ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಉಮಾಶ್ರೀ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’

| Updated By: ಮದನ್​ ಕುಮಾರ್​

Updated on: Dec 24, 2021 | 9:36 AM

Kannada Serial TRP: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್ ಅಪಾರ​ ಜನಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿ​ ಗಿಟ್ಟಿಸಿಕೊಂಡಿರುವ ಟಿಆರ್​ಪಿ ಕಂಡು ಎಲ್ಲರೂ ಅಚ್ಚರಿ ಪಟ್ಟಿದ್ದಾರೆ.

ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಉಮಾಶ್ರೀ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’
‘ಪುಟ್ಟಕ್ಕನ ಮಕ್ಕಳು’ ಸೀರಿಯಲ್
Follow us on

ನಟಿ ಉಮಾಶ್ರೀ (Umashree) ಅವರು ಎಂತಹ ಪ್ರತಿಭಾವಂತ ಕಲಾವಿದೆ ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಎಂಥ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬಬಲ್ಲ ಸಾಮರ್ಥ್ಯ ಅವರಲ್ಲಿದೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಬಹುದಿನಗಳ ಬಳಿಕ ಅವರೀಗ ಧಾರಾವಾಹಿ ಕ್ಷೇತ್ರಕ್ಕೆ ಮರಳಿದ್ದಾರೆ. ಅವರು ನಟಿಸಿರುವ ಹೊಸ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’ (Puttakkana Makkalu Serial) ಪ್ರಸಾರ ಆರಂಭಿಸಿದೆ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಆರಂಭ ಆಗಿರುವ ಈ ಧಾರಾವಾಹಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಟಿಆರ್​ಪಿ ವಿಚಾರದಲ್ಲಿ ಈ ಸೀರಿಯಲ್​ ದಾಖಲೆ ಬರೆದಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿ ಬೇರೆ ಯಾವುದೇ ಧಾರಾವಾಹಿ ಪಡೆದುಕೊಳ್ಳದಷ್ಟು ಗ್ರ್ಯಾಂಡ್​ ಓಪನಿಂಗ್​ ಅನ್ನು ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್​ ಪಡೆದುಕೊಂಡಿದೆ.

ಯಾವುದೇ ಹೊಸ ಧಾರಾವಾಹಿ ಆರಂಭ ಆದಾಗ ಅದರ ಬಗ್ಗೆ ವೀಕ್ಷಕರು ಆಸಕ್ತಿ ತೋರಿಸುವುದು ಸಹಜ. ಹಾಗೆಯೇ ‘ಪುಟ್ಟಕ್ಕನ ಮಕ್ಕಳು’ ಕೂಡ ಜನಮೆಚ್ಚುಗೆ ಪಡೆದುಕೊಂಡಿದೆ. ಈ ಸೀರಿಯಲ್​ ಗಿಟ್ಟಿಸಿಕೊಂಡಿರುವ ಟಿಆರ್​ಪಿ ಕಂಡು ಅನೇಕರು ಅಚ್ಚರಿ ಪಟ್ಟಿದ್ದಾರೆ. ಬರೋಬ್ಬರಿ 13.5 ಟಿವಿಆರ್​ ಪಡೆದುಕೊಂಡಿರುವುದು ಈ ಧಾರಾವಾಹಿಯ ಹೆಚ್ಚುಗಾರಿಕೆ. ಕಿರುತೆರೆಗೆ ಕಮ್​ಬ್ಯಾಕ್​ ಮಾಡಿರುವ ಉಮಾಶ್ರೀ ಅವರಿಗೆ ಈ ಮೂಲಕ ಅಭೂತಪೂರ್ವ ಸ್ವಾಗತ ಸಿಕ್ಕಂತಾಗಿದೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಉಮಾಶ್ರೀ ಜತೆ ಮಂಜುಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಹಂಸ, ಸಾರಿಕಾ ರಾಜ್, ರೇಣುಕಾ, ಗುರು ಹೆಗಡೆ, ಸುನಂದಾ ಹೊಸಪೇಟೆ, ಹೊಸ ಕಲಾವಿದರಾದ ಸಂಜನಾ, ಅಕ್ಷರ, ಶಿಲ್ಪಾ, ನಿಶಾ, ಧನುಷ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಮತ್ತು ಗಜೇಂದ್ರ ಅಭಿನಯಿಸಿದ್ದಾರೆ.

ಈ ಧಾರಾವಾಹಿಯ ನಿರ್ಮಾಣದ ಹೊಣೆಯನ್ನು ಜೆಎಸ್ ಪ್ರೊಡಕ್ಷನ್ಸ್ ಸಂಸ್ಥೆ ಹೊತ್ತಿದೆ. ಸಹ ನಿರ್ಮಾಪಕರಾಗಿ ಪ್ರದೀಪ್ ಆಜ್ರಿ ಮತ್ತು ಪರೀಕ್ಷಿತ್ ಎಂ.ಎಸ್. ಕೈ ಜೋಡಿಸಿದ್ದಾರೆ. ಜೀ ಕನ್ನಡ ತಂಡದ ಕಥೆಗೆ ಸತ್ಯಕಿ ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ಇದರ ಶೀರ್ಷಿಕೆ ಗೀತೆ ಕೂಡ ಫೇಮಸ್​ ಆಗಿದೆ. ಹರ್ಷಪ್ರಿಯ ಅವರ ಸಾಹಿತ್ಯಕ್ಕೆ, ಖ್ಯಾತ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ರಾಗ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಪಂಚಮ ಜೀವ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ:

ಸರಿಗಮಪ ವೇದಿಕೆಗೆ ಬಂದು ಹಾಡಿದ ಅನಿಲ್ ಕುಂಬ್ಳೆ; ವೀಕ್ಷಕರ ಇನ್ನೊಂದು ಆಸೆ ಈಡೇರೋದು ಯಾವಾಗ?​

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಬಗ್ಗೆ ಉಮಾಶ್ರೀ ಹೇಳಿದ್ದೇನು? ಹಿರಿಯ ನಟಿಯ ಕಿರುತೆರೆ ಕಮ್​ಬ್ಯಾಕ್​