ಸಂಗೀತಾ ಶೃಂಗೇರಿ ಮಾಡುತ್ತಿರುವ ಈ ತಪ್ಪನ್ನು ವೀಕ್ಷಕರು ಎಂದಿಗೂ ಕ್ಷಮಿಸಲ್ಲ..

ತನಿಷಾ ಹಾಗೂ ಕಾರ್ತಿಕ್​ನಿಂದ ತಮಗೆ ಅನ್ಯಾಯ ಆಗಿದೆ ಎಂದು ಸಂಗೀತಾ ಆರೋಪಿಸಿದ್ದರು. ಈ ಆರೋಪ ತಪ್ಪು ಎಂದು ಸ್ವತಃ ಸುದೀಪ್ ಅವರೇ ಹೇಳಿದ್ದಾರೆ. ಇದಾದ ಬಳಿಕ ಸಂಗೀತಾ ಆಟವನ್ನು ಬದಲಿಸಿಕೊಂಡಂತೆ ಕಾಣುತ್ತಿದೆ.

ಸಂಗೀತಾ ಶೃಂಗೇರಿ ಮಾಡುತ್ತಿರುವ ಈ ತಪ್ಪನ್ನು ವೀಕ್ಷಕರು ಎಂದಿಗೂ ಕ್ಷಮಿಸಲ್ಲ..
ಸಂಗೀತಾ
Follow us
ರಾಜೇಶ್ ದುಗ್ಗುಮನೆ
|

Updated on: Nov 21, 2023 | 5:20 PM

ಸಂಗೀತಾ ಶೃಂಗೇರಿ (Sangeetha Sringeri) ಅವರು ಡಾಮಿನೇಟ್ ಮಾಡುತ್ತಿದ್ದಾರೆ ಎನ್ನುವ ಮಾತನ್ನು ಸುದೀಪ್ ಅವರೇ ಹೇಳಿದ್ದಾರೆ. ಅವರು ಈ ಡಾಮಿನೇಷನ್​ನಿಂದ ಕಾರ್ತಿಕ್ ಹಾಗೂ ತನಿಷಾ ಗೇಮ್​ ಮೇಲೆ ಎಫೆಕ್ಟ್ ಆಗುತ್ತಿದೆ. ಕಳೆದ ವಾರ ನಡೆದ ಕಿತ್ತಾಟದಿಂದ ತನಿಷಾ ಹಾಗೂ ಕಾರ್ತಿಕ್ ಗುಂಪಿನಿಂದ ಸಂಗೀತಾ ಹೊರ ನಡೆದಿದ್ದಾರೆ. ಅಲ್ಲದೇ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದು ವೀಕ್ಷಕರಿಗೆ ಎದ್ದು ಕಾಣುತ್ತಿದೆ. ಅವರು ಈ ಹಂತಕ್ಕೆ ಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ತನಿಷಾ ಹಾಗೂ ಕಾರ್ತಿಕ್​ನಿಂದ ತಮಗೆ ಅನ್ಯಾಯ ಆಗಿದೆ ಎಂದು ಸಂಗೀತಾ ಆರೋಪಿಸಿದ್ದರು. ಈ ಆರೋಪ ತಪ್ಪು ಎಂದು ಸ್ವತಃ ಸುದೀಪ್ ಅವರೇ ಹೇಳಿದ್ದಾರೆ. ಇದಾದ ಬಳಿಕ ಸಂಗೀತಾ ಆಟವನ್ನು ಬದಲಿಸಿಕೊಂಡಂತೆ ಕಾಣುತ್ತಿದೆ. ಸಂಗೀತಾ ಈಗ ದ್ವೇಷದ ಆಟಕ್ಕೆ ಇಳಿದಿದ್ದಾರೆ. ಕಾರ್ತಿಕ್ ಹಾಗೂ ತನಿಷಾ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ.

ನಾಮಿನೇಷನ್ ವಿಚಾರದಲ್ಲಿ ತನಿಷಾ ಅವರ ಹೆಸರನ್ನು ತೆಗೆದುಕೊಂಡರು ಸಂಗೀತಾ. ಇದು ಯಾರಿಗೂ ಅಚ್ಚರಿ ಎನಿಸಲಿಲ್ಲ. ಟಾಸ್ಕ್ ವೇಳೆ ಕಾರ್ತಿಕ್​ಗೆ ಕೂದಲು ಬೋಳಿಸಿಕೊಳ್ಳುವಂತೆ ಸಂಗೀತಾ ಚಾಲೆಂಜ್ ಮಾಡಿದರು. ಈ ಚಾಲೆಂಜ್​ನ ಸ್ವೀಕರಿಸಿದರು ಕಾರ್ತಿಕ್. ಇನ್ನು, ತನಿಷಾ ಹಾಗೂ ವರ್ತೂರು ಸಂತೋಷ್​ಗೆ 20 ಹಸಿ ಮೆಣಸು ತಿನ್ನುವ ಚಾಲೆಂಜ್ ನೀಡಿದ್ದಾರೆ. ಇದನ್ನು ತನಿಷಾ ಒಪ್ಪಿಕೊಂಡಿದ್ದಾರೆ.

ಸಂಗೀತಾ ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಅವರು ಈ ರೀತಿ ಮಾಡಬಾರದು ಎಂದು ಅನೇಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಅವರು ಕೂಡ ಈ ವಾರದ ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಈಗ ಅವರು ನಡೆದುಕೊಳ್ಳುತ್ತಿರುವ ರೀತಿಯಿಂದ ಕಡಿಮೆ ವೋಟ್ ಪಡೆದರೂ ಅಚ್ಚರಿ ಏನಿಲ್ಲ ಎಂಬುದು ಅನೇಕರ ಅಭಿಪ್ರಾಯ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿರುವ ಗುಂಪುಗಾರಿಕೆ ವಿರುದ್ಧ ಮತ್ತೆ ಸಿಡಿದೆದ್ದ ಕಿಚ್ಚ ಸುದೀಪ್; ಖಡಕ್ ಎಚ್ಚರಿಕೆ

ಈ ಬಾರಿ ಬಿಗ್ ಬಾಸ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಆಗುತ್ತಿದೆ. ದಿನದ 24 ಗಂಟೆ ಉಚಿತವಾಗಿ ಬಿಗ್ ಬಾಸ್ ನೋಡುವ ಅವಕಾಶವನ್ನು ಜಿಯೋ ಸಿನಿಮಾದಲ್ಲಿ ಒದಗಿಸಲಾಗಿದೆ. ಹೀಗಾಗಿ ಫನ್ ಮತ್ತಷ್ಟು ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?