ತ್ರಿವಿಕ್ರಮ್ ಅವರು ಕಳೆದ ವಾರ ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದರು. ಅವರ ಆ ನಿರ್ಧಾರಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಅದಕ್ಕಿಂತಲೂ ಹೆಚ್ಚು ಅಚ್ಚರಿಯ ವಿಷಯ ಏನು ಎಂದರೆ, ಭಾನುವಾರ (ಡಿಸೆಂಬರ್ 22) ತ್ರಿವಿಕ್ರಮ್ ಎಲಿಮಿನೇಟ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ತಿಳಿಸಿದರು. ಆಗ ಬಹುತೇಕರಿಗೆ ಶಾಕ್ ಆಯಿತು. ಆದರೆ ಸೋಮವಾರ (ಡಿ.23) ತ್ರಿವಿಕ್ರಮ್ ವಾಪಸ್ ಬಂದಿದ್ದಾರೆ. ಅವರನ್ನು ಎಲಿಮಿನೇಟ್ ಅಂತ ಹೊರಗೆ ಕಳಿಸಿ ಮತ್ತೆ ಒಳಗೆ ಕರೆದುಕೊಂಡಿದ್ದು ಯಾಕೆ ಎಂಬುದನ್ನು ಕೂಡ ಸುದೀಪ್ ವಿವರಿಸಿದರು. ‘ತ್ರಿವಿಕ್ರಮ್ಗೆ ಸ್ವಲ್ಪ ಬಿಸಿ ಮುಟ್ಟಿಸಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ವಿ. ಈ ವಾರ ಓಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ’ ಎಂದು ಸುದೀಪ್ ಹೇಳಿದರು.
ದೊಡ್ಮನೆಯಲ್ಲಿ ತ್ರಿವಿಕ್ರಮ್ ಅವರು ಸ್ಟ್ರಾಂಗ್ ಸ್ಪರ್ಧಿ ಎಂಬುದು ನಿಜ. ಆದರೆ ಅವರಿಗೆ ಓವರ್ ಕಾನ್ಫಿಡೆನ್ಸ್ ಕೂಡ ಇದೆ. ಅದೇ ಕಾರಣಕ್ಕೆ ಅವರು ತಮ್ಮನ್ನು ತಾವು ನಾಮಿನೇಟ್ ಮಾಡಿಕೊಂಡಿದ್ದರು. ‘ಸೇವ್ ಆಗುತ್ತೇನೆ ಎಂಬ ಕಾನ್ಫಿಡೆನ್ಸ್ ನಿಮಗೆ ಇದೆಯಾ’ ಎಂದು ಸುದೀಪ್ ಅವರು ಪ್ರಶ್ನೆ ಮಾಡಿದ್ದರು. ಈಗ ಅವರು ಮತ್ತೆ ವಾಪಸ್ ಬಂದಿದ್ದಾರೆ. ಅವರ ಆಟ ಹೇಗಿರಲಿದೆ ಎಂಬುದನ್ನು ನೋಡಬೇಕಿದೆ.
ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಕ್ಲೋಸ್ ಆಗಿದ್ದಾರೆ. ತ್ರಿವಿಕ್ರಮ್ ಎಲಿಮಿನೇಟ್ ಆಗುತ್ತಿದ್ದಾರೆ ಎಂದು ಸುದೀಪ್ ಘೋಷಿಸಿದ್ದಾಗ ಭವ್ಯಾ ಸಿಕ್ಕಾಪಟ್ಟೆ ಅತ್ತಿದ್ದರು. ಈಗ ತ್ರಿವಿಕ್ರಮ್ ವಾಪಸ್ ಬಂದಿರುವುದು ಭವ್ಯಾ ಅವರಿಗೆ ಖುಷಿ ಆಗಿದೆ. ಇನ್ನು, ಬಿಗ್ ಬಾಸ್ ಆಟದಲ್ಲಿ ಉಳಿದಿರುವುದು ಕೆಲವೇ ದಿನಗಳು ಮಾತ್ರ. ಹಾಗಾಗಿ ಎಲ್ಲರೂ ವೈಯಕ್ತಿಕ ಆಟದ ಕಡೆಗೆ ಹೆಚ್ಚು ಗಮನ ನೀಡಬೇಕಿದೆ.
ಇದನ್ನೂ ಓದಿ: ಮ್ಯಾಕ್ಸ್ ಟ್ರೇಲರ್: ರಗಡ್ ಲುಕ್ನಲ್ಲಿ ಮಾಸ್ ಆಗಿ ಕಾಣಿಸಿಕೊಂಡ ಕಿಚ್ಚ ಸುದೀಪ್
ಭವ್ಯಾ ಗೌಡ ಅವರು ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ ಅವರು ಮುಂದಿನ ವಾರಕ್ಕೆ ಬರುವುದು ಖಚಿತ. ತ್ರಿವಿಕ್ರಮ್ ಜೊತೆ ಹೆಚ್ಚು ಕಾಲ ಕಳೆದರೆ ಭವ್ಯಾ ಗೌಡ ಆಟಕ್ಕೆ ನಂತರದಲ್ಲಿ ತೊಂದರೆ ಆಗಬಹುದು. ತ್ರಿವಿಕ್ರಮ್ ಅವರು ಕೂಡ ತಮ್ಮ ವೈಯಕ್ತಿಕ ಆಟದ ಕಡೆಗೆ ಹೆಚ್ಚು ಗಮನ ನೀಡಬೇಕಿದೆ. ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಅವರಿಗೂ ಇದೇ ಮಾತು ಅನ್ವಯ ಆಗಲಿದೆ. ಬಿಗ್ ಬಾಸ್ ಮನೆಯಲ್ಲಿ 85 ದಿನಗಳು ಕಳೆದಿವೆ. 12 ವಾರಗಳ ಕಳೆದಿದ್ದು, ಈಗ ಆಟದ ತೀವ್ರತೆ ಹೆಚ್ಚುತ್ತಿದೆ. ಮುಂದಿನ ವಾರ ಖಂಡಿತವಾಗಿ ಎಲಿಮಿನೇಷನ್ ಇರಲಿದೆ. ಡಬಲ್ ಎಲಿಮಿನೇಷನ್ ಮತ್ತು ಮಿಡ್ ವೀಕ್ ಎಲಿಮಿನೇಷನ್ನ ಶಾಕ್ ಕೂಡ ಎದುರಾಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.