
ತೆಲುಗು ಬಿಗ್ಬಾಸ್ ಸೀಸನ್ 9 ಪ್ರಾರಂಭವಾಗಿದೆ. ಇದೇ ಭಾನುವಾರ ಶೋ ಪ್ರಾರಂಭವಾಗಿದ್ದು 13 ಮಂದಿ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವಿಶೇಷವೆಂದರೆ ಈ 13 ಮಂದಿಯಲ್ಲಿ 6 ಮಂದಿ ಸಾಮಾನ್ಯರು. ಇನ್ನು ಏಳು ಮಂದಿ ಸಿನಿಮಾ ಹಾಗೂ ಧಾರಾವಾಹಿ ಕ್ಷೆತ್ರದ ಸೆಲೆಬ್ರಿಟಿಗಳಾಗಿದ್ದಾರೆ. ತೆಲುಗು ಬಿಗ್ಬಾಸ್ನಲ್ಲಿ ಈ ಬಾರಿ ಎರಡು ಮನೆಗಳಿದ್ದು, ‘ಮನೆ ಮಾಲೀಕರು ಮತ್ತು ಬಾಡಿಗೆದಾರರು’ ಎಂಬ ಕಾನ್ಸೆಪ್ಟ್ ಬಳಸಿ ಮೊದಲ ವಾರ ಆಟ ಆಡಿಸಲಾಗುತ್ತಿದೆ. ತೆಲುಗಿನಲ್ಲಿ ಸಾಮಾನ್ಯರಿಗೆ ಅವಕಾಶ ಸಿಕ್ಕಂತೆ ಕನ್ನಡದಲ್ಲಿಯೂ ಸಿಗುತ್ತದೆಯೇ?
ತೆಲುಗಿನಲ್ಲಿ ಸೈನಿಕ ಕಲ್ಯಾಣ್ ಪಡಲ, ಮಾಸ್ಕ್ ಮ್ಯಾನ್ ಎಂದು ಖ್ಯಾತವಾಗಿರುವ ಯೂಟ್ಯೂಬರ್ ಹರೀಶ್, ಸಾಮಾಜಿಕ ಜಾಲತಾಣದ ಮೂಲಕ ಜನಪ್ರಿಯವಾಗಿರುವ ಡಿಮೋನ್ ಪವನ್, ಯೂಟ್ಯೂಬರ್ ಶ್ರೀಜಾ ದಮ್ಮು, ಯೂಟ್ಯೂಬರ್ ಪ್ರಿಯಾ ಶೆಟ್ಟಿ, ಉದ್ಯಮಿ ಮರ್ಯಾದಾ ಮನೀಷ್ ಅವರುಗಳು ಶ್ರೀಸಾಮಾನ್ಯರ ಕೋಟಾನಲ್ಲಿ ತೆಲುಗು ಬಿಗ್ಬಾಸ್ ಪ್ರವೇಶಿಸಿದ್ದಾರೆ. ಇವರಲ್ಲಿ ಹಲವರು ಮನೆ ಮಾಲೀಕರಾಗಿದ್ದು, ಬಿಗ್ಬಾಸ್ ಮನೆಯ ಸವಲತ್ತುಗಳನ್ನು ಅನುಭವಿಸುತ್ತಿದ್ದಾರೆ.
ಇನ್ನು ಸೆಲೆಬ್ರಿಟಿಗಳ ಕೋಟಾನಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ, ಮತ್ತೊಬ್ಬ ಕನ್ನಡದ ನಟಿ ತನುಜಾ ಪುಟ್ಟಸ್ವಾಮಿ, ಕನ್ನಡದ ಸಿನಿಮಾಗಳು ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಫ್ಲೋರಾ ಸೈನಿ, ಜಬರ್ದಸ್ಥ್ ಕಾಮಿಡಿ ಶೋನಿಂದ ಖ್ಯಾತವಾಗಿರುವ ನಟ ಇಮಾನ್ಯುಯೆಲ್, ಖ್ಯಾತ ಕೊರಿಯೋಗ್ರಾಫರ್ ಶ್ರಷ್ಠಿ ವರ್ಮಾ, ನಟಿ ರಿತು ಚೌಧರಿ, ನಟ ಭರಣಿ ಶಂಕರ್, ಗಾಯಕ, ಸಂಗೀತ ನಿರ್ದೇಶಕ ರಾಮು ರಾಥೋಡ್, ಖ್ಯಾತ ಹಾಸ್ಯನಟ ಸುಮನ್ ಶೆಟ್ಟಿ ಅವರುಗಳು ಎಂಟ್ರಿ ನೀಡಿದ್ದಾರೆ.
ಇದನ್ನೂ ಓದಿ:Bigg Boss Kannada 12: ಮತ್ತೆ ಬಂತು ಬಿಗ್ಬಾಸ್: ಈ ಸಲ ಕಿಚ್ಚು ಹೆಚ್ಚು
ಕನ್ನಡದಲ್ಲಿ ಇದೇ ತಿಂಗಳು 28ರಿಂದ ಬಿಗ್ಬಾಸ್ ಆರಂಭವಾಗುತ್ತಿದ್ದು, ಕನ್ನಡದ ಶೋನಲ್ಲಿ ಸಾಮಾನ್ಯರಿಗೆ ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಸಾಮಾನ್ಯರನ್ನು ಅತಿಥಿಗಳಾಗಿ ಆಹ್ವಾನಿಸಲಾಗುತ್ತದೆ ಎಂದು ಈಗಾಗಲೇ ಆಯೋಜಕರು ಘೋಷಣೆ ಮಾಡಿದ್ದಾರೆ. ಆದರೆ ಸಾಮಾನ್ಯರನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗುತ್ತದೆಯೇ ಇಲ್ಲವೇ ಎಂಬುದು ಖಾತ್ರಿ ಇಲ್ಲ. ಈ ಹಿಂದೆ ಶೋನಲ್ಲಿ ಕೆಲ ಸಾಮಾನ್ಯರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಯಾರೂ ಸಹ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯಲು ವಿಫಲರಾದರು. ಹಾಗಾಗಿ ಆ ಸಂಪ್ರದಾಯಕ್ಕೆ ಬ್ರೇಕ್ ಹಾಕಲಾಗಿತ್ತು. ಆದರೆ ತೆಲುಗಿನಲ್ಲಿ ಸಾಮಾನ್ಯರು ಪ್ರತಿ ಬಾರಿಯೂ ಗಮನ ಸೆಳೆಯುತ್ತಿದ್ದಾರೆ.
ಬಿಗ್ಬಾಸ್ 12 ಸೆಪ್ಟೆಂಬರ್ 28ರಂದು ಪ್ರಾರಂಭ ಆಗಲಿದೆ. ಈ ಬಾರಿಯ ಶೋ ಭಿನ್ನವಾಗಿರಲಿದೆ ಎಂದು ಆಯೋಜಕರು ಹೇಳಿದ್ದಾರೆ. ಸುದೀಪ್ ಅವರೇ ಈ ಬಾರಿಯೂ ಶೋನ ನಿರೂಪಣೆ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ