬಿಗ್ ಬಾಸ್ ಕಾದು. ಪಕ್ಕಾ ಕನ್ನಡ. ಪ್ರಶ್ನೆ ನಮ್ಮದು, ಉತ್ತರ ಮಾತ್ರ ನಿಮ್ಮದು’ ಎಂದರು ಸುದೀಪ್.

ಇದನ್ನೂ ಓದಿ: ‘ಮಂಜು ತಿಕ್ಲ, ಚೈತ್ರಾ ಪುಕ್ಲು’: ಬಿಗ್ ಬಾಸ್ ಮನೆಗೆ ಬರುತ್ತಲೇ ವಿವಾದ ಎಬ್ಬಿಸಿದ ರಜತ್

‘10 ವರ್ಷ ಬಿಗ್ ಬಾಸ್ ನಡೆಸಿಕೊಟ್ಟಿದ್ದೀನಿ. ಇದು 11ನೇ ವರ್ಷ. ಹಲವರು ರೀತಿಯ ಜನರನ್ನು ನೋಡಿದ್ದೇನೆ’ ಎಂದರು ಸುದೀಪ್. ‘ಹೋಗಲಿ ಬಿಡಿ ನಿಮಗೆ ಟಫ್ ಸ್ಪರ್ಧಿ ಯಾರು’ ಎಂದು ಕೇಳಿದರು. ಇದಕ್ಕೆ ‘ಯಾರೂ ಇಲ್ಲ’ ಎಂಬ ಉತ್ತರ ಶೋಭಾ ಕಡೆಯಿಂದ ಬಂತು. ‘ಹಾಗಿದ್ರೆ ಇಲ್ಲೇ ಕಪ್ ಹಿಡ್ಕೊಂಡು ಹೋಗಿ ಬಿಡಿ’ ಎಂದು ಸುದೀಪ್ ಅವರು ಕಾಲೆಳೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ