ಕಪ್ ಗೆಲ್ಲದ್ದಕ್ಕೆ ಬೇಸರ ಇಲ್ಲ ಎಂದ ತ್ರಿವಿಕ್ರಮ್​ಗೆ ಸರಿಯಾಗಿ ಉರಿಸಿದ ಸೃಜನ್ ಲೋಕೇಶ್

ಬಿಗ್ ಬಾಸ್ ಕನ್ನಡ ಸೀಸನ್ 11 ರ ರನ್ನರ್ ಅಪ್ ತ್ರಿವಿಕ್ರಮ್ ಅವರು ಮಜಾ ಟಾಕೀಸ್ ವೇದಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಬಿಗ್ ಬಾಸ್ ಮನೆಯಲ್ಲಿ ಕಪ್ ಗೆಲ್ಲುವ ಆಶಯದೊಂದಿಗೆ ಪ್ರವೇಶಿಸಿದ್ದ ತ್ರಿವಿಕ್ರಮ್ ಅವರಿಗೆ ಅದು ಸಾಧ್ಯವಾಗಲಿಲ್ಲ. ಸೃಜನ್ ಲೋಕೇಶ್ ಅವರೊಂದಿಗೆ ಈ ಬಗ್ಗೆ ತ್ರಿವಿಕ್ರಮ್ ಮಾತನಾಡಿದ್ದಾರೆ.

ಕಪ್ ಗೆಲ್ಲದ್ದಕ್ಕೆ ಬೇಸರ ಇಲ್ಲ ಎಂದ ತ್ರಿವಿಕ್ರಮ್​ಗೆ ಸರಿಯಾಗಿ ಉರಿಸಿದ ಸೃಜನ್ ಲೋಕೇಶ್
ಸೃಜನ್-ತ್ರಿವಿಕ್ರಮ್
Edited By:

Updated on: Feb 10, 2025 | 7:44 AM

ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆಗೆ ಕಪ್​ ಗೆಲ್ಲಬೇಕು ಎಂದು ಎಂಟ್ರಿ ಪಡೆದವರು. ಆದರೆ, ಕಪ್ ಗೆಲ್ಲೋಕೆ ಸಾಧ್ಯವಾಗಲೇ ಇಲ್ಲ. ಅವರು ರನ್ನರ್ ಅಪ್​ ಆದರು. ಈ ಬಗ್ಗೆ ಬೇಸರ ಇಲ್ಲ ಎಂದು ತ್ರಿವಿಕ್ರಮ್ ಅನೇಕ ಬಾರಿ ಹೇಳಿಕೊಂಡಿದ್ದು ಇದೆ. ಇದನ್ನೇ ಅವರು ಮಜಾ ಟಾಕೀಸ್ ವೇದಿಕೆ ಮೇಲೂ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ವಿಚಾರದಲ್ಲಿ ಅವರು ಸೃಜನ್ ಲೋಕೇಶ್ ಅವರಿಂದ ಸರಿಯಾದ ಟಾಂಗ್ ಪಡೆದುಕೊಳ್ಳುವಂತಾಯಿತು. ಅಷ್ಟಕ್ಕೂ ವೇದಿಕೆ ಮೇಲೆ ಏನಾಯಿತು ಎಂಬುದರ ಬಗ್ಗೆ ಇಲ್ಲಿದೆ ವಿವರ.

ಈ ಬಾರಿಯ ಮಜಾ ಟಾಕೀಸ್ ವೇದಿಕೆ ಸಖತ್ ಕಲರ್​ಫುಲ್ ಆಗಿತ್ತು. ಮಜಾ ಮನೆಗೆ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಗಳಾದ ಉಗ್ರಂ ಮಂಜು, ಗೌತಮಿ, ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಅವರು ಮಜಾ ಟಾಕೀಸ್​ಗೆ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಸಾಕಷ್ಟು ಮನರಂಜನೆ ನೀಡುವ ಕೆಲಸ ಮಾಡಿದರು.

ತ್ರಿವಿಕ್ರಂ ಅವರನ್ನು ಖುಷಿಯಿಂದ ಸ್ವಾಗತಿಸಿದರು ಸೃಜನ್. ‘ಬಿಗ್ ಬಾಸ್ ಮನೆಯಿಂದ ಬಂದಿದ್ದು ಹೇಗೆ ಅನಿಸುತ್ತಿದೆ’ ಎಂದು ಸೃಜನ್ ಅವರು ಎಲ್ಲರ ಬಳಿಯೂ ಪ್ರಶ್ನೆ ಮಾಡಿದರು. ಇದಕ್ಕೆ ತ್ರಿವಿಕ್ರಮ್ ಅವರು ಖುಷಿಯಿಂದ ಉತ್ತರ ನೀಡಿದರು. ‘ಫೀಲಿಂಗ್​ ಗುಡ್ ಅಣ್ಣ. ವೇದಿಕೆ ಮೇಲೆ ಕೊನೆವರೆಗೆ ಇರಬೇಕು ಎಂದು ಹೋಗುವಾಗ ಅಂದುಕೊಂಡಿದ್ದೆ. ಹಾಗೆಯೇ ಇದ್ದೇನೆ’ ಎಂದರು.

ಆಗ ಸೃಜನ್ ಲೋಕೇಶ್ ಅವರು ಕೌಂಟರ್ ಕೊಟ್ಟರು. ‘ಈ ಡವ್​ ನನ್ನ ಬಳಿ ಮಾಡಬೇಡ. ನಾನು ರನ್ನರ್​ಅಪ್​ ಆಗಿದ್ದೇನೆ. ಅಲ್ಲಿ ಹೇಗೆ ಉರೀತಾ ಇರುತ್ತದೆ ಅನ್ನೋದು ನನಗೂ ಗೊತ್ತಿರುತ್ತದೆ’ ಎಂದರು ಸೃಜನ್. ಇದನ್ನು ಕೇಳಿ ತ್ರಿವಿಕ್ರಮ್ ಅವರು ನಕ್ಕರು.

ಇದನ್ನೂ ಓದಿ: ‘ಬಿಗ್ ಬಾಸ್​ನಿಂದ 50 ಲಕ್ಷ ರೂಪಾಯಿ ಇನ್ನೂ ಬಂದಿಲ್ಲ’: ವೇದಿಕೆಯಲ್ಲೇ ಹೇಳಿದ ಹನುಮಂತ

ಬಿಗ್ ಬಾಸ್ ಗೆದ್ದೇ ಗೆಲ್ಲುತ್ತೇನೆ ಎನ್ನುವ ಕಾನ್ಫಿಡೆನ್ಸ್ ಅವರಲ್ಲಿ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ. ಸುಮಾರು ಮೂರು ಕೋಟಿ ವೋಟ್ ಅಂತರದಲ್ಲಿ ತ್ರಿವಿಕ್ರಂ ಅವರ ಹನುಮಂತ ವಿರುದ್ಧ ಸೋತರು. ಇಷ್ಟು ದೊಡ್ಡ ಮಟ್ಟದಲ್ಲಿ ವೋಟ್ ಬಿದ್ದಿದ್ದು ಇದೇ ಮೊದಲು. ಸದ್ಯ ಹನುಮಂತ ಅವರು ‘ಬಾಯ್ಸ್ vs ಗರ್ಲ್ಸ್’ ವೇದಿಕೆ ಏರಿದ್ದಾರೆ. ತ್ರಿವಿಕ್ರಮ್ ಸಿಸಿಎಲ್​ನಲ್ಲಿ ಬ್ಯುಸಿ ಇದ್ದಾರೆ. ಹೊಸ ಆಫರ್ ನಿರೀಕ್ಷೆ ಅವರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.