AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannada Serials TRP: ಭರ್ಜರಿ ಟಿಆರ್​ಪಿ ಪಡೆದ ‘ಗಟ್ಟಿಮೇಳ’; ಇವು ಟಾಪ್ ಐದು ಧಾರಾವಾಹಿಗಳು

Gattimela Serial : ಕಳೆದ ವಾರದ (ಮೇ 13-19) ಟಿಆರ್​ಪಿ ಲಿಸ್ಟ್ ಹೊರಬಿದ್ದಿದೆ. ಆ ಪೈಕಿ ಜೀ ಕನ್ನಡ ವಾಹಿನಿಯ ‘ಗಟ್ಟಿಮೇಳ’ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಯಾವ ಧಾರಾವಾಹಿ ಎಷ್ಟನೇ ಸ್ಥಾನದಲ್ಲಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ.

Kannada Serials TRP: ಭರ್ಜರಿ ಟಿಆರ್​ಪಿ ಪಡೆದ ‘ಗಟ್ಟಿಮೇಳ’; ಇವು ಟಾಪ್ ಐದು ಧಾರಾವಾಹಿಗಳು
ಕನ್ನಡ ಸೀರಿಯಲ್​ ಟಿಆರ್​ಪಿ
ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:May 25, 2023 | 3:08 PM

Share

ಕಿರುತೆರೆ ಲೋಕದಲ್ಲಿ ದೊಡ್ಡ ಸ್ಪರ್ಧೆ ಇದೆ. ಎಲ್ಲಾ ವಾಹಿನಿಯವರು ಹೊಸಹೊಸ ಧಾರಾವಾಹಿಗಳನ್ನು ಪರಿಚಯಿಸುತ್ತಿದ್ದಾರೆ. ಹೊಸಹೊಸ ಕಥೆಯನ್ನು ಪ್ರೇಕ್ಷಕರ ಎದುರು ಇಡಲಾಗುತ್ತಿದೆ. ಕೆಲವು ಧಾರಾವಾಹಿಗಳು ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತವೆ. ಇನ್ನೂ ಕೆಲವು ಪ್ರೇಕ್ಷಕರಿಗೆ ಇಷ್ಟ ಆಗುವುದಿಲ್ಲ. ಇವುಗಳನ್ನು ಅಳೆಯೋಕೆ ಇರೋದು ಟಿಆರ್​ಪಿ. ಕಳೆದ ವಾರದ (ಮೇ 13-19) ಟಿಆರ್​ಪಿ ಲಿಸ್ಟ್ ಹೊರಬಿದ್ದಿದೆ. ಆ ಪೈಕಿ ಜೀ ಕನ್ನಡ ವಾಹಿನಿಯ ‘ಗಟ್ಟಿಮೇಳ’ (Gattimela Serial) ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ಯಾವ ಧಾರಾವಾಹಿ ಎಷ್ಟನೇ ಸ್ಥಾನದಲ್ಲಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಗಟ್ಟಿಮೇಳ

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಗಟ್ಟಿಮೇಳ’ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿ ಮೊದಲಿದೆ. ಸಾವಿರ ಎಪಿಸೋಡ್ ಮುಗಿಸಿದ ಬಳಿಕವೂ ಧಾರಾವಾಹಿಗೆ ಬೇಡಿಕೆ ಕಡಿಮೆ ಆಗಿಲ್ಲ. ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ರಕ್ಷಿತ್ ವೇದಾಂತ್ ಆಗಿ ಗಮನ ಸೆಳೆದರೆ ನಿಶಾ ಅಮೂಲ್ಯ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಈ ವಾರದ ಟಿಆರ್​ಪಿ ರೇಸ್​ನಲ್ಲಿ ಮೊದಲಿದೆ.

ಪುಟ್ಟಕ್ಕನ ಮಕ್ಕಳು

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ. ಉಮಾಶ್ರೀ ಅವರು ನಟನೆ ಮೂಲಕ ಗಮನ ಸೆಳೆದಿದ್ದಾರೆ. ಅವರ ಪಾತ್ರ ವೀಕ್ಷಕರಿಗೆ ಇಷ್ಟವಾಗಿದೆ. ಹೀಗಾಗಿ, ಈ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ.

ಭಾಗ್ಯ ಲಕ್ಷ್ಮೀ

‘ಭಾಗ್ಯ ಲಕ್ಷ್ಮೀ’ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಭೂಮಿಕಾ ರಮೇಶ್, ಸುಷ್ಮಾ ಕೆ. ರಾವ್, ಸುದರ್ಶನ್ ರಂಗಪ್ರಸಾದ್ ಮೊದಲಾದವರು ಈ ಧಾರಾವಾಹಿಯಲ್ಲಿದ್ದಾರೆ.

ಲಕ್ಷ್ಮೀ ಬಾರಮ್ಮ

ಕಲರ್ಸ್ ಕನ್ನಡದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಜನಮನ್ನಣೆ ಪಡೆದಿದೆ. ಈ ಧಾರಾವಾಹಿಯನ್ನು ಜನರು ಇಷ್ಟಪಡುತ್ತಿದ್ದಾರೆ. ಟಾಪ್ ಐದರಲ್ಲಿ ಈ ಧಾರಾವಾಹಿಗೆ ನಾಲ್ಕನೇ ಸ್ಥಾನ ಇದೆ. ಶಮಂತ್ ಬ್ರೋ ಗೌಡ ಮೊದಲಾದವರು ಇದ್ದಾರೆ.

ಇದನ್ನೂ ಓದಿ: ರಾತ್ರಿ 7 ಗಂಟೆಗೆ ಹೊಸ ಧಾರಾವಾಹಿ ‘ಅಮೃತಧಾರೆ’ ಪ್ರಸಾರ; ‘ಹಿಟ್ಲರ್ ಕಲ್ಯಾಣ’ದ ಕಥೆ ಏನು?

ಶ್ರೀರಸ್ತು ಶುಭಮಸ್ತು

ಸುಧಾರಾಣಿ ಅವರು ಹಿರಿತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡವರು. ಅವರು ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ತುಳಸಿ ಹೆಸರಿನ ಪಾತ್ರವನ್ನು ಅವರು ಮಾಡಿದ್ದಾರೆ. ಮಾಧವ್ ಆಗಿ ಅಜಿತ್ ಹಂದೆ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಗೆ ಐದನೇ ಸ್ಥಾನ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:07 pm, Thu, 25 May 23