- Kannada News Photo gallery Bhavya Gowda cried on the lap of Trivikram video goes viral Cinema News in Kannada
ತ್ರಿವಿಕ್ರಂ ಕಾಲ ಮೇಲೆ ಮಗುವಿನಂತೆ ಮಲಗಿ ಅತ್ತ ಭವ್ಯಾ ಗೌಡ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಅವರ ಬಾಂಡಿಂಗ್ ಹೆಚ್ಚುತ್ತಲೇ ಇದೆ. ಇಬ್ಬರ ಮಧ್ಯೆ ಒಳ್ಳೆಯ ಆಪ್ತತೆ ಬೆಳೆದಿದೆ. ಭವ್ಯಾ ಏನೇ ಆದರೂ ಹೋಗೋದು ತ್ರಿವಿಕ್ರಂ ಬಳಿ. ದುಃಖ ಇರಲಿ, ಸುಖ ಇರಲಿ ಅವರು ತ್ರಿವಿಕ್ರಂ ಜೊತೆ ಎಲ್ಲವನ್ನೂ ಶೇರ್ ಮಾಡಿಕೊಳ್ಳುತ್ತಾರೆ. ಈಗಲೂ ಅವರು ತ್ರಿವಿಕ್ರಂ ಕಾಲ ಮೇಲೆ ಮಲಗಿ ಅತ್ತಿದ್ದಾರೆ.
Updated on:Dec 30, 2024 | 1:44 PM

ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಆರೋಪ ಹೊತ್ತಿದ್ದಾರೆ. ಮೊಸದ ಆಟ ಆಡಿ ಅವರು ಕ್ಯಾಪ್ಟನ್ ಆಗಿರುವ ಮಾತು ಕೇಳಿ ಬಂದಿದೆ. ಇದರಲ್ಲಿ ಅವರು ತಮ್ಮ ತಪ್ಪಿಲ್ಲ ಎಂದು ಹೇಳುವ ಪ್ರಯತ್ನ ಮಾಡಿದರು. ಆದರೆ, ಸುದೀಪ್ ಇದನ್ನು ಒಪ್ಪಿಲ್ಲ.

ಸುದೀಪ್ ಅವರು ಭವ್ಯಾ ಗೌಡ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ‘ನೀವು ಗೊತ್ತಿದ್ದೂ ಮಾಡಿದ ತಪ್ಪು ಇದು’ ಎಂದು ನೇರವಾಗಿ ಹೇಳಿದರು. ಈ ವಿಚಾರ ಭವ್ಯಾಗೆ ಸಾಕಷ್ಟು ನೋವು ತಂದಿದೆ. ಅವರು ಎಪಿಸೋಡ್ ಮುಗಿದ ಬಳಿಕ ಕಣ್ಣೀರು ಹಾಕಿದ್ದಾರೆ.

ಭವ್ಯಾ ಏನೇ ಆದರೂ ಹೋಗೋದು ತ್ರಿವಿಕ್ರಂ ಬಳಿ. ದುಃಖ ಇರಲಿ, ಸುಖ ಇರಲಿ ಅವರು ತ್ರಿವಿಕ್ರಂ ಜೊತೆ ಎಲ್ಲವನ್ನೂ ಶೇರ್ ಮಾಡಿಕೊಳ್ಳುತ್ತಾರೆ. ಎಪಿಸೋಡ್ ಮುಗಿದ ಬಳಿಕ ಅವರು ತ್ರಿವಿಕ್ರಂ ಜೊತೆ ಈ ವಿಚಾರವನ್ನು ಚರ್ಚೆ ಮಾಡಿದ್ದಾರೆ.

ತ್ರಿವಿಕ್ರಂ ಎದುರು ಭವ್ಯಾ ಕಣ್ಣೀರು ಹಾಕಿದರು. ಆ ಬಳಿಕ ತೊಡೆಯ ಮೇಲೆ ಮಲಗಿ ಮಗುವಿನಂತೆ ಕಣ್ಣೀರು ಹಾಕಿದರು. ಈ ವೇಳೆ ತ್ರಿವಿಕ್ರಂ ಅವರು ಭವ್ಯಾನ ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಆದರೆ, ಭವ್ಯಾಗೆ ಸಮಾಧಾನ ಆಗಲೇ ಇಲ್ಲ.

‘ನನ್ನನ್ನು ಎಲ್ಲರೂ ಇನ್ನು ಬೇರೆಯದೇ ರೀತಿ ನೋಡ್ತಾರೆ’ ಎಂದು ತ್ರಿವಿಕ್ರಂ ಬಳಿ ಭವ್ಯಾ ಅವರು ಹೇಳಿದರು. ಆಗ ತ್ರಿವಿಕ್ರಂ ಅವರು ಭವ್ಯಾಗೆ ಸಮಾಧಾನ ಹೇಳಿದರು. ‘ಎಲ್ಲರೂ ತಪ್ಪು ಮಾಡುತ್ತಾರೆ. ನೀನು ತಪ್ಪು ಮಾಡಿದ್ದೀಯಾ ಅಷ್ಟೇ’ ಎಂದರು.
Published On - 11:01 am, Mon, 30 December 24



















