ಬಿಗ್ ಬಾಸ್ (Bigg Boss) ಮನೆಯಲ್ಲಿ ಕಳಪೆ ನೀಡುವ ವಿಚಾರವನ್ನು ಯಾರೊಂದಿಗೂ ಮಾತನಾಡುವಂತಿಲ್ಲ. ಅಲ್ಲಿ ತಮ್ಮ ನಿರ್ಧಾರ ಏನಿದೆಯೋ ಅದನ್ನು ಮಾತ್ರ ಹೇಳಬೇಕು. ಇದು ಬಿಗ್ ಬಾಸ್ ನಿಯಮ. ಆದರೆ, ಈ ವಾರ ನಿಯಮ ಮೀರಲಾಗಿದೆ. ಕಳಪೆ ಯಾರಿಗೆ ಕೊಡಬೇಕು ಎನ್ನುವ ಬಗ್ಗೆ ಚರ್ಚೆಗಳು ನಡೆದಿವೆ. ವಿನಯ್ ಗೌಡ ಅವರು ಅನೇಕರ ಮೇಲೆ ಪ್ರಭಾವ ಬೀರಿದ್ದಾರೆ. ಕಳಪೆ ಕೊಡುವ ಬಗ್ಗೆ ಓಪನ್ ಆಗಿ ಚರ್ಚೆ ನಡೆದಿದೆ. ಹೀಗಾಗಿ, ಸಂಗೀತಾ ಶೃಂಗೇರಿಗೆ ಕಳಪೆ ಸಿಕ್ಕಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಸಂಗೀತಾ ಪರ ಧ್ವನಿ ಎತ್ತಿದ್ದಾರೆ.
ಸಂಗೀತಾ ಶೃಂಗೇರಿ ಅವರು ಅನೇಕ ವಿಚಾರಗಳ ಬಗ್ಗೆ ಈ ವಾರ ಮಾತನಾಡಿದ್ದಾರೆ. ತಪ್ಪಿದ್ದರೆ ಕ್ಷಮೆ ಕೇಳಿದ್ದಾರೆ ಹಲವರ ಎದುರು ಅವರು ತೊಡೆ ತಟ್ಟಿದ್ದಾರೆ. ಅವರು ಈ ವಾರ ಉತ್ತಮ ಆಗಿರಬೇಕಿತ್ತು ಎಂಬುದು ಅನೇಕರ ಅಭಿಪ್ರಾಯ. ಆದರೆ, ಉತ್ತಮ ಸಿಕ್ಕಿದ್ದು ವಿನಯ್ಗೆ. ಕಳಪೆ ಸಿಕ್ಕಿದ್ದು ಸಂಗೀತಾಗೆ. ಈ ವಿಚಾರ ವೀಕೆಂಡ್ನಲ್ಲಿ ಚರ್ಚೆಗೆ ಬರೋ ಸಾಧ್ಯತೆ ಇದೆ.
ಸೋನು ಶ್ರೀನಿವಾಸ್ ಗೌಡ ಅವರು ಸಂಗೀತಾ ಪರ ಮಾತನಾಡಿದ್ದಾರೆ. ‘ಮೊದಲು ಅವಮಾನ, ಆಮೇಲೆ ಸನ್ಮಾನ’ ಎಂದು ಅವರು ಹೇಳಿದ್ದಾರೆ. ಜೊತೆಗೆ ಬಿಗ್ ಬಾಸ್ ನಿಯಮ ಗೊತ್ತಿಲ್ಲದೆ ಇರುವವರೆಲ್ಲ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ ಎಂದು ಅವರು ಟೀಕೆ ಮಾಡಿದ್ದಾರೆ. ಅವರು ಮಾಡಿರೋ ಪೋಸ್ಟ್ ವೈರಲ್ ಆಗಿದೆ. ಸಂಗೀತಾ ಮಾತ್ರವಲ್ಲದೆ, ಭವ್ಯಾ ಗೌಡ, ದಿವ್ಯಾ ಸುರೇಶ್ ಸೇರಿ ಅನೇಕರು ಸಂಗೀತಾ ಪರ ಮಾತನಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಎಫೆಕ್ಟ್: ‘ಸೀತಾ ರಾಮ’ ಧಾರಾವಾಹಿ ಟಿಆರ್ಪಿಯಲ್ಲಿ ಇಳಿಕೆ; ಇಲ್ಲಿದೆ ವಿವರ
ಕಳೆದ ಸೀಸನ್ಗೆ ಹೋಲಿಕೆ ಮಾಡಿದರೆ ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಚರ್ಚೆ ಆಗುತ್ತಿದೆ. ದೊಡ್ಮನೆಯಲ್ಲಿ ಅನ್ಯಾಯ ನಡೆದಿದ್ದು, ಇದರ ಪರವಾಗಿ ಸುದೀಪ್ ಮಾತನಾಡಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ