ರಚಿತಾ-ರವಿಚಂದ್ರನ್ ಡ್ಯಾನ್ಸ್​ಗೆ ಪ್ರೇಕ್ಷಕರು ಫುಲ್ ಫಿದಾ; ನಾಚಿ ನೀರಾದ ಕ್ರೇಜಿ ಸ್ಟಾರ್

V Ravichandran: ನಟ ವಿ ರವಿಚಂದ್ರನ್ ಮತ್ತು ರಚಿತಾ ರಾಮ್ ರಿಯಾಲಿಟಿ ಶೋನಲ್ಲಿ ಸಖತ್ ಆಗಿ ಸ್ಟೆಪ್ಪು ಹಾಕಿದ್ದಾರೆ. ಸಿನಿಮಾಗಳಲ್ಲಿ ಈ ಜೋಡಿ ಒಟ್ಟಿಗೆ ಡ್ಯಾನ್ಸ್ ಮಾಡಿಲ್ಲ ಆದರೆ ರಿಯಾಲಿಟಿ ಶೋ ವೇದಿಕೆ ಮೇಲೆ ಈ ಜೋಡಿಯ ಡ್ಯಾನ್ಸ್ ಪ್ರೇಕ್ಷಕರಿಗೆ ಖುಷಿ ನೀಡುವುದು ಖಾತ್ರಿ. ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಶೋನಲ್ಲಿ ಈ ಜೋಡಿ ಒಟ್ಟಿಗೆ ಡ್ಯಾನ್ಸ್ ಮಾಡಿದೆ.

ರಚಿತಾ-ರವಿಚಂದ್ರನ್ ಡ್ಯಾನ್ಸ್​ಗೆ ಪ್ರೇಕ್ಷಕರು ಫುಲ್ ಫಿದಾ; ನಾಚಿ ನೀರಾದ ಕ್ರೇಜಿ ಸ್ಟಾರ್
Ravichandran Ram
Edited By:

Updated on: May 04, 2025 | 9:09 PM

ರಚಿತಾ ರಾಮ್ (Rachita Ram) ಅವರು ಕನ್ನಡದ ನಟಿ. ರವಿಚಂದ್ರನ್ ಕನ್ನಡದ ಹೀರೋ. ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿ ಇದ್ದಾರೆ. ರವಿಚಂದ್ರನ್ ಹಾಗೂ ರಚಿತಾ ರಾಮ್ ಇಬ್ಬರೂ ಈಗ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಾ ಇದ್ದಾರೆ. ಅದು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನಲ್ಲಿ ಇವರು ಜಡ್ಜ್ ಆಗಿದ್ದಾರೆ. ಈಗ ರಚಿತಾ ರಾಮ್ ಹಾಗೂ ರವಿಚಂದ್ರನ್ ಡ್ಯಾನ್ಸ್ ಈಗ ಗಮನ ಸೆಳೆದಿದೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.

‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ರವಿಚಂದ್ರನ್ ಹಾಗೂ ರಚಿತಾ ರಾಮ್ ಅವರು ಎಲ್ಲರ ಗಮನ ಸೆಳೆಯುತ್ತಾ ಇದ್ದಾರೆ. ಇವರು ಆಗಾಗ ಪರಸ್ಪರ ಮಾತುಕತೆ ನಡೆಸಿಕೊಳ್ಳುತ್ತಾ ಇರುತ್ತಾರೆ. ರವಿಚಂದ್ರನ್ ಅವರು ಜೀವನದ ಅನುಭವವನ್ನು ಹಂಚಿಕೊಳ್ಳುತ್ತಾರೆ. ಈಗ ರವಿಚಂದ್ರನ್ ಅವರು ರಚಿತಾ ರಾಮ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.

ರವಿಚಂದ್ರನ್ ಅವರು ಅನೇಕ ಹೀರೋಗಳ ಜೊತೆ ನಟಿಸಿ ಗಮನ ಸೆಳೆದಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಡ್ಯಾನ್ಸ್ ಮಾಡೋದ್ರಲ್ಲೂ ಎತ್ತಿದ ಕೈ. ಅನೇಕ ನಟಿಯರ ಜೊತೆ ಅವರು ನಟಿಸಿ ಫೇಮಸ್ ಆಗಿದ್ದಾರೆ. ಅವರ ಜೊತೆ ಡ್ಯಾನ್ಸ್ ಮಾಡೋಕೆ ಇಲ್ಲ ಎಂದವರೇ ಇಲ್ಲ. ಅವರು ಈಗ ರಚಿತಾ ರಾಮ್ ಜೊತೆ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ:‘ಶಂಕರ್​ನಾಗ್ ಇಂದು ಇದ್ದಿದ್ದರೆ ರಾಜ್ಯದ ಸಿಎಂ ಆಗಿರುತ್ತಿದ್ದರು’; ರವಿಚಂದ್ರನ್

ರಚಿತಾ ರಾಮ್ ಹಾಗೂ ರವಿಚಂದ್ರನ್ ಅವರು ‘ಯಮ್ಮೋ ಯಾಕೋ ಮೈ ಹುಶಾರಿಲ್ಲ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ರಚಿತಾ ರಾಮ್ ಅವರು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಆದರೆ, ರವಿಚಂದ್ರನ್ ಅವರು ಕೊಂಚ ನಾಚಿದಂತೆ ಕಂಡು ಬಂತು. ಇವರ ಡ್ಯಾನ್ಸ್​ಗೆ ಭರ್ಜರಿ ಮೆಚ್ಚುಗೆ ಸಿಗುತ್ತಿದೆ.

‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಭರ್ಜರಿ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್​ಗಳು, ಕಲಾವಿದರು ಇದರಲ್ಲಿ ಗಮನ ಸೆಳೆಯುತ್ತಿದ್ದಾರೆ. ರವಿಚಂದ್ರನ್, ರಚಿತಾ ರಾಮ್ ಜಡ್ಜ್ ಸ್ಥಾನದಲ್ಲಿ ಗಮನ ಸೆಳೆಯುತ್ತಾ ಇದ್ದಾರೆ. ಈ ಶೋ ಉತ್ತಮ ಟಿಆರ್​ಪಿಇ ಪಡೆದುಕೊಳ್ಳುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ