‘ಯಾರ ಜೀವ ಯಾರನೂ ಸೇರೋದು ಬಾಳ ತೀರ್ಮಾನ’; ‘ಸೀತಾ ರಾಮ’ ಟೈಟಲ್ ಟ್ರ್ಯಾಕ್​ಗೆ ಫ್ಯಾನ್ಸ್ ಫಿದಾ

|

Updated on: Jun 26, 2023 | 8:55 AM

ಈ ಧಾರಾವಾಹಿಯ ಟೈಟಲ್ ಸಾಂಗ್ ರಿವೀಲ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಕೇಳುಗರಿಂದ ಈ ಹಾಡಿಗೆ ಸಖತ್ ಮೆಚ್ಚುಗೆ ಸಿಗುತ್ತಿದೆ.

‘ಯಾರ ಜೀವ ಯಾರನೂ ಸೇರೋದು ಬಾಳ ತೀರ್ಮಾನ’; ‘ಸೀತಾ ರಾಮ’ ಟೈಟಲ್ ಟ್ರ್ಯಾಕ್​ಗೆ ಫ್ಯಾನ್ಸ್ ಫಿದಾ
ಸೀತಾ ರಾಮ ಧಾರಾವಾಹಿ
Follow us on

‘ಸೀತಾ ರಾಮ’ ಧಾರಾವಾಹಿ (Seetha Rama Serial) ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ವೈಷ್ಣವಿ ಗೌಡ (Vaishnavi Gowda) ಹಾಗೂ ಗಗನ್ ಚಿನ್ನಪ್ಪ ನಟನೆಯ ಈ ಧಾರಾವಾಹಿ ಪ್ರೋಮೋ ಎಲ್ಲರ ಗಮನ ಸೆಳೆದಿದೆ. ಈ ಧಾರಾವಾಹಿ ರಿಲೀಸ್ ದಿನಾಂಕ ಕೂಡ ಈಗ ರಿವೀಲ್ ಆಗಿದೆ. ಜುಲೈ 17ರಿಂದ ಧಾರಾವಾಹಿ ಪ್ರಸಾರ ಕಾಣಲಿದೆ. ಇದಕ್ಕೂ ಮೊದಲೂ ಈ ಧಾರಾವಾಹಿಯ ಟೈಟಲ್ ಸಾಂಗ್ ರಿವೀಲ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಕೇಳುಗರಿಂದ ಈ ಹಾಡಿಗೆ ಸಖತ್ ಮೆಚ್ಚುಗೆ ಸಿಗುತ್ತಿದೆ.

ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಹೊಸ ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಅನೇಕರಿಗೆ ಇಷ್ಟವಾಗಿದೆ. ಮಧ್ಯಮ ವರ್ಗದ ಜನರ ಕಥೆಯನ್ನು ಈ ಧಾರಾವಾಹಿ ಮೂಲಕ ಹೇಳಲಾಗುತ್ತಿದೆ. ಇನ್ನು, ‘ಅಮೃತಧಾರೆ’ ಧಾರಾವಾಹಿ ಕೂಡ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಮದುವೆ ಆಗದ ಪುರುಷ ಹಾಗೂ ಮಹಿಳೆಯ ಕಥೆಯನ್ನು ಹೊಂದಿದೆ. ಈಗ ಹೊಸ ಕಥೆಯೊಂದಿಗೆ ‘ಸೀತಾ ರಾಮ’ ಧಾರಾವಾಹಿ ಪ್ರಸಾರಕ್ಕೆ ರೆಡಿ ಆಗಿದೆ.

‘ಯಾರ ಜೀವ ಯಾರನೂ ಸೇರೋದು ಬಾಳ ತೀರ್ಮಾನ. ಅದನು ಮೀರಿ ಸಾಗದು ಈ ಜೀವನ. ಯಾರ ಹೆಜ್ಜೆ ಯಾರನೋ ಕಾಯೋದೇ ಸುಂದರ ಧ್ಯಾನ. ಹೃದಯ ತೆರೆದು ಕೂರಲಿ ನಿನ್ನೀ ಮನ’ ಎಂಬ ಸಾಲುಗಳೊಂದಿಗೆ ಈ ಹಾಡು ಆರಂಭ ಆಗುತ್ತಿದೆ. ಈ ಹಾಡು ಸಾಕಷ್ಟು ಗಮನ ಸೆಳೆದಿದೆ.

ಇದನ್ನೂ ಓದಿ: ‘ರಿಲೀಸ್ ಡೇಟ್ ಹೇಳದೇ ನಟಿಸಲ್ಲ’ ಎಂದು ಹಠ ಹಿಡಿದ ‘ಸೀತಾ ರಾಮ’ ರೀತು ಸಿಂಗ್; ವಿಡಿಯೋ ವೈರಲ್  

‘ಸೀತಾ ರಾಮ’ ಟೈಟಲ್ ಹಾಡಿಗೆ ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ. ಶಂಶಾಂಕ್ ಶೇಷಗಿರಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಕಲ್ಯಾಣ್ ಮಂಜುನಾಥ್ ಅವರು ಹಾಡಿದ್ದಾರೆ. ಈ ಹಾಡಿನ ಸಾಹಿತ್ಯಕ್ಕೆ ಮೆಚ್ಚುಗೆ ಸಿಕ್ಕಿದೆ. ಸದ್ಯ ಈ ಹಾಡು ವೈರಲ್ ಆಗುತ್ತಿದೆ. ಲಕ್ಷಾಂತರ ಬಾರಿ ಹಾಡು ವೀಕ್ಷಣೆ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ