ಸೀಟ್​ ಬೆಲ್ಟ್ ಧರಿಸಿದ್ದರೆ ಉಳಿಯುತ್ತಿತ್ತು ಕಿರುತೆರೆ ನಟಿಯ ಜೀವ; ನಿರ್ಲಕ್ಷ್ಯದಿಂದ ಹೋಯಿತು ಪ್ರಾಣ

|

Updated on: May 25, 2023 | 7:02 AM

ವೈಭವಿ ಉಪಾಧ್ಯಾಯ ಅವರು ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಹೀಗಾಗಿ, ಅವರಿಗೆ ಗಂಭೀರ ಗಾಯಗಳು ಆದವು. ವೈಭವಿ ಉಪಾಧ್ಯಾಯ ಸೀಟ್ ಬೆಲ್ಟ್ ಹಾಕಿದ್ದರೆ ಪ್ರಾಣ ಉಳಿಯುತ್ತಿತ್ತು

ಸೀಟ್​ ಬೆಲ್ಟ್ ಧರಿಸಿದ್ದರೆ ಉಳಿಯುತ್ತಿತ್ತು ಕಿರುತೆರೆ ನಟಿಯ ಜೀವ; ನಿರ್ಲಕ್ಷ್ಯದಿಂದ ಹೋಯಿತು ಪ್ರಾಣ
ವೈಭವಿ ವೈಷ್ಣವ್
Follow us on

ಹಿಂದಿ ಕಿರುತೆರೆ ನಟಿ ವೈಭವಿ ಉಪಾಧ್ಯಾಯ (Vaibhavi Upadhyaya) ಅವರು ಸೋಮವಾರ (ಮೇ 22) ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಹಿಮಾಚಲ ಪ್ರದೇಶದಲ್ಲಿ ಅಪಘಾತ ಸಂಭವಿಸಿತ್ತು. ಬುಧವಾರ (ಮೇ 24) ಅವರ ಅಂತ್ಯಕ್ರಿಯೆಯನ್ನು ಮುಂಬೈನಲ್ಲಿ ನಡೆಸಲಾಗಿದೆ. ಚಿತ್ರರಂಗದ ಅನೇಕರು ಅವರ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದಾರೆ. ವೈಭವಿ ಉಪಾಧ್ಯಾಯ ಅವರು ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಹೀಗಾಗಿ, ಅವರಿಗೆ ಗಂಭೀರ ಗಾಯಗಳು ಆದವು. ವೈಭವಿ ಉಪಾಧ್ಯಾಯ ಸೀಟ್ ಬೆಲ್ಟ್ ಹಾಕಿದ್ದರೆ ಪ್ರಾಣ ಉಳಿಯುತ್ತಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹಿಂದಿಯ ‘ಸಾರಾಭಾಯ್ vs ಸಾರಾಭಾಯ್​’ ಧಾರಾವಾಹಿ ಮೂಲಕ ವೈಭವಿ ಉಪಾಧ್ಯಾಯ ಫೇಮಸ್ ಆಗಿದ್ದರು.

ವೈಭವಿ ಉಪಾಧ್ಯಾಯ ಹಾಗೂ ಅವರ ಭಾವಿ ಪತಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ಕಾರಿನಲ್ಲಿ ಸುತ್ತಾಟ ನಡೆಸುತ್ತಿದ್ದರು. ವೈಭವಿ ಅವರ ಜೊತೆ ಕೆಲಸ ಮಾಡಿದ್ದ ಜೆಡಿ ಮಜೇಥಿಯಾ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ವೈಭವಿ ಅವರು ಭಾವಿ ಪತಿ ಜೊತೆ ಹಿಮಾಚಲದಲ್ಲಿದ್ದರು. ಅವರು ಡಿಸೆಂಬರ್‌ನಲ್ಲಿ ಮದುವೆಯಾಗಬೇಕಿತ್ತು. ಅವರು ಸಾಗುತ್ತಿದ್ದ ರಸ್ತೆ ಸಾಕಷ್ಟು ಕಿರಿದಾಗಿತ್ತು. ಎದುರಿಂದ ಟ್ರಕ್ ಬರುತ್ತಿತ್ತು. ಅದು ಹಾದುಹೋಗಲಿ ಎಂದು ಕಾರನ್ನು ನಿಲ್ಲಿಸಿದರು. ಟ್ರಕ್ ಹಾದುಹೋಗುತ್ತಿರುವಾಗ ಕಾರಿಗೆ ತಾಗಿದೆ. ಇದರಿಂದ ಕಾರು ಕಣಿವೆಗೆ ಜಾರಿದೆ. ವೈಭವಿ ಸೀಟ್ ಬೆಲ್ಟ್​ ಧರಿಸಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Nitesh Pandey Death News: ಕಿರುತೆರೆ ನಟ ನಿತೇಶ್ ಪಾಂಡೆ ನಿಧನ; ಹೃದಯಾಘಾತದಿಂದ ಕೊನೆಯುಸಿರೆಳೆದ ಕಲಾವಿದ

ಇತ್ತೀಚೆಗೆ ಹಿಂದಿ ಕಿರುತೆರೆಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಕೆಲವೇ ಕೆಲವು ದಿನಗಳ ಹಿಂದೆ ಕಿರುತೆರೆ ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್ ಮೃತಪಟ್ಟರು. ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದಾದ ಬೆನ್ನಲ್ಲೇ ಕಿರುತೆರೆ ಮೂಲಕ ಫೇಮಸ್ ಆದ ನಟ ನಿತೇಶ್ ಪಾಂಡೆ ಅವರು ಮೇ 24ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ