ವಿಧಿ ತುಂಬಾ ಕ್ರೂರ; ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ಕಿರುತೆರೆ ನಟಿ ಶ್ರುತಿ

| Updated By: ರಾಜೇಶ್ ದುಗ್ಗುಮನೆ

Updated on: Aug 04, 2023 | 8:36 AM

Sruthi Shanmuga Priya: ಶ್ರುತಿ ಹಾಗೂ ಅರವಿಂದ್ ಅವರು ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಕಳೆದ ವರ್ಷ ಮೇ ತಿಂಗಳಲ್ಲಿ ಇಬ್ಬರೂ ಮದುವೆ ಆದರು. ಆದರೆ, ವಿಧಿ ತನ್ನ ಕ್ರೂರತ್ವ ಮೆರೆದಿದೆ.

ವಿಧಿ ತುಂಬಾ ಕ್ರೂರ; ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ಕಿರುತೆರೆ ನಟಿ ಶ್ರುತಿ
ಶ್ರುತಿ-ಅರವಿಂದ್
Follow us on

ಇತ್ತೀಚೆಗೆ ಹೃದಯಘಾತ ಉಂಟಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಫಿಟ್ ಆಗಿರುವವರು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ. ತಮಿಳು ಕಿರುತೆರೆ ನಟಿ ಶ್ರುತಿ ಶಷ್ಮುಗ ಪ್ರಿಯಾ (Shruti Shanumga Priya) ಅವರ ಪತಿ ಅರವಿಂದ್ ಶೇಖರ್ ಅವರು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಈ ಶಾಕಿಂಗ್ ಘಟನೆಯಿಂದ ಶ್ರುತಿ ಅವರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಅರವಿಂದ್ ಸಾವು ಅನೇಕರಿಗೆ ದುಃಖ ತಂದಿದೆ. ಈ ಶಾಕ್​ನಿಂದ ಶ್ರುತಿ ಹಾಗೂ ಅರವಿಂದ್ (Aravind) ಕುಟುಂಬ ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಶ್ರುತಿ ಹಾಗೂ ಅರವಿಂದ್ ಅವರು ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಕಳೆದ ವರ್ಷ ಮೇ ತಿಂಗಳಲ್ಲಿ ಇಬ್ಬರೂ ಮದುವೆ ಆದರು. ಶ್ರುತಿ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ನಂತರ ಕಿರುತೆರೆಗೆ ಕಾಲಿಟ್ಟರು. ಹಲವು ಸೂಪರ್ ಹಿಟ್​ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ‘ವಾಣಿ ರಾಣಿ’ ಸೇರಿ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಅವರು ಗಮನ ಸೆಳೆದಿದ್ದಾರೆ.

ಶ್ರುತಿ ಶಣ್ಮುಗ ಅವರ ಪತಿ ಅರವಿಂದ್ ಅವರು ಬಾಡಿ ಬಿಲ್ಡರ್ ಆಗಿದ್ದರು. ದೇಹದ ತೂಕ ಇಳಿಸಿಕೊಳ್ಳಲು ಅವರು ಟ್ರೇನಿಂಗ್ ನೀಡುತ್ತಿದ್ದರು. 2022ರ ‘ಮಿಸ್ಟರ್ ತಮಿಳುನಾಡು’ ಕೂಡ ಆಗಿದ್ದರು. ಫಿಟ್ನೆಸ್​ಗೆ ಅವರು ಹೆಚ್ಚು ಒತ್ತು ನೀಡುತ್ತಿದ್ದರು. ಆಗಸ್ಟ್ 2ರ ಸಂಜೆ ಅವರಿಗೆ ಹೃದಯಾಘಾತ ಆಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ.

ಇದನ್ನೂ ಓದಿ: Exclusive: ತಮಿಳುನಾಡಲ್ಲಿ ಕನ್ನಡದ ಕಂಪು ಹರಡಿದ ಸುದೀಪ್: ಮಹಾಬಲಿಪುರಂ ಶೂಟಿಂಗ್ ಸೆಟ್‌ನಲ್ಲಿ ಕನ್ನಡಿಗರ ದರ್ಬಾರು

ಅರವಿಂದ್ ಹಾಗೂ ಶ್ರುತಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಿಂಬಾಲಕರು ಇದ್ದರು. ಅಭಿಮಾನಿಗಳಿಗಾಗಿ ಇವರು ವಿಡಿಯೋ ಹಾಗೂ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದರು. ಆದರೆ, ಅರವಿಂದ್ ಅವರ ನಿಧನ ವಾರ್ತೆ ಈಗ ಅನೇಕರಿಗೆ ಶಾಕ್ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:11 am, Fri, 4 August 23