ಅದೇ ರಾಗ, ಅದೇ ಹಾಡು; ಎಷ್ಟೇ ಬುದ್ಧಿ ಹೇಳಿದರೂ ಬದಲಾಗಿಲ್ಲ ತ್ರಿವಿಕ್ರಂ ಹಾಗೂ ಭವ್ಯಾ

|

Updated on: Jan 06, 2025 | 7:36 AM

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಭವ್ಯಾ ಮತ್ತು ತ್ರಿವಿಕ್ರಂ ನಡುವಿನ ಆಪ್ತ ಸಂಬಂಧ ಕುಟುಂಬದ ಎಚ್ಚರಿಕೆಗಳ ಹೊರತಾಗಿಯೂ ಮುಂದುವರಿದಿದೆ. ಸುದೀಪ್ ಅವರ ಎಚ್ಚರಿಕೆಗಳು ಮತ್ತು ಕುಟುಂಬದ ಸಲಹೆಗಳನ್ನು ಲೆಕ್ಕಿಸದೆ ಇಬ್ಬರೂ ಹತ್ತಿರವಾಗುತ್ತಿದ್ದಾರೆ. ಇವರ ಬಾಂಡಿಂಗ್ ಆಟದ ಮೇಲೆ ಏನು ಪರಿಣಾಮ ಬೀರುತ್ತಿದೆ.

ಅದೇ ರಾಗ, ಅದೇ ಹಾಡು; ಎಷ್ಟೇ ಬುದ್ಧಿ ಹೇಳಿದರೂ ಬದಲಾಗಿಲ್ಲ ತ್ರಿವಿಕ್ರಂ ಹಾಗೂ ಭವ್ಯಾ
ಸುದೀಪ್​-ಭವ್ಯಾ-ತ್ರಿವಿಕ್ರಂ
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಈ ಬಾಂಡಿಂಗ್ ನೋಡಿ ಸ್ವತಃ ತ್ರಿವಿಕ್ರಂ ತಾಯಿ ‘ನೀವು ರಾಧೆ-ಕೃಷ್ಣನ ರೀತಿ ಇದ್ದೀರಿ’ ಎಂದು ಹೇಳಿದ್ದರು. ಭವ್ಯಾ ಸ್ವಾರ್ಥದ ಆಟ ಆಡುತ್ತಿದ್ದು, ಇದರಿಂದ ತ್ರಿವಿಕ್ರಂ ಆಟದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವ ಬಗ್ಗೆಯೂ ಕುಟುಂಬದವರು ಎಚ್ಚರಿಸಿದ್ದರು. ಆ ಬಳಿಕ ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದರು. ಒಬ್ಬರನ್ನೊಬ್ಬರು ಪರಸ್ಪರ ದೂರ ಇಡುವ ಬಗ್ಗೆ ಶಪಥ ಮಾಡಿದರು. ಆದರೆ, ಇವರು ಬದಲಾಗಿಲ್ಲ.

ಸುದೀಪ್ ಅವರು ಅನೇಕ ಬಾರಿ ತ್ರಿವಿಕ್ರಂ ಬಳಿ ನಿಮ್ಮ ಆಟ ಡಲ್ ಆಗುತ್ತಿದೆ ಎಂದು ಹೇಳುತ್ತಲೇ ಬಂದರು. ಆದಾಗ್ಯೂ ತ್ರಿವಿಕ್ರಂ ಬದಲಾಗಿಲ್ಲ. ಭವ್ಯಾ ಹಾಗೂ ತ್ರಿವಿಕ್ರಂ ಮಧ್ಯೆ ಇರುವ ಬಾಂಡಿಂಗ್ ಹೆಚ್ಚಾಯಿತು. ಇತ್ತೀಚಿಗೆ ತ್ರಿವಿಕ್ರಂ ಅವರ ಕುಟುಂಬದವರು ಬಂದಾಗ ಭವ್ಯಾ ಅವರಿಂದ ದೂರ ಇರುವಂತೆ ಹೇಳಿದ್ದರು. ಭವ್ಯಾ ಅವರ ಅಕ್ಕ ದಿವ್ಯಾ ಕೂಡ, ‘ವೈಯಕ್ತಿಕವಾಗಿ ಆಡು, ವೈಯಕ್ತಿಕವಾಗಿ ನಿರ್ಧಾರಗಳನ್ನು ತೆಗೆದುಕೋ’ ಎಂದಿದ್ದರು.

ಇದಾದ ಬಳಿಕ ನೀಡಿದ ಚಟುವಟಿಕೆಯಲ್ಲಿ ಭವ್ಯಾ ಅವರು ತ್ರಿವಿಕ್ರಂನ ಹಾಗೂ ತ್ರಿವಿಕ್ರಂ ಅವರು ಭವ್ಯಾನ ವೈಯಕ್ತಿಕವಾಗಿ ದೂರ ಇಡೋ ಬಗ್ಗೆ ಹೇಳಿದರು. ‘ಇವರನ್ನು ದೂರ ಇಟ್ಟರೆ ಆಟ ವೇಗವಾಗುತ್ತದೆ’ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದರು. ಆದರೆ, ಯಾವುದೂ ಬದಲಾಗಿಲ್ಲ. ಭವ್ಯಾ ಹಾಗೂ ತ್ರಿವಿಕ್ರಂ ಮತ್ತೆ ಜೊತೆಯಾಗಿದ್ದಾರೆ. ಒಟ್ಟಿಗೆ ಕುಳಿತುಕೊಳ್ಳುತ್ತಿದ್ದಾರೆ. ಒಟ್ಟಿಗೆ ಟಾಸ್ಕ್ ಆಡುತ್ತಿದ್ದಾರೆ. ಈ ವಿಚಾರದಲ್ಲಿ ಸುದೀಪ್ ಅವರು ಮುಂದಿನ ದಿನಗಳಲ್ಲಿ ಯಾವ ರೀತಿಯ ಅಭಿಪ್ರಾಯ ಹೊರಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ತ್ರಿವಿಕ್ರಂ ಕಾಲ ಮೇಲೆ ಮಗುವಿನಂತೆ ಮಲಗಿ ಅತ್ತ ಭವ್ಯಾ ಗೌಡ

ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಇದನ್ನು ಕೆಲವರು ಪ್ರೀತಿ ಎಂದು ಕರೆದಿದ್ದೂ ಇದೆ. ಆದರೆ, ಇದನ್ನು ಜೋಡಿ ಒಪ್ಪುತ್ತಿಲ್ಲ. ನಮ್ಮ ಮಧ್ಯೆ ಇರುವುದು ಗೆಳೆತನ ಮಾತ್ರ ಎಂದು ಪದೇ ಪದೇ ಹೇಳುತ್ತಲೇ ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಗೆಳೆತನ ಹೇಗೆ ಸಾಗುತ್ತದೆ, ಆಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:35 am, Mon, 6 January 25