
ಇನ್ನೇನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಫಿನಾಲೆ ಬರಲಿದೆ. ಈಗಾಗಲೇ ಆಟ ಕೊನೆಯ ಹಂತವನ್ನು ತಲುಪುತ್ತಿದೆ. 14ನೇ ವಾರಕ್ಕೆ ಸ್ಪರ್ಧಿಗಳು ಕಾಲಿಟ್ಟಿದ್ದಾರೆ. 13ನೇ ವಾರದಲ್ಲಿ ಸೂರಜ್ ಸಿಂಗ್ (Suraj Singh) ಮತ್ತು ಮಾಳು ನಿಪನಾಳ ಅವರು ಎಲಿಮಿನೇಟ್ ಆಗಿದ್ದಾರೆ. ಡಬಲ್ ಎಮಿಲಿನೇಷನ್ನಿಂದ ಬಿಗ್ ಬಾಸ್ ಮನೆಗೆ ಶಾಕ್ ಆಗಿದೆ. ಸ್ಪಂದನಾ ಔಟ್ ಆಗಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಸೂರಜ್ ಔಟ್ ಆದರು. ಎಲಿಮಿನೇಟ್ ಆಗಿ ಹೊರಬಂದ ಸೂರಜ್ ಸಿಂಗ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಗಿಲ್ಲಿ ನಟ (Gilli Nata) ಬಿಗ್ ಬಾಸ್ ವಿನ್ ಆಗೋದು ಖಚಿತ ಎಂದು ಸೂರಜ್ ಹೇಳಿದ್ದಾರೆ.
‘ಟಾಪ್ 5 ಸ್ಥಾನದಲ್ಲಿ ಯಾರೆಲ್ಲ ಇರುತ್ತಾರೆ ಎಂಬುದನ್ನು ಮೊದಲು ಹೇಳಿಬಿಡುತ್ತೇನೆ. ಗಿಲ್ಲಿ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ ಅವರು ಟಾಪ್ 5 ಸ್ಥಾನದಲ್ಲಿ ಇರುತ್ತಾರೆ. ಯಾರು ಗೆಲ್ಲುತ್ತಾರೆ ಅಂತ ಕೇಳಿದರೆ ಶೇಕಡ 100ರಷ್ಟು ಗಿಲ್ಲಿಯೇ ಗೆಲ್ಲುವುದು. ಯಾರು ಗೆಲ್ಲಬೇಕು ಎಂಬುದಕ್ಕೆ 2 ಹೆಸರು ಇದೆ- ಅಶ್ವಿನಿ ಗೌಡ ಮತ್ತು ರಾಶಿಕಾ’ ಎಂದು ಸೂರಜ್ ಸಿಂಗ್ ಉತ್ತರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಘು ಅವರು ಸೈಲೆಂಟ್ ಆಗಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಸೂರಜ್ ಸಿಂಗ್ ವಿವರಿಸಿದ್ದಾರೆ. ‘ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಒಂದು ಹಿಂಟ್ ನೀಡುತ್ತಾರೆ. ಅದನ್ನು ರಘು ಅವರು ಡಿಕೋಡ್ ಮಾಡಲು ಶುರು ಮಾಡುತ್ತಾರೆ. ಎಲ್ಲರ ಬಳಿ ಸಲಹೆ ಕೇಳುತ್ತಾರೆ. ಆ ಯೋಚನೆ ಮಾಡುತ್ತಾ ಮಾಡುತ್ತಾ ಸೈಲೆಂಟ್ ಆಗುತ್ತಾರೆ. ಚರ್ಚೆ ಮಾಡಿದಾಗಲೇ ಅಭಿಪ್ರಾಯಗಳು ಜಾಸ್ತಿ ಬರುವುದು’ ಎಂದಿದ್ದಾರೆ ಸೂರಜ್.
ಗಿಲ್ಲಿ ನಟ ಅವರು ಮೊದಲ ದಿನದಿಂದಲೂ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಅವರ ಕಾಮಿಡಿ ಎಲ್ಲರಿಗೂ ಇಷ್ಟ ಆಗುತ್ತಿದೆ. ಮೊದಲೆಲ್ಲ ಗಿಲ್ಲಿ ವಿರುದ್ಧ ತಿರುಗಿ ಬೀಳುತ್ತಿದ್ದ ಸ್ಪರ್ಧಿಗಳು ಕೂಡ ಈಗ ಗಿಲ್ಲಿಯ ಕಾಮಿಡಿಯನ್ನು ಎಂಜಾಯ್ ಮಾಡಲು ಆರಂಭಿಸಿದ್ದಾರೆ. ಸ್ಪರ್ಧಿಗಳ ಕುಟುಂಬದವರಿಗೂ ಗಿಲ್ಲಿಯ ಆಟ ಇಷ್ಟ ಆಗಿದೆ. ಹಾಗಾಗಿ ಗಿಲ್ಲಿ ಗೆಲ್ಲುವುದು ಖಚಿತ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕಾವ್ಯಾ ಅಪ್ಪ-ಅಮ್ಮನಿಗೂ ಇಷ್ಟವಾದ ಗಿಲ್ಲಿ ನಟ; ಸಿಕ್ತು ವಿಶೇಷ ಉಡುಗೊರೆ
ಕಾವ್ಯಾ ಶೈವ ಅವರು ಗಿಲ್ಲಿ ಜೊತೆ ಕ್ಲೋಸ್ ಆಗಿದ್ದಾರೆ. ಹಾಗಾಗಿ ವೀಕ್ಷಕರ ವೋಟ್ ಹಂಚಿಹೋಗಬಹುದು ಎಂಬ ಅಭಿಪ್ರಾಯ ಹಲವರಿಗೆ ಇತ್ತು. ಆದರೆ ಕಳೆದ ವಾರ ಕಾವ್ಯಾ ಫ್ಯಾಮಿಲಿಯವರು ಬಿಗ್ ಬಾಸ್ ಮನೆಯೊಳಗೆ ಬಂದು ಗಿಲ್ಲಿ ಬಗ್ಗೆ ಮಾತನಾಡಿದ್ದರಿಂದ ಕಾವ್ಯಾಗೆ ನೆಗೆಟಿವ್ ಆಗಿದೆ. ಅದರಿಂದ ಗಿಲ್ಲಿಗೆ ಪ್ಲಸ್ ಆಗುವ ಸಾಧ್ಯತೆ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.