‘ಇವರಿಗೆ ಮನುಷ್ಯತ್ವ ಇಲ್ವ?’; ಅಮಾನವೀಯ ಚಾಲೆಂಜ್ ನೀಡಿದ ವಿನಯ್-ಸಂಗೀತಾ ಟೀಂಗೆ ಛೀಮಾರಿ

|

Updated on: Nov 21, 2023 | 10:50 PM

ಸಂಗೀತಾ ತಂಡದವರು ಮೊದಲು ‘ತುಕಾಲಿ ಸಂತೋಷ್ ಹಾಗೂ ಕಾರ್ತಿಕ್ ಅವರು ತಲೆ ಬೋಳಿಸಿಕೊಳ್ಳಬೇಕು’ ಎನ್ನುವ ಚಾಲೆಂಜ್ ಕೊಟ್ಟರು. ಇದನ್ನು ಸಂತೋಷ್ ಹಾಗೂ ಕಾರ್ತಿಕ್ ಸ್ವೀಕರಿಸಿದರು. ಈ ಮೂಲಕ ಇವರ ತಲೆ ಬೋಳಿಸಲಾಯಿತು.

‘ಇವರಿಗೆ ಮನುಷ್ಯತ್ವ ಇಲ್ವ?’; ಅಮಾನವೀಯ ಚಾಲೆಂಜ್ ನೀಡಿದ ವಿನಯ್-ಸಂಗೀತಾ ಟೀಂಗೆ ಛೀಮಾರಿ
ಕಾರ್ತಿಕ್-ಸಂತೋಷ್
Follow us on

ಬಿಗ್ ಬಾಸ್ (Bigg Boss) ಮನೆಯಲ್ಲಿ ಎರಡು ತಂಡ ಮಾಡಲಾಗಿದೆ. ಎರಡೂ ತಂಡಕ್ಕೆ ‘ಉಗ್ರಂ ವೀರಂ’ ಹೆಸರಿನ ಟಾಸ್ಕ್​ ನೀಡಲಾಗಿತ್ತು. ಒಂದು ಟೀಂಗೆ ಸಂಗೀತಾ ಲೀಡರ್ ಆದರೆ, ಮತ್ತೊಂದು ಟೀಂಗೆ ಮೈಕೆಲ್ ಲೀಡರ್​. ಸಂಗೀತಾ ತಂಡದಲ್ಲಿ ವಿನಯ್, ಸಿರಿ, ನಮ್ರತಾ, ಸ್ನೇಹಿತ್ ಮೊದಲಾದವರು ಇದ್ದಾರೆ. ಒಂದು ತಂಡದವರು ಎದುರಾಳಿ ತಂಡಕ್ಕೆ ಚಾಲೆಂಜ್ ನೀಡಬೇಕು. ಈ ಚಾಲೆಂಜ್ ಸ್ವೀಕರಿಸಿ, ಅದನ್ನು ಪೂರ್ಣಗೊಳಿಸಿದರೆ ತಂಡ ಗೆದ್ದಂತೆ. ಒಂದೊಮ್ಮೆ ಆಗದೇ ಇದ್ದರೆ ತಂಡ ಪಾಯಿಂಟ್ ಕಳೆದುಕೊಳ್ಳುತ್ತದೆ. ಈಗ ಸಂಗೀತಾ ಟೀಂ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಅವರು ಕೊಟ್ಟ ಅಮಾನವೀಯ ಟಾಸ್ಕ್ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಸಂಗೀತಾ ತಂಡದವರು ಮೊದಲು ‘ತುಕಾಲಿ ಸಂತೋಷ್ ಹಾಗೂ ಕಾರ್ತಿಕ್ ಅವರು ತಲೆ ಬೋಳಿಸಿಕೊಳ್ಳಬೇಕು’ ಎನ್ನುವ ಚಾಲೆಂಜ್ ಕೊಟ್ಟರು. ಇದನ್ನು ಸಂತೋಷ್ ಹಾಗೂ ಕಾರ್ತಿಕ್ ಸ್ವೀಕರಿಸಿದರು. ಈ ಮೂಲಕ ಇವರ ತಲೆ ಬೋಳಿಸಲಾಯಿತು. ತಲೆ ಬೋಳಿಸುವಾಗ ಸಂಗೀತಾ, ಸಿರಿ ಮೊದಲಾದವರು ಬೇಸರ ಮಾಡಿಕೊಂಡರು.

ಮತ್ತೊಂದು ಟಾಸ್ಕ್​ನಲ್ಲಿ ತನಿಷಾ ಹಾಗೂ ವರ್ತೂರು ಸಂತೋಷ್ ಅವರು ತಲಾ 20 ಹಸಿರು ಮೆಣಸು ತಿನ್ನಬೇಕು ಎನ್ನುವ ಚಾಲೆಂಜ್ ನೀಡಿದರು. ಇದನ್ನೂ ತಂಡ ಸ್ವೀಕರಿಸಿತು. ಹಸಿರು ಮೆಣಸು ತಿಂದು ಟಾಸ್ಕ್ ಪೂರ್ಣ ಮಾಡಿದರು. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾದರು. ಈ ರೀತಿಯ ಚಾಲೆಂಜ್ ನೀಡಿದ ತಂಡದವರ ಬಗ್ಗೆ ಅಪಸ್ವರ ಕೇಳಿ ಬಂದಿದೆ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿರುವ ಗುಂಪುಗಾರಿಕೆ ವಿರುದ್ಧ ಮತ್ತೆ ಸಿಡಿದೆದ್ದ ಕಿಚ್ಚ ಸುದೀಪ್; ಖಡಕ್ ಎಚ್ಚರಿಕೆ

‘ಈ ರೀತಿಯ ಅಮಾನವೀಯ ಚಾಲೆಂಜ್​ನ ಸಂಗೀತಾ ಆ್ಯಂಡ್ ಟೀಂ ಏಕೆ ನೀಡಬೇಕಿತ್ತು’ ಎಂದು ಅನೇಕರು ಹೇಳಿದ್ದಾರೆ. ‘ಒಬ್ಬರ ತಲೆ ಬೋಳಿಸುವುದು ಎಂದರೆ ಅದು ಸಹಜ ವಿಚಾರ ಅಲ್ಲ’ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:48 pm, Tue, 21 November 23