AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೈಸಾ’ ಫಸ್ಟ್ ಗ್ಲಿಂಪ್ಸ್: ಸಿಕ್ಕಾಪಟ್ಟೆ ಮಾಸ್ ಅವತಾರದಲ್ಲಿ ರಶ್ಮಿಕಾ ಮಂದಣ್ಣ

‘ಮೈಸಾ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ರಿವೀಲ್ ಮಾಡಲಾಗಿದೆ. ಈ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಆಗಿದ್ದು, ಕಥೆಯ ಬಗ್ಗೆ ಅಭಿಮಾನಿಗಳಲ್ಲಿ ಕೌತುಕ ಹೆಚ್ಚುವಂತಾಗಿದೆ. ಪ್ರಸ್ತುತ ತೆಲಂಗಾಣ ಹಾಗೂ ಕೇರಳದ ಅರಣ್ಯ ಪ್ರದೇಶಗಳಲ್ಲಿ ‘ಮೈಸಾ’ ಸಿನಿಮಾಗೆ ಚಿತ್ರೀಕರಣ ನಡೆಯುತ್ತಿದೆ.

‘ಮೈಸಾ’ ಫಸ್ಟ್ ಗ್ಲಿಂಪ್ಸ್: ಸಿಕ್ಕಾಪಟ್ಟೆ ಮಾಸ್ ಅವತಾರದಲ್ಲಿ ರಶ್ಮಿಕಾ ಮಂದಣ್ಣ
Rashmika Mandanna Mysaa Movie Look
ಮದನ್​ ಕುಮಾರ್​
|

Updated on: Dec 24, 2025 | 3:01 PM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಚಿತ್ರರಂಗದಲ್ಲಿ ದೊಡ್ಡ ಗೆಲುವು ಕಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಅವರು ಮಿಂಚಿದ್ದಾರೆ. ಹಾಗಂತ ಅವರು ಒಂದೇ ಬಗೆಯ ಸಿನಿಮಾಗಳನ್ನು ಮಾಡುತ್ತಿಲ್ಲ. ಬದಲಿಗೆ, ಬೇರೆ ಬೇರೆ ರೀತಿಯ ಸಿನಿಮಾ ಮತ್ತು ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ಅವರ ‘ದಿ ಗರ್ಲ್​ಫ್ರೆಂಡ್’ ಸಿನಿಮಾ ಗಮನ ಸೆಳೆದಿತ್ತು. ಈಗ ಅವರು ‘ಮೈಸಾ’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ. ಈ ಸಿನಿಮಾದಿಂದ ಫಸ್ಟ್ ಗ್ಲಿಂಪ್ಸ್ (Mysaa First Glimpse) ಬಿಡುಗಡೆ ಆಗಿದೆ.

ಸ್ಟಾರ್ ನಟರಿಗೆ ಜೋಡಿಯಾಗಿ ನಟಿಸಲು ರಶ್ಮಿಕಾ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅದರ ನಡುವೆಯೂ ಅವರು ಹೊಸ ಬಗೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ‘ಮೈಸಾ’ ಸಿನಿಮಾವೇ ಬೆಸ್ಟ್ ಉದಾಹರಣೆ. ಈ ಸಿನಿಮಾದಲ್ಲಿ ಅವರು ಹಿಂದೆಂದೂ ಕಾಣಿಸಿಕೊಳ್ಳದ ಗೆಟಪ್​​ನಲ್ಲಿ ಪ್ರೇಕ್ಷಕರ ಎದುರು ಬರಲಿದ್ದಾರೆ. ಆ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಸಲು ಈ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ.

ರವೀಂದ್ರ ಪುಲ್ಲೆ ಅವರು ‘ಮೈಸಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಾಗಿ ಇದು ಅವರ ಮೊದಲ ಸಿನಿಮಾ. ಹಾಗಿದ್ರೂ ಕೂಡ ಓರ್ವ ಅನುಭವಿ ನಿರ್ದೇಶಕನ ರೀತಿಯಲ್ಲಿ ಅವರು ಸಿನಿಮಾ ಮಾಡಿದ್ದಾರೆ ಎಂಬುದಕ್ಕೆ ಫಸ್ಟ್ ಗ್ಲಿಂಪ್ಸ್ ಟೀಸರ್​​ನಲ್ಲಿ ಸುಳಿವು ಸಿಕ್ಕಿದೆ. ‘ಅನ್‌ಫಾರ್ಮುಲಾ ಫಿಲ್ಮ್ಸ್’ ಸಂಸ್ಥೆಯ ಮೂಲಕ ‘ಮೈಸಾ’ ಸಿನಿಮಾ ನಿರ್ಮಾಣ ಆಗುತ್ತಿದೆ.

ಮೈಸಾ ಸಿನಿಮಾ ಫಸ್ಟ್ ಗ್ಲಿಂಪ್ಸ್:

ಇದು ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ಹಿಂದೆ, ತಮಿಳು ಮುಂತಾದ ಭಾಷೆಗಳಲ್ಲಿ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಭಾರಿ ಬಜೆಟ್​​ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಕೈಯಲ್ಲಿ ಬೇಡಿ, ಬಂದೂಕು, ಮೈಯೆಲ್ಲಾ ರಕ್ತ, ಮುಖದಲ್ಲಿ ನೋವು, ಆಕ್ರೋಶ.. ಹೀಗೆ ಮೊದಲ ಲುಕ್​​ನಲ್ಲೇ ಕಥೆಯ ಬಗ್ಗೆ ಒಂದಷ್ಟು ಸುಳಿವು ಬಿಟ್ಟುಕೊಡಲಾಗಿದೆ. ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಈ ಫಸ್ಟ್ ಗ್ಲಿಂಪ್ಸ್ ಇಷ್ಟ ಆಗಿದೆ. ಸಿನಿಮಾ ನೋಡಲು ತಾವೆಲ್ಲ ಕಾಯುತ್ತಿರುವುದಾಗಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮದುವೆಗೆ ಮುನ್ನ ಗೆಳತಿಯರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿದ ರಶ್ಮಿಕಾ: ಚಿತ್ರಗಳು ಇಲ್ಲಿವೆ

‘ಮೈಸಾ’ ಸಿನಿಮಾದ ಈ ಪಾತ್ರಕ್ಕಾಗಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆ ಪಾತ್ರದ ಹಿನ್ನೆಲೆ ಹೇಗಿದೆ ಎಂಬುದನ್ನು ತಾಯಿಯ ಧ್ವನಿ ವಿವರಿಸುತ್ತದೆ. ಈಶ್ವರಿ ರಾವ್, ಗುರು ಸೋಮಸುಂದರಂ, ರಾವ್ ರಮೇಶ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಶ್ರೀಯಾಸ್ ಪಿ. ಕೃಷ್ಣ ಅವರ ಛಾಯಾಗ್ರಹಣ, ಜೇಕ್ಸ್ ಬೆಜೋಯ್ ಅವರ ಸಂಗೀತ, ಆಂಡಿ ಲಾಂಗ್ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!