ಸಿದ್ಧಾರ್ಥ್​ ಶುಕ್ಲಾ ಆಸ್ತಿ ಮೌಲ್ಯ ಎಷ್ಟು, ಅವರ ಬಳಿ ಇದ್ದ ಕಾರುಗಳಾವವು? ಇಲ್ಲಿದೆ ಮಾಹಿತಿ

ಬಿಗ್ ಬಾಸ್ ಸೀಸನ್ 13ರಲ್ಲಿ ಅವರು ವಿನ್ನರ್ ಆದ ಬಳಿಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡರು ಸಿದ್ಧಾರ್ಥ್​. ‘ಕತ್ರೋಂಕೆ ಕಿಲಾಡಿ ಸೀಸನ್ 7’ರಲ್ಲೂ ಅವರು ವಿನ್ನರ್ ಆಗಿದ್ದಾರೆ.

ಸಿದ್ಧಾರ್ಥ್​ ಶುಕ್ಲಾ ಆಸ್ತಿ ಮೌಲ್ಯ ಎಷ್ಟು, ಅವರ ಬಳಿ ಇದ್ದ ಕಾರುಗಳಾವವು? ಇಲ್ಲಿದೆ ಮಾಹಿತಿ
ಸಿದ್ಧಾರ್ಥ್​ ಶುಕ್ಲಾ ಆಸ್ತಿ ಮೌಲ್ಯ ಎಷ್ಟು, ಅವರ ಬಳಿ ಇದ್ದ ಕಾರುಗಳಾವವು? ಇಲ್ಲಿದೆ ಮಾಹಿತಿ
Updated By: ರಾಜೇಶ್ ದುಗ್ಗುಮನೆ

Updated on: Sep 02, 2021 | 4:14 PM

ಹೃದಯಾಘಾತದಿಂದ ಮೃತಪಟ್ಟಿರುವ ನಟ ಸಿದ್ಧಾರ್ಥ್ ಶುಕ್ಲಾ ಅಪಾರ ಅಭಿಮಾನಿಗಳನ್ನು ತೊರೆದು ಹೋಗಿದ್ದಾರೆ. ಮುಂಬೈನ ಕೂಪರ್ ಆಸ್ಪತ್ರೆಯ ವೈದ್ಯರು ಸಿದ್ಧಾರ್ಥ್ ಸಾವನ್ನು ದೃಢಪಡಿಸುತ್ತಿದ್ದಂತೆಯೇ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಹಾಗಾದರೆ, ಸಿದ್ಧಾರ್ಥ್​ ಹೊಂದಿದ್ದ ಆಸ್ತಿ ಮೌಲ್ಯ ಎಷ್ಟು  ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್ ಬಾಸ್ ಸೀಸನ್ 13ರಲ್ಲಿ ಅವರು ವಿನ್ನರ್ ಆದ ಬಳಿಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡರು ಸಿದ್ಧಾರ್ಥ್​. ‘ಕತ್ರೋಂಕೆ ಕಿಲಾಡಿ ಸೀಸನ್ 7’ರಲ್ಲೂ ಅವರು ವಿನ್ನರ್ ಆಗಿದ್ದಾರೆ. ಸೀರಿಯಲ್​​ನಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದು ಮಾತ್ರವಲ್ಲದೆ, ಹಲವು ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ಅತಿಥಿ ಪಾತ್ರ ಮಾಡಿದ್ದರು. ಬಾಲಿವುಡ್​​ನ ಕೆಲವು ಸಿನಿಮಾಗಳಲ್ಲೂ ಕೂಡ ಅವರು ನಟಿಸಿದ್ದರು. ಬಣ್ಣದ ಲೋಕದಿಂದ ಅವರು ಉತ್ತಮ ಗಳಿಕೆ ಮಾಡುತ್ತಿದ್ದರು.

ಕೆಲ ವರದಿ ಪ್ರಕಾರ, ಸಿದ್ಧಾರ್ಥ್ ಶುಕ್ಲಾ ಅವರು 2020ರ ಹೊತ್ತಿಗೆ ಅವರ ಆಸ್ತಿ ಮೌಲ್ಯ 11.25 ಕೋಟಿ ರೂ.ಗಿಂತಲೂ ಹೆಚ್ಚಿತ್ತು ಎನ್ನಲಾಗಿದೆ. ಸಿದ್ಧಾರ್ಥ್ ಶುಕ್ಲಾ ಹೆಚ್ಚಿನ ಗಳಿಕೆಯನ್ನು ಟಿವಿ ಕಾರ್ಯಕ್ರಮ ಮತ್ತು ಬ್ರಾಂಡ್‌ಗಳ ಜಾಹೀರಾತುಗಳಿಂದ ಗಳಿಸಿದ್ದಾರೆ.

ಸಿದ್ಧಾರ್ಥ್ ಅವರು ಮುಂಬೈನಲ್ಲಿ ಮನೆ ಹೊಂದಿದ್ದಾರೆ. ಅಲ್ಲಿ ಅವರು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಅವರು ಇತ್ತೀಚೆಗಷ್ಟೇ ಈ ಮನೆಯನ್ನು ಖರೀದಿಸಿದ್ದರು. ಇನ್ನು, ಸಿದ್ಧಾರ್ಥ್​ಗೆ ವಾಹನಗಳ ಕ್ರೇಜ್​ ಇತ್ತು. ಅವರು BMW X5 ಹಾಗೂ ಹಾರ್ಲೆ-ಡೇವಿಡ್​ಸನ್​ ಬೈಕ್​ ಹೊಂದಿದ್ದರು.

ಔಷಧ ಸೇವಿಸಿದ್ದ ಸಿದ್ಧಾರ್ಥ್​

ಸಿದ್ಧಾರ್ಥ್​ ಶುಕ್ಲಾ ಇಂದು (ಸೆಪ್ಟೆಂಬರ್​ 2) ಮುಂಜಾನೆ 10:30ಕ್ಕೆ ಮೃತಪಟ್ಟಿದ್ದಾರೆ. ಕೂಪರ್​ ಆಸ್ಪತ್ರೆಯವರು ನಟನ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಸಿದ್ಧಾರ್ಥ್​ ಸಾವಿಗೆ ಹೃದಯಾಘಾತ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಸಿದ್ಧಾರ್ಥ್​ ಫಿಟ್​ನೆಸ್​ಗೆ ಹೆಚ್ಚು ಒತ್ತು ನೀಡುತ್ತಿದ್ದರು. ನಿತ್ಯ ಜಿಮ್​ನಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದರು. ಹೀಗಿದ್ದರೂ ಅವರು ಹೃದಯಾಘಾತದಿಂದ ಮೃತಪಟ್ಟಿರುವುದು ಅಭಿಮಾನಿಗಳ ಪಾಲಿಗೆ ಶಾಕಿಂಗ್​ ಸಂಗತಿ.

ಸಿದ್ಧಾರ್ಥ್​ ರಾತ್ರಿ ಮಲಗುವುದಕ್ಕೂ ಮೊದಲು ಔಷಧ ಒಂದನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ. ಆದರೆ, ಮುಂಜಾನೆ ಅವರು ಏಳಲೇ ಇಲ್ಲ. ಅವರು ನಿಜಕ್ಕೂ ಔಷಧ ತೆಗೆದುಕೊಂಡಿದ್ದರಾ? ಹೌದು ಎಂದಾದರೆ ಆ ಔಷಧ ಯಾವುದು? ಅದಕ್ಕೂ ಹೃದಯಾಘಾತಕ್ಕೂ ಏನಾದರೂ ಸಂಬಂಧವಿದೆಯಾ ಎಂಬಿತ್ಯಾದಿ ಪ್ರಶ್ನೆಗೆ ಮರಣೋತ್ತರ ಪರೀಕ್ಷೆಯ ವರದಿಯಿಂದ ಉತ್ತರ ಸಿಗಬೇಕಿದೆ.

ಇದನ್ನೂ ಓದಿ: ಸಿದ್ಧಾರ್ಥ್​ ಶುಕ್ಲಾ ಜೊತೆ ಕೆಲಸ ಮಾಡಿದ್ದ ಸಂಜನಾ ಗಲ್ರಾನಿ; ಜೀವನ ಇಷ್ಟೇನಾ ಎಂದ ನಟಿ 

ನಿದ್ರಿಸುವುದಕ್ಕೂ ಮೊದಲು ಒಂದು ಔಷಧ ತೆಗೆದುಕೊಂಡಿದ್ದ ಸಿದ್ಧಾರ್ಥ್ ಶುಕ್ಲಾ​; ಅನುಮಾನ ಹುಟ್ಟಿಸಿದ ನಟನ ಸಾವು