‘ಬಿಗ್ ಬಾಸ್ ಕನ್ನಡ ಸೀಸನ್ 10’ರ (BBK 10) ಎಂಟನೇ ವಾರ ಹಲವು ವಿಶೇಷತೆಗಳಿಗೆ ಸಾಕ್ಷಿ ಆಯಿತು. ನಾಮಿನೇಟ್ ಆದವರ ಪೈಕಿ ಕೊನೆಯಲ್ಲಿ ಇದ್ದವರು ಮೈಕಲ್ ಅಜಯ್ ಹಾಗೂ ಸ್ನೇಹಿತ್ ಗೌಡ. ಇಬ್ಬರಲ್ಲಿ ಯಾರೊಬ್ಬರನ್ನು ಮನೆಗೆ ಕಳುಹಿಸಲು ಸುದೀಪ್ಗೆ ಇಷ್ಟ ಇರಲಿಲ್ಲ. ಹೀಗಾಗಿ, ವಿಶೇಷ ಅಧಿಕಾರ ಬಳಸಿ ಇಬ್ಬರನ್ನೂ ಅವರು ಸೇವ್ ಮಾಡಿದ್ದಾರೆ. ಅವರು ಈ ರೀತಿ ಮಾಡುತ್ತಿರುವುದು ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲು. ಈಗ ಸ್ನೇಹಿತ್ (Snehit Gowda) ಅವರು ಉತ್ತಮವಾಗಿ ಆಡುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರತಿ ಹಂತದಲ್ಲಿ ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿದ್ದೇನೆ ಎಂದೆನಿಸಿದೆ.
ಕಳೆದ ವಾರದ ಲಕ್ಷುರಿ ಬಜೆಟ್ನಲ್ಲಿ ಸಂಗೀತಾ ಪನೀರ್ ಬೇಕು ಎಂದಿದ್ದರು. ವೆಜ್ ತಿನ್ನುವವರು ಅವರು ಮಾತ್ರ. ಆದರೆ, ಅದಕ್ಕೆ ಯಾರೂ ಪ್ರಾಮುಖ್ಯತೆ ನೀಡಲೇ ಇಲ್ಲ. ಕೇವಲ 10 ಕೆಜಿ ಚಿಕನ್ ತರಿಸಲಾಯಿತು. ಇದು ಸಂಗೀತಾ ಬೇಸರಕ್ಕೆ ಕಾರಣ ಆಗಿದೆ. ಭಾನುವಾರದ ಎಪಿಸೋಡ್ನಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ಸ್ನೇಹಿತ್ ಅವರು, ‘ನಾನು ಯಾರೇ ಇದ್ದರೂ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದೆ’ ಎಂದರು. ಇದಕ್ಕೆ ಸುದೀಪ್ ತಿರುಗೇಟು ಕೊಟ್ಟರು.
‘ಯಾರೇ ಇದ್ದರೂ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದರೇ? ಇದು ಸುಳ್ಳು. ಬಹುಶಃ ಸಂಗೀತಾ ಜಾಗದಲ್ಲಿ ನಮ್ರತಾ ಇದ್ದಿದ್ದರೆ ಲಿಸ್ಟ್ನಲ್ಲಿ ಪನೀರ್ ತುಂಬಿ ಹೋಗುತ್ತಿತ್ತು’ ಎಂದಿದ್ದಾರೆ ಸುದೀಪ್. ಆಗ ಸ್ನೇಹಿತ್ಗೆ ತಾವು ಆ ಮಾತನ್ನು ಹೇಳಬಾರದಿತ್ತು ಎಂದನಿಸಿದೆ. ‘ಬಹುಶಃ ನನ್ನ ಗುಂಡಿಯನ್ನು ನಾನೇ ತೋಡಿಕೊಂಡೆ ಎನಿಸುತ್ತಿದೆ’ ಎಂದು ಸುದೀಪ್ ಎದುರು ಹೇಳಿದರು. ಇದಕ್ಕೆ ಸುದೀಪ್ ಕೊಟ್ಟ ಉತ್ತರ ಮಜವಾಗಿತ್ತು.
ಇದನ್ನೂ ಓದಿ: ‘ಬಿಗ್ ಬಾಸ್ ವಿನ್ ಆಗೋದು ನಾನೇ’ ಎಂದ ವಿನಯ್; ಬೆಂಬಲ ಸೂಚಿಸಿದ ಸ್ನೇಹಿತ್ಗೆ ವೀಕ್ಷಕರ ಪ್ರಶ್ನೆ
‘ನೀವು ಒಂದು ಗುಂಡಿ ತೋಡಿಕೊಂಡಿಲ್ಲ. ವಾರದಲ್ಲಿ ಒಂದೊಂದು ಗುಂಡಿ ತೋಡಿಕೊಂಡು ಸೈಟ್ ಮಾಡಿಕೊಂಡಿದ್ದೀರಿ. ಯಾವ ಗುಂಡಿಯಲ್ಲಿ ಮಲಗ್ತೀರಾ, ಯಾರಿಗೋಸ್ಕರ ಮಲಗ್ತೀರಾ, ಯಾವಾಗ ಮಲಗ್ತೀರಾ ನನಗೆ ಗೊತ್ತಿಲ್ಲ’ ಎಂದರು ಸುದೀಪ್. ಈ ಮಾತನ್ನು ಕೇಳಿ ಎಲ್ಲರೂ ನಕ್ಕರು. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಸೋ ಸಿನಿಮಾದಲ್ಲಿ ಲೈವ್ ನೋಡಲು ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:10 am, Mon, 4 December 23