‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ನಾಳೆ (ಅಕ್ಟೋಬರ್ 8) ಅದ್ದೂರಿಯಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕಿಚ್ಚ ಸುದೀಪ್ (Kichcha Sudeep) ಅವರು ಎಂದಿನ ಜೋಶ್ನಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬಿಗ್ ಬಾಸ್ ಮನೆಗೆ ಯಾರ್ಯಾರು ಬರ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ವೀಕ್ಷಕರಿಗೆ ಕುತೂಹಲ ಇದೆ. ಈ ಮಧ್ಯೆ ಕೆಲವು ವಿಚಾರಗಳು ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಇರದೇ ಇರಲಿ ಎಂಬುದು ಬಿಗ್ ಬಾಸ್ ಅಭಿಮಾನಿಗಳ ಕೋರಿಕೆ. ಅದು ಯಾವುದು? ಆ ಬಗ್ಗೆ ಇಲ್ಲಿದೆ ವಿವರ.
ಲವ್ ನಾಟಕವಾಡಿದರೆ ಬಿಗ್ ಬಾಸ್ ಮನೆಯಲ್ಲಿ ಫೇಮಸ್ ಆಗಬಹುದು ಎಂಬುದು ಕೆಲವರ ಲೆಕ್ಕಾಚಾರ. ಈ ಕಾರಣದಿಂದಲೇ ಕೆಲವರು ಲವ್ ನಾಟಕವಾಡುತ್ತಾರೆ. ಮನೆಯಿಂದ ಹೊರ ಬಂದ ಬಳಿಕ ಆ ಬಗ್ಗೆ ಸುದ್ದಿಯೇ ಇರುವುದಿಲ್ಲ. ಹಲವು ಸೀಸನ್ಗಳಲ್ಲಿ ಇದು ನಡೆದಿದೆ. ಬಿಗ್ ಬಾಸ್ ಮನೆ ಒಳಗೆ ಈ ಬಾರಿ ಲವ್ ನಾಟಕ ಬೇಡ ಎಂಬುದು ಬಹುತೇಕರ ಕೋರಿಕೆ.
ಬಿಗ್ ಬಾಸ್ ಮನೆಯಲ್ಲಿ ದಪ್ಪಗಿದ್ದವರು, ತೆಳ್ಳಗಿದ್ದವರು, ಕಪ್ಪಿದ್ದವರು, ಬೆಳ್ಳಗಿದ್ದವರು ಹೀಗೆ ಎಲ್ಲಾ ರೀತಿಯವರು ಬರುತ್ತಾರೆ. ಬಣ್ಣ, ಜಾತಿ, ದೇಹದ ಗಾತ್ರದ ವಿಚಾರ ಇಟ್ಟುಕೊಂಡು ಕೆಲವೊಮ್ಮೆ ಬಾಡಿ ಶೇಮಿಂಗ್ ಮಾಡಲಾಗಿದೆ. ಈ ರೀತಿ ಮಾಡೋದು ತಪ್ಪು. ಈ ಬಾರಿ ಆ ರೀತಿ ಆಗದಿರಲಿ ಎಂಬುದು ಅನೇಕರ ಕೋರಿಕೆ.
ಹಲವು ರೀತಿಯ ವ್ಯಕ್ತಿತ್ವದವರು ಬಿಗ್ ಬಾಸ್ ಮನೆಗೆ ಬರುತ್ತಾರೆ. ಕೆಲವರು ವಿವಾದ ಮಾಡಿಕೊಂಡು ಬಂದವರೂ ಇದ್ದಿರಬಹುದು. ಈ ವಿಚಾರ ಇಟ್ಟುಕೊಂಡು ಅಶ್ಲೀಲ ಕಮೆಂಟ್ಗಳನ್ನು ಮಾಡಲಾಗುತ್ತದೆ. ಆ ರೀತಿ ಆಗದಿರಲಿ ಎನ್ನುತ್ತಿದ್ದಾರೆ ಅನೇಕರು.
ಸುದೀಪ್ ಅವರು ಖಡಕ್ ನಿರೂಪಕರಾಗಿ ಗಮನ ಸೆಳೆದಿದ್ದಾರೆ. ಅವರು ಎಂದಿಗೂ ಸ್ವಜನಪಕ್ಷಪಾತ ಮಾಡಿಲ್ಲ. ಈ ವರ್ಷವೂ ಅದು ಮುಂದುವರಿಯಲಿ ಎಂಬುದು ಅನೇಕರ ಕೋರಿಕೆ. ಸುದೀಪ್ ಬದಲಾಗುವುದಿಲ್ಲ ಎಂಬುದು ಅನೇಕರ ನಂಬಿಕೆ. ಅವರ ನಿರೂಪಣೆಗಾಗಿ ಸಾಕಷ್ಟು ಮಂದಿ ಕಾದಿದ್ದಾರೆ.
‘ಬಿಗ್ ಬಾಸ್’ನಲ್ಲಿ ಮಾತಿನ ಚಕಮಕಿ ಸಾಮಾನ್ಯ. ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಾರೆ. ಅಲ್ಲೊಮ್ಮೆ ಇಲ್ಲೊಮ್ಮೆ ಕೈಕೈ ಮಿಲಾಯಿಸಿಕೊಂಡ ಉದಾಹರಣೆ ಇದೆ. ಆ ಕ್ಷಣವೇ ಅಂಥ ಸ್ಪರ್ಧಿಗಳನ್ನು ಹೊರಕ್ಕೆ ಕಳುಹಿಸಲಾಗುತ್ತದೆ. ಈ ವರ್ಷ ಆ ರೀತಿ ಆಗದಿರಲಿ ಎಂಬುದು ಅಭಿಮಾನಿಗಳ ಕೋರಿಕೆ.
ಜಗಳಗಳು ನಡೆಯುವಾಗ ಅಶ್ಲೀಲ ಪದ ಬಳಕೆ ಹೇರಳವಾಗಿ ಆಗುತ್ತದೆ. ಇದಕ್ಕೆ ವಾಹಿನಿಯವರು ಮ್ಯೂಟ್ ಹಾಕುತ್ತಾರೆ. ಆದಾಗ್ಯೂ ಈ ರೀತಿಯ ಪದ ಬಳಕೆ ಆಗದಿರಲಿ ಎಂಬುದು ಅನೇಕರ ಕೋರಿಕೆ.
ಪುರುಷ ಸ್ಪರ್ಧಿ ಹಾಗೂ ಮಹಿಳಾ ಸ್ಪರ್ಧಿ ಮಧ್ಯೆ ಸಲುಗೆ ಹೆಚ್ಚಿದರೆ ಅದು ನೋಡುಗರಿಗೆ ಬೇರೆಯದೇ ರೀತಿ ಕಾಣಬಹುದು. ಫ್ಯಾಮಿಲಿ ಆಡಿಯನ್ಸ್ಗೆ ಕೆಲವು ಘಟನೆಗಳು ಮುಜುಗರ ತರಬಹುದು. ಆ ರೀತಿ ಆಗದಿರಲಿ ಅನ್ನೋದು ಕೆಲವರ ಕೋರಿಕೆ.
ಇದನ್ನೂ ಓದಿ: ಒಂಭತ್ತು ವರ್ಷಗಳ ಬಿಗ್ ಬಾಸ್ ಜರ್ನಿ ಹೇಗಿತ್ತು? ವಿಶೇಷ ವಿಡಿಯೋ ಹಂಚಿಕೊಂಡ ಕಲರ್ಸ್
‘ಬಿಗ್ ಬಾಸ್ ಕನ್ನಡ ಸೀಸನ್ 10’ ಭಾನುವಾರ ಸಂಜೆ ಆರು ಗಂಟೆಗೆ ಆರಂಭ ಆಗಲಿದೆ. ಈಗಾಗಲೇ ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ್ದ ಶ್ವಾನ ದೊಡ್ಡ ಮನೆಗೆ ಹೋಗತ್ತದೆ ಅನ್ನೋದನ್ನು ಖಚಿತಪಡಿಸಲಾಗಿದೆ. ಇದನ್ನು ಹೊರತುಪಡಿಸಿ ಮತ್ಯಾರ್ಯಾರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ