ನಟ ಆದಿತ್ಯ ಸಿಂಗ್ ರಜಪೂತ್​ದು ಆಕಸ್ಮಿಕ ಸಾವಲ್ಲ ಕೊಲೆ? ತಲೆಗೆ ಬಿದ್ದಿತ್ತು ಬಲವಾದ ಏಟು

ಪಂಚನಾಮದ ಸಮಯದಲ್ಲಿ ಆದಿತ್ಯ ಸಿಂಗ್ ತಲೆಯ ಎಡಭಾಗದಲ್ಲಿ ಸಣ್ಣ ಗಾಯ ಕಂಡುಬಂದಿದೆ. ಯಾವುದೇ ರಕ್ತಸ್ರಾವವಾಗಲಿಲ್ಲ. ಆ ಭಾಗದಲ್ಲಿ ಊತ ಇದೆ. ಅವರ ತಲೆಗೆ ಗಂಭೀರವಾದ ಗಾಯವಾಗಿತ್ತು ಎಂಬುದು ನಮ್ಮ ಶಂಕೆ ಎಂದಿದ್ದಾರೆ ಪೊಲೀಸರು.

ನಟ ಆದಿತ್ಯ ಸಿಂಗ್ ರಜಪೂತ್​ದು ಆಕಸ್ಮಿಕ ಸಾವಲ್ಲ ಕೊಲೆ? ತಲೆಗೆ ಬಿದ್ದಿತ್ತು ಬಲವಾದ ಏಟು
ಆದಿತ್ಯ ಸಿಂಗ್
Follow us
ರಾಜೇಶ್ ದುಗ್ಗುಮನೆ
|

Updated on: May 24, 2023 | 7:06 AM

ಕಿರುತೆರೆ ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್ (Aditya Singh Rajput) ಅವರು ಇತ್ತೀಚೆಗೆ ನಿಧನ ಹೊಂದಿದರು. ಅವರ ನಿವಾಸದಲ್ಲಿ ಶವ ಪತ್ತೆ ಆಗಿತ್ತು. ಈ ಸಾವು ತುಂಬಾನೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಆಕಸ್ಮಿಕ ಸಾವೋ ಅಥವಾ ಕೊಲೆಯೋ ಎನ್ನುವ ಬಗ್ಗೆ ಸದ್ಯ ತನಿಖೆ ನಡೆಯುತ್ತಿದೆ. ಸಾಯುವುದಕ್ಕೂ ಮುನ್ನ ಆದಿತ್ಯ ತಲೆಯಲ್ಲಿ ಗಾಯಗಳು ಇದ್ದವು ಎನ್ನುವ ವಿಚಾರ ಈಗ ರಿವೀಲ್ ಆಗಿದೆ. ಇದು ಅನೇಕರಿಗೆ ಶಾಕ್ ತಂದಿದೆ. ಈ ಸಾವಿನ ಹಿಂದಿರುವ ರಹಸ್ಯ ಏನು ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

‘ಪಂಚನಾಮದ ಸಮಯದಲ್ಲಿ ಆದಿತ್ಯ ಸಿಂಗ್ ತಲೆಯ ಎಡಭಾಗದಲ್ಲಿ ಸಣ್ಣ ಗಾಯ ಕಂಡುಬಂದಿದೆ. ಯಾವುದೇ ರಕ್ತಸ್ರಾವವಾಗಲಿಲ್ಲ. ಆ ಭಾಗದಲ್ಲಿ ಊತ ಇದೆ. ಅವರ ತಲೆಗೆ ಗಂಭೀರವಾದ ಗಾಯವಾಗಿತ್ತು ಎಂಬುದು ನಮ್ಮ ಶಂಕೆ. ಅವರ ಸಾವಿಗೆ ನಿಖರವಾದ ಕಾರಣ ತಿಳಿದಿಲ್ಲ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಗಳು ದಿ ಇಂಡಿಯನ್ ಎಕ್ಸ್‌ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಅವರು ಜಾರಿ ಬಿದ್ದಿರಬಹುದು ಎಂಬುದು ನಮ್ಮ ಅನುಮಾನ. ಬಾತ್​ರೂಂನ ಟೈಲ್ಸ್ ಒಡೆದಿದೆ. ಬಹುಶಃ ಅವರು ಬಿದ್ದಿದ್ದರಿಂದ ತಲೆಗೆ ಪೆಟ್ಟು ಬಿದ್ದಿರಬಹುದು. ಇದು ಸಾವಿಗೆ ಕಾರಣ ಇದ್ದರೂ ಇರಬಹುದು’ ಎಂದು ಶಂಕಿಸುತ್ತಾರೆ ಪೊಲೀಸರು.

ಇದನ್ನೂ ಓದಿ: ನಟ, ಮಾಡೆಲ್ ಆದಿತ್ಯ ಸಿಂಗ್ ಅನುಮಾನಾಸ್ಪದ ಸಾವು

ಆದಿತ್ಯ ಸಿಂಗ್ ರಜಪೂತ್ ಸೋಮವಾರ (ಮೇ 22) ತಮ್ಮ ಸ್ನಾನಗೃಹದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಆದಿತ್ಯ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮಾದಕವಸ್ತು ಮಿತಿಮೀರಿ ಸೇವಿಸಿದ್ದರಿಂದ ಆದಿತ್ಯ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮಂಗಳವಾರ ಸಂಜೆ (ಮೇ 23) ಆದಿತ್ಯ ಸಿಂಗ್ ರಜಪೂತ್ ಅಂತ್ಯಕ್ರಿಯೆ ನಡೆದಿದೆ.

ಆದಿತ್ಯ ದೆಹಲಿಯವರು. ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದರು. ‘ಮೇ ಗಾಂಧಿ ಕೋ ನಹಿ ಮಾರಾ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. MTV Splitsvilla ಸೀಸನ್ 9ರಲ್ಲಿ ಭಾಗಿ ಆದ ಬಳಿಕ ಅವರ ಖ್ಯಾತಿ ಹೆಚ್ಚಿತು. ಇನ್ನೂ ಕೆಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ