ತುಕಾಲಿ ಸಂತುಗೆ ಭರ್ಜರಿ ಉಡುಗೊರೆ ಕೊಟ್ಟ ವರ್ತೂರು ಸಂತೋಷ್

|

Updated on: Feb 04, 2024 | 7:23 PM

Santhu-Panthu: ತುಕಾಲಿ ಸಂತೋಷ್ ಅವರಿಗೆ ಚಿನ್ನದ ಲಾಕೆಟ್ ಒಂದನ್ನು ಗೆಳೆಯ ವರ್ತೂರು ಸಂತೋಷ್ ಉಡುಗೊರೆಯಾಗಿ ನೀಡಿದ್ದಾರೆ. ಲಾಕೆಟ್​ನ ವಿಶೇಷತೆ ಏನು ಗೊತ್ತೆ?

ತುಕಾಲಿ ಸಂತುಗೆ ಭರ್ಜರಿ ಉಡುಗೊರೆ ಕೊಟ್ಟ ವರ್ತೂರು ಸಂತೋಷ್
ಸಂತು-ಪಂತು
Follow us on

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಈವರೆಗಿನ ಅತ್ಯಂತ ಜನಪ್ರಿಯ ಸೀಸನ್ ಎಂದು ಸ್ವತಃ ಸುದೀಪ್ ಹೇಳಿದ್ದಾರೆ. ಈ ಬಾರಿ ಬಿಗ್​ಬಾಸ್​ ಕನ್ನಡ ಸೀಸನ್​ 10ರಲ್ಲಿ ಭಾಗವಹಿಸಿದ್ದ ಎಲ್ಲ ಸ್ಪರ್ಧಿಗಳೂ ಒಂದು ರೀತಿ ಸೆಲೆಬ್ರಿಟಿಗಳಾಗಿಬಿಟ್ಟರು, ಅಷ್ಟು ಜನಪ್ರಿಯತೆ ಅವರಿಗೆ ಧಕ್ಕಿತು. ಭಿನ್ನ-ಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳನ್ನು ಶೋಗೆ ಆಯ್ಕೆ ಮಾಡಲಾಗಿತ್ತು. ಈ ಬಾರಿ ಜನಪ್ರಿಯರಾದ ಸ್ಪರ್ಧಿಗಳಲ್ಲಿ ಸಂತು-ಪಂತು ಪ್ರಮುಖರು. ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬಿಗ್​ಬಾಸ್​ ಸೀಸನ್​ನಲ್ಲಿ ತಮ್ಮ ಸ್ನೇಹದಿಂದ ಜನಪ್ರಿಯರಾದರು. ಅದೇ ಸ್ನೇಹವನ್ನು ಮನೆಯ ಹೊರಗೂ ಮುಂದುವರೆಸಿದೆ ಈ ಜೋಡಿ.

ಬಿಗ್​ಬಾಸ್ ಕನ್ನಡ ಸೀಸನ್ 10 ಮುಗಿದು ವಾರವಾಗಿದ್ದು ಹೊರ ಬಂದಿರುವ ಸ್ಪರ್ಧಿಗಳು ಸರಣಿ ಸಂದರ್ಶನಗಳು, ಇನ್ನಿತರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಗೆ ಧಕ್ಕಿರುವ ಜನಪ್ರಿಯತೆಯನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ವರ್ತೂರು ಸಂತೋಷ್ ಅವರಿಗಂತೂ ಈ ಬಿಗ್​ಬಾಸ್ ಪಯಣ ಅತ್ಯಂತ ರೋಚಕವಾಗಿತ್ತು. ಬಿಗ್​ಬಾಸ್​ಗೆ ಹೋಗಿ ಬಂದ ಮೇಲೆ ಸೆಲೆಬ್ರಿಟಿಯೇ ಆಗಿಬಿಟ್ಟಿದ್ದಾರೆ. ಇದೀಗ ವರ್ತೂರು ಸಂತೋಷ್ ಮನೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಅತಿಥಿಗಳಾಗಿ ಬಿಗ್​ಬಾಸ್ ಸ್ಪರ್ಧಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ತುಕಾಲಿ ಸಂತುಗೆ ವಿಶೇಷ ಉಡುಗೊರೆಯನ್ನು ವರ್ತೂರು ಸಂತು ನೀಡಿದ್ದಾರೆ.

ವರ್ತೂರು ಸಂತೋಷ್ ಮನೆಗೆ ಬಂದ ತುಕಾಲಿ ಸಂತುಗೆ ಆರಂಭದಲ್ಲಿಯೇ ಒಂದು ಉಡುಗೊರೆಯನ್ನು ವರ್ತೂರು ಸಂತೋಷ್ ಅವರು ನೀಡಿದ್ದಾರೆ. ‘ಸಂತು-ಪಂತು’ ಎಂದು ಹೆಸರಿರುವ ಚಿನ್ನದ ಲಾಕೆಟ್ ಒಂದನ್ನು ವರ್ತೂರು ಸಂತೋಷ್, ತುಕಾಲಿ ಸಂತುಗೆ ನೀಡಿದ್ದಾರೆ. ಆ ಲಾಕೆಟ್ ಅನ್ನು ಕೈಗೆ ಹಾಕಿಕೊಮಡು ಮಾಧ್ಯಮಗಳಿಗೆ ಪ್ರದರ್ಶಿಸಿದ್ದಾರೆ ತುಕಾಲಿ ಸಂತು.

ಇದನ್ನೂ ಓದಿ:ಬಿಗ್ ಬಾಸ್ ಕನ್ನಡ: ಹೆಂಡತಿಯನ್ನು ‘ಅಣ್ಣ’ ಅಂದ್ರಂತೆ ತುಕಾಲಿ ಸಂತು: ಯಾಕೆ?

ಉಡುಗೊರೆ ಸ್ವೀಕರಿಸಿದ ಬಳಿಕ ಭಾವುಕರಾಗಿ ಮಾತನಾಡಿದ ತುಕಾಲಿ ಸಂತೋಷ್, ‘ಅಣ್ಣನ ಸ್ನೇಹಕ್ಕೆ ಏನೆಂದು ಹೇಳಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ. ನನಗೆ ಯಾರ ಸ್ನೇಹವೂ ಅಷ್ಟಾಗಿ ಸಿಕ್ಕಿರಲಿಲ್ಲ. ನನಗೆ ಇಷ್ಟು ಆತ್ಮೀಯ ಸ್ನೇಹ, ಬಾಂಧವ್ಯ ನೀಡುವ ಸ್ನೇಹಿತ ಅಥವಾ ಅಣ್ಣ ನನಗೆ ಸಿಗುತ್ತಾರೆ ಎಂದುಕೊಂಡಿರಲಿಲ್ಲ. ಒಂದು ರೀತಿ ಮಾಣಿಕ್ಯನೇ ನನಗೆ ಸಿಕ್ಕಿದ್ದಾರೆ. ಇಷ್ಟು ದಿನ ನಾನು ಒಂಟಿ, ನನಗೆ ಯಾವ ಹಿರಿಯ ದಿಕ್ಕಿಲ್ಲ ಎಂದುಕೊಂಡಿದ್ದೆ. ಆದರೆ ಈಗ ಯಾರೇ ಕೇಳಿದರು ನನಗೆ ಒಬ್ಬ ಅಣ್ಣನಿದ್ದಾನೆ ಎಂದು ಹೇಳಿಕೊಳ್ಳುತ್ತೀನಿ’ ಎಂದು ಭಾವುಕರಾಗಿದ್ದಾರೆ ತುಕಾಲಿ ಸಂತು.

ವರ್ತೂರು ಸಂತೋಷ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಬಿಗ್​ಬಾಸ್ ಸ್ಪರ್ಧಿಗಳು ಭಾಗವಹಿಸಿದ್ದರು. ತನಿಷಾ, ರಕ್ಷಕ್, ಮೈಖಲ್ ಅಜಯ್, ಇಶಾನಿ, ತುಕಾಲಿ ಸಂತು ಇನ್ನೂ ಹಲವರು ಭಾಗವಹಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ