‘ಕಪಿಲ್ ಶರ್ಮಾ’ ಶೋನಿಂದ ಹೊರಹೋಗಿದ್ದಕ್ಕೆ ಕಾರಣ ವಿವರಿಸಿದ ಸಿಧು

Kapil Sharma: ಅರ್ಚನಾ ಪೂರನ್ ಸಿಂಗ್, ಕಪಿಲ್ ಶರ್ಮಾ ಶೋನ ಅವಿಭಾಜ್ಯ ಅಂಗವಾಗಿದ್ದಾರೆ. ಅದಕ್ಕೆ ಮುಂಚೆ ನವಜೋತ್ ಸಿಂಗ್ ಸಿಧು ಕಪಿಲ್ ಶರ್ಮಾ ಶೋನಲ್ಲಿದ್ದರು. ಅಚಾನಕ್ಕಾಗಿ ಅವರು ಶೋ ಬಿಟ್ಟಿದ್ದರು. ಇದೀಗ ಸಿಧು, ತಾವೇಕೆ ಆ ಶೋ ಬಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.

‘ಕಪಿಲ್ ಶರ್ಮಾ’ ಶೋನಿಂದ ಹೊರಹೋಗಿದ್ದಕ್ಕೆ ಕಾರಣ ವಿವರಿಸಿದ ಸಿಧು
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Nov 19, 2024 | 4:39 PM

ಐದು ವರ್ಷಗಳ ನಂತರ ಹಾಸ್ಯನಟ ಕಪಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ನವಜೋತ್ ಸಿಂಗ್ ಸಿಧು ಕಾಣಿಸಿಕೊಂಡಿದ್ದಾರೆ. ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಸಂಚಿಕೆಗೆ ಬಂದಿದ್ದರು. ಪುಲ್ವಾಮಾ ದಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಅವರು 2019ರಲ್ಲಿ ಕಾರ್ಯಕ್ರಮವನ್ನು ತ್ಯಜಿಸಬೇಕಾಯಿತು. ಅದರ ನಂತರ, ಅವರ ಸ್ಥಾನವನ್ನು ನಟಿ ಅರ್ಚನಾ ಪುರನ್ ಸಿಂಗ್ ವಹಿಸಿಕೊಂಡರು. ಇದೀಗ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಿಧು ತಮ್ಮ ಕಾರ್ಯಕ್ರಮವನ್ನು ತೊರೆಯಲು ಕಾರಣವನ್ನು ಹೇಳಿದ್ದಾರೆ.

ನಾನು ಕಾರ್ಯಕ್ರಮದಿಂದ ಹಿಂದೆ ಸರಿಯುವುದರ ಹಿಂದೆ ಕೆಲವು ರಾಜಕೀಯ ಕಾರಣಗಳಿವೆ ಎಂದು ಸಿಧು ಹೇಳಿದ್ದಾರೆ. ‘ನಾನು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ ಅದರ ಹೊರತಾಗಿ ಬೇರೆ ಕಾರಣಗಳೂ ಇದ್ದವು. ಪುಷ್ಪಗುಚ್ಛದಿಂದ ಒಂದೊಂದೇ ಹೂವುಗಳು ಹೊರ ಹೋಗುತ್ತಿದ್ದವು. ಆ ಪುಷ್ಪಗುಚ್ಛವು ಮೊದಲಿನಂತೆಯೇ ಮತ್ತೆ ಒಟ್ಟಿಗೆ ಬರಬೇಕೆಂದು ನಾನು ಬಯಸುತ್ತೇನೆ. ಅವರ ಕಾರ್ಯಕ್ರಮ ಇನ್ನೂ ಚೆನ್ನಾಗಿ ನಡೆಯುತ್ತಿದೆ. ಕಪಿಲ್ ತುಂಬಾ ಬುದ್ಧಿವಂತ’ ಎಂದಿದ್ದಾರೆ ಸಿಧು.

ಇಲ್ಲಿ ಸಿದ್ದು ಬಳಸಿದ ಹೂಗುಚ್ಛ ಎಂದರೆ ಕಪಿಲ್ ಅವರ ಕಾರ್ಯಕ್ರಮದ ವಿವಿಧ ನಟರು. ಹಲವು ನಟರು ಕಾರ್ಯಕ್ರಮದಿಂದ ಹೊರ ನಡೆದಿದ್ದರು. ಇದರಲ್ಲಿ ಉಪಾಸನಾ ಸಿಂಗ್, ಅಲಿ ಅಸ್ಗರ್ ಮತ್ತು ಸುಮೋನಾ ಚಕ್ರವರ್ತಿ ಸೇರಿದ್ದಾರೆ. ಕಾರ್ಯಕ್ರಮದ ಮೂಲ ತಂಡದೊಂದಿಗೆ ಇಲ್ಲದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಶನಗಳು ಸಿಧು ಕಪಿಲ್ ಅವರ ವೃತ್ತಿಜೀವನದ ಕಷ್ಟದ ಸಮಯವನ್ನು ಬಹಿರಂಗಪಡಿಸಿದವು. ‘ಕಪಿಲ್ ಕಠಿಣ ಸಮಯವನ್ನು ಎದುರಿಸುತ್ತಿದ್ದರು. ಅವರಷ್ಟು ಬುದ್ಧಿವಂತರು ಇಲ್ಲಿ ಇಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ:ಕಪಿಲ್ ಶರ್ಮಾ ಬಗ್ಗೆ ‘ಶಕ್ತಿಮಾನ್’ ಮಖೇಶ್​ಗೆ ಯಾಕಿಷ್ಟು ಕೋಪ? ಎರಡು ಘಟನೆ ಅವರ ಆಲೋಚನೆ ಬದಲಿಸಿತು

2019ರಲ್ಲಿ ಸಿಧು ಪುಲ್ವಾಮಾ ದಾಳಿಯ ಬಗ್ಗೆ ವಿವಾದಾತ್ಮಕ ಕಾಮೆಂಟ್‌ಗಳಿಂದಾಗಿ ಕಾರ್ಯಕ್ರಮವನ್ನು ತೊರೆಯಬೇಕಾಯಿತು. ‘ಇದೊಂದು ಹೇಡಿತನ ಮತ್ತು ಹೇಯ ಕೃತ್ಯವಾಗಿದ್ದು, ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ. ಹಿಂಸೆಯನ್ನು ಯಾವಾಗಲೂ ಖಂಡಿಸಲಾಗುತ್ತದೆ ಮತ್ತು ಅದನ್ನು ಮಾಡಿದವರಿಗೆ ಶಿಕ್ಷೆಯಾಗಬೇಕು. ಆದರೆ ಬೆರಳೆಣಿಕೆಯ ಜನರಿಗಾಗಿ ನೀವು ಇಡೀ ದೇಶವನ್ನು ದೂಷಿಸಬಹುದೇ? ನೀವು ಒಬ್ಬ ವ್ಯಕ್ತಿಯನ್ನು ದೂಷಿಸಬಹುದೇ?’ ಎಂದು ನವಜೋತ್ ಸಿಂಗ್ ಸಿಧು ಹೇಳಿಕೆ ನೀಡಿದ್ದರು. ಅವರು ಪಾಕಿಸ್ತಾನವನ್ನು ಬೆಂಬಲಿಸಿದರು ಎಂದು ಅನೇಕರು ಅಭಿಪ್ರಾಯಪಟ್ಟರು.

ಆ ಸಮಯದಲ್ಲಿ ‘ದಿ ಕಪಿಲ್ ಶರ್ಮಾ ಶೋ’ ಅನ್ನು ನಿಷೇಧಿಸಬೇಕೆಂದು ಅನೇಕರು ಒತ್ತಾಯಿಸಿದರು. ‘ಬಾಯ್‌ಕಾಟ್ ಸಿದ್ದು’ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿತ್ತು. ಈ ವಿವಾದದ ನಂತರ, ಕಪಿಲ್ ಶರ್ಮಾ ಅವರ ಶೋನಲ್ಲಿ ಸಿಧು ಬದಲಿಗೆ ಅರ್ಚನಾ ಪುರನ್ ಸಿಂಗ್ ಬಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ