
ನಟಿ ವೈಷ್ಣವಿ ಗೌಡ (Vaishnavi Gowda) ಅವರು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಅವರು ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟಿ ನಿಶ್ಚಿತಾರ್ಥ ಆಗಿರೋದು ಅಭಿಮಾನಿಗಳಿಗೆ ಶಾಕ್ ಹಾಗೂ ಖುಷಿ ಎರಡನ್ನೂ ನೀಡಿದೆ. ಅವರಿಗೆ ಎಲ್ಲ ಕಡೆಗಳಿಂದ ಅಭಿನಂದನೆಗಳು ಬರುತ್ತಿವೆ. ಹಾಗಾದರೆ ವೈಷ್ಣವಿ ಗೌಡ ಅವರು ಮದುವೆ ಆಗುತ್ತಿರುವ ಹುಡುಗ ಯಾರು? ಅವರ ಹಿನ್ನೆಲೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ವೈಷ್ಣವಿ ಗೌಡ ಅವರು ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ತಮಗೆ ಮದುವೆ ಬಗ್ಗೆ ಇರುವ ಕನಸುಗಳ ಬಗ್ಗೆ ಹೇಳಿಕೊಂಡಿದ್ದರು. ಮದುವೆನ ಹೀಗೆ ಆಗ್ತೀನಿ, ಹಾಗೆ ಆಗ್ತೀನಿ ಎಂದೆಲ್ಲ ವಿವರಿಸಿದ್ದರು. ಅವರಿಗೆ ಸಾಕಷ್ಟು ಮದುವೆ ಆಫರ್ಗಳು ಬಂದರೂ ಅದನ್ನು ಒಪ್ಪಿಲ್ಲ ಎಂದಿದ್ದರು. ಈಗ ವೈಷ್ಣವಿ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅವರ ಎಂಗೇಜ್ಮೆಂಟ್ ಫೋಟೋ ಹಾಗೂ ವಿಡಿಯೋಗಳನ್ನು ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ವೈಷ್ಣವಿ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ಸೀತಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಈ ಧಾರಾವಾಹಿಯ ಕಲಾವಿದೆ ಮೇಘನಾ ಶಂಕರಪ್ಪ ಅವರು ಇತ್ತೀಚೆಗೆ ವಿವಾಹ ಆಗಿದ್ದರು. ಈಗ ಧಾರಾವಾಹಿ ತಂಡದಲ್ಲಿ ಮತ್ತೊಂದು ಮದುವೆ ನೆರವೇರುತ್ತಿದೆ.
ವೈಷ್ಣವಿ ಗೌಡ ಅವರು ಮದುವೆ ಆಗುತ್ತಿರುವ ಹುಡುಗನ ಹೆಸರು ಅನುಕೂಲ್ ಮಿಶ್ರಾ ಎಂದು. ಅವರು ಏರ್ಫೋರ್ಸ್ನಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಈ ಮೂಲಕ ವೈಷ್ಣವಿ ಅವರು ಬಣ್ಣದ ಲೋಕದವರನ್ನು ಬಿಟ್ಟು ಹೊರಗಿನವರನ್ನು ಕೈ ಹಿಡಿಯುತ್ತಿದ್ದಾರೆ.
ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿ ನಟಿ ವೈಷ್ಣವಿ ಗೌಡಗೆ ಬಿತ್ತು ದಂಡ; ಮಾಡಿದ ತಪ್ಪೇನು?
ವೈಷ್ಣವಿ ಗೌಡ ಅವರು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆ ಹಾಗೂ ಎಂಗೇಜ್ಮೆಂಟ್ ಬಗ್ಗೆ ಅವರು ತಮ್ಮದೇ ಆದ ಕಲ್ಪನೆಗಳನ್ನು ಹೊಂದಿದ್ದಾರೆ. ಅವರು ಅಂದುಕೊಂಡ ರೀತಿಯಲ್ಲೇ ನಿಶ್ಚಿತಾರ್ಥ ನೆರವೇರಿದೆ ಎಂದು ಹೇಳಲಾಗುತ್ತಿದೆ. ಈ ವಿವಾಹಕ್ಕೆ ಆಪ್ತರು ಹಾಗೂ ಕುಟುಂಬದವರು ಮಾತ್ರ ಹಾಜರಿ ಹಾಕಿದ್ದರು. ವಿವಾಹದ ದಿನಾಂಕ ಇನ್ನಷ್ಟೇ ರಿವೀಲ್ ಆಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:55 am, Tue, 15 April 25