ಬಿಗ್​ ಬಾಸ್ ವೈಷ್ಣವಿ ಸೊಂಟ ಬಳುಕಿಸಿದ ಪರಿಗೆ ಫಿದಾ ಆದ ಅಭಿಮಾನಿಗಳು

| Updated By: ರಾಜೇಶ್ ದುಗ್ಗುಮನೆ

Updated on: Dec 27, 2021 | 6:30 AM

ವೈಷ್ಣವಿ ಅವರು ಬೆಲ್ಲಿ ಡ್ಯಾನ್ಸ್​ ಕಲಿತಿದ್ದಾರೆ. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ‘ರಂಗು ರಂಗೋಲಿ’ ಕಾರ್ಯಕ್ರಮದಲ್ಲಿ ಅವರು ಬೆಲ್ಲಿ ಡ್ಯಾನ್ಸ್​ ಮಾಡಲಿದ್ದಾರೆ. ಇದರ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

ಬಿಗ್​ ಬಾಸ್ ವೈಷ್ಣವಿ ಸೊಂಟ ಬಳುಕಿಸಿದ ಪರಿಗೆ ಫಿದಾ ಆದ ಅಭಿಮಾನಿಗಳು
Follow us on

‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಒಂದು ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡವರು ನಟಿ ವೈಷ್ಣವಿ ಗೌಡ. ‘ಕನ್ನಡ ಬಿಗ್​ ಬಾಸ್​ ಸೀಸನ್​ 8’ಕ್ಕೆ ತೆರಳಿದ ನಂತರದಲ್ಲಿ ಈ ಅಭಿಮಾನಿ ಬಳಗ ಹಿರಿದಾಯಿತು. ಅವರನ್ನು ಇಷ್ಟಪಡೋಕೆ ಅಭಿಮಾನಿಗಳಿಗೆ ಹಲವು ಕಾರಣ ಸಿಕ್ಕವು. ಅಂದುಕೊಂಡ ಮಟ್ಟಿಗೆ ವೋಟ್​ ಬೀಳದ ಕಾರಣ ಬಿಗ್​ ಬಾಸ್​ ಗೆಲ್ಲೋಕೆ ಅವರಿಗೆ ಸಾಧ್ಯವಾಗಿಲ್ಲ. ಟ್ರೋಫಿ ಗೆಲ್ಲದೇ ಇದ್ದರೂ ಅವರ ಜನಪ್ರಿಯತೆ ಹೆಚ್ಚಿದೆ. ಈಗ ಕಲರ್ಸ್​ ಕನ್ನಡ ವಾಹಿನಿ ನಡೆಸಿಕೊಡುತ್ತಿರುವ ನಾನಾ ಕಾರ್ಯಕ್ರಮಗಳಿಗೆ ಅವರು ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಹೊಸ ವರ್ಷದ ಪ್ರಯುಕ್ತ ಕಲರ್ಸ್​ ಕನ್ನಡ ವಾಹಿನಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಇಲ್ಲಿ ವೈಷ್ಣವಿ ಬೆಲ್ಲಿ ಡಾನ್ಸ್​ ಮಾಡಿದ್ದಾರೆ.

ಕೆಲವೇ ದಿನಗಳಲ್ಲಿ ಹೊಸ ವರ್ಷ ಬರುತ್ತಿದೆ. 2022ನ್ನು ಸ್ವಾಗತಿಸೋಕೆ ಎಲ್ಲರೂ ಸಿದ್ಧರಾಗಿದ್ದಾರೆ. ಈ ಬಾರಿ ಕೊವಿಡ್​ ಪ್ರಕರಣ ಹೆಚ್ಚುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ, ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದೊದಗಲಿದೆ. ಹೀಗಾಗಿ, ಪ್ರೇಕ್ಷಕರಿಗೆ ಮನರಂಜನೆ ನೀಡುವ ಸಲುವಾಗಿ ಕಲರ್ಸ್​ ಕನ್ನಡದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ‘ರಂಗು ರಂಗೋಲಿ’ ಎಂಬ ಕಾರ್ಯಕ್ರಮ ಡಿ.31 ಮತ್ತು ಜ.1ರಂದು ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ. ಇದರ ತಯಾರಿ ಈಗ ನಡೆಯುತ್ತಿದೆ. ಇದರಲ್ಲಿ ವೈಷ್ಣವಿ ಕೂಡ ಭಾಗಿಯಾಗಿದ್ದಾರೆ.

ವೈಷ್ಣವಿ ಅವರು ಬೆಲ್ಲಿ ಡ್ಯಾನ್ಸ್​ ಕಲಿತಿದ್ದಾರೆ. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ‘ರಂಗು ರಂಗೋಲಿ’ ಕಾರ್ಯಕ್ರಮದಲ್ಲಿ ಅವರು ಬೆಲ್ಲಿ ಡ್ಯಾನ್ಸ್​ ಮಾಡಲಿದ್ದಾರೆ. ಇದರ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಕಂಟೆಂಟ್​ ಕ್ರಿಯೇಟರ್​ ಅನು ಅವರು ವೈಷ್ಣವಿ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ವೈಷ್ಣವಿ ಹಂಚಿಕೊಂಡಿದ್ದಾರೆ. ಬೆಲ್ಲಿ ಡ್ಯಾನ್ಸ್​ ಬಗ್ಗೆ, ‘ರಂಗು ರಂಗೋಲಿ’ ಕಾರ್ಯಕ್ರಮದ ಸಿದ್ಧತೆ ಸೇರಿ ಹಲವು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ಅವರ ಬೆಲ್ಲಿ ಡ್ಯಾನ್ಸ್​ನ ಝಲಕ್​ ಕೂಡ ಇದೆ. ಅವರು ಸೊಂಟ ಬಳುಕಿಸಿದ ಪರಿ ಹಲವರಿಗೆ ಇಷ್ಟವಾಗಿದೆ.

ಕೆಂಗುಲಾಬಿ ಬಣ್ಣದ ಕಾಸ್ಟ್ಯೂಮ್​ ಧರಿಸಿ ರಾಧಿಕಾ ಕುಮಾರಸ್ವಾಮಿ ಅವರೂ ಭರ್ಜರಿ ಪರ್ಫಾರ್ಮೆನ್ಸ್​ ನೀಡಿದ್ದಾರೆ. ಹಲವು ಹಾಡುಗಳಿಗೆ ಅವರು ಹೆಜ್ಜೆ ಹಾಕಿದ್ದಾರೆ. ಗ್ಲಾಮರಸ್​ ಆಗಿ ಕ್ಯಾಮೆರಾ ಎದುರಿಸಿದ್ದಾರೆ. ‘ರಂಗು ರಂಗೋಲಿ’ ಕಾರ್ಯಕ್ರಮದ ಮೂಲಕ ಅವರು ಅಭಿಮಾನಿಗಳಿಗೆ ಮಸ್ತ್​ ಮನರಂಜನೆ ನೀಡಲಿದ್ದಾರೆ.

ಇದನ್ನೂ ಓದಿ: ನೀನು ಗಂಡಸಾಗಿರಬಹುದು, ಆದರೆ ನಿನಗಿಂತ ಹೆಚ್ಚು ಪ್ರಬುದ್ಧತೆ ನನಗಿದೆ; ಸಿಟ್ಟಾದ ವೈಷ್ಣವಿ

Kiran Raj: ಒಂದೊಳ್ಳೆಯ ಕೆಲಸ ಮಾಡಿ ಕ್ರಿಸ್​ಮಸ್​ ಆಚರಿಸಿದ ‘ಕನ್ನಡತಿ’ ಕಿರಣ್​ ರಾಜ್​