ಬಿಗ್ ಬಾಸ್​ಗೆ ಕಂಬ್ಯಾಕ್ ಮಾಡಿದ ಸಂತೋಷ್​ಗೆ ಶಾಕ್; ಅವರು ಇಲ್ಲಿರಲು ಅರ್ಹರಲ್ಲ ಎಂದ ಸಹ ಸ್ಪರ್ಧಿಗಳು

|

Updated on: Oct 31, 2023 | 9:02 AM

ಸದ್ಯ ಸಂತೋಷ್ ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ಜಾಮೀನಿನ ಷರತ್ತಿನಲ್ಲಿ ಅವರು ಬಿಗ್ ಬಾಸ್​ ಮನೆಗೆ ಹೋಗಬಾರದು ಎನ್ನುವ ವಿಚಾರ ಇಲ್ಲ. ಹೀಗಾಗಿ ಅವರು ಮರಳಿ ದೊಡ್ಮನೆಗೆ ಬಂದಿದ್ದಾರೆ.

ಬಿಗ್ ಬಾಸ್​ಗೆ ಕಂಬ್ಯಾಕ್ ಮಾಡಿದ ಸಂತೋಷ್​ಗೆ ಶಾಕ್; ಅವರು ಇಲ್ಲಿರಲು ಅರ್ಹರಲ್ಲ ಎಂದ ಸಹ ಸ್ಪರ್ಧಿಗಳು
ವರ್ತೂರ್ ಸಂತೋಷ್
Follow us on

ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿ ವರ್ತೂರು ಸಂತೋಷ್ ಅವರು ಸಾಕಷ್ಟು ಸುದ್ದಿ ಆಗಿದ್ದರು. ಹುಲಿ ಉಗುರು ಪ್ರಕರಣದಲ್ಲಿ ಜೈಲು ಸೇರಿದ್ದ ಅವರು ಜಾಮೀನು ಪಡೆದು ಹೊರ ಬಂದಿದ್ದಾರೆ. ಅವರ ಹೆಸರು ಸಾಕಷ್ಟು ಚರ್ಚೆಯಲ್ಲಿ ಇರುವುದರಿಂದ ದೊಡ್ಮನೆಗೆ ಅವರನ್ನು ಮತ್ತೆ ಕರೆತರಲಾಗಿದೆ. ಈ ವೇಳೆ ಸಹ ಸ್ಪರ್ಧಿಗಳು ನಡೆದುಕೊಂಡ ರೀತಿ ವರ್ತೂರು ಸಂತೋಷ್​ಗೆ (varthur Santosh) ಶಾಕ್ ತಂದಿದೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

ಬಿಗ್ ಬಾಸ್​ ಮನೆಯಲ್ಲಿ ಎರಡು ವಾರ ಇದ್ದರು ಸಂತೋಷ್. ಮೂರನೇ ವಾರದ ಆರಂಭಕ್ಕೂ ಮೊದಲೇ ಅವರನ್ನು ಹೊರಗೆ ಕರೆತರಲಾಯಿತು. ಅವರ ಕತ್ತಿನಲ್ಲಿ ಇದ್ದ ಹುಲಿ ಉಗುರಿನ ಲಾಕೆಟ್ ಇದಕ್ಕೆ ಪ್ರಮುಖ ಕಾರಣ. ಅವರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ಬಂಧಿಸಿದರು. ನಂತರ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೂ ವಹಿಸಲಾಯಿತು. ಸದ್ಯ ಅವರು ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ಜಾಮೀನಿನ ಷರತ್ತಿನಲ್ಲಿ ಅವರು ಬಿಗ್ ಬಾಸ್​ ಮನೆಗೆ ಹೋಗಬಾರದು ಎನ್ನುವ ವಿಚಾರ ಇಲ್ಲ. ಹೀಗಾಗಿ ಅವರು ಮರಳಿ ದೊಡ್ಮನೆಗೆ ಬಂದಿದ್ದಾರೆ.

ಪ್ರತಾಪ್ ಅವರು ಬಿಗ್ ಬಾಸ್ ಮನೆ ಒಳಗೆ ಬರುತ್ತಿದ್ದಂತೆ ಉಳಿದ ಸ್ಪರ್ಧಿಗಳಿಗೆ ಅಚ್ಚರಿ ಆಗಿದೆ. ಅವರು ಒಂದು ವಾರ ಗ್ಯಾಪ್ ಕೊಟ್ಟಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಹೀಗಾಗಿ, ಅವರಿಗೆ ಪ್ರಶ್ನೆಗಳ ಸುರಿಮಳೆಗೈಯಲಾಗಿದೆ. ‘ಬಿಸ್ನೆಸ್​ ವಿಚಾರಕ್ಕೆ ಹೊರಗೆ ಹೋಗಿದ್ದೆಯೋ ಅಥವಾ ಆರೋಗ್ಯದ ಸಮಸ್ಯೆ ಕಾಡಿತ್ತೋ’ ಎಂದು ವಿನಯ್ ಕೇಳಿದರು. ‘ನಿಮ್ಮ ಚಿನ್ನವನ್ನು ತೆಗೆದುಕೊಂಡು ಹೋದರೆ’ ಎಂದು ನಮ್ರತಾ ಪ್ರಶ್ನಿಸಿದ್ದಾರೆ. ಈ ವೇಳೆ ಬಿಗ್ ಬಾಸ್ ನಾಮಿನೇಷನ್ ವಿಚಾರ ಎಳೆದು ತಂದರು.

ಇದನ್ನೂ ಓದಿ: ಬಿಗ್ ಬಾಸ್​ ಮನೆಗೆ ಬಂದು ಎರಡು ಲಕ್ಷ ರೂಪಾಯಿ ಕಳೆದುಕೊಂಡ ತುಕಾಲಿ ಸಂತೋಷ್

‘ಸಂತೋಷ್ ಅವರು ನಾಮಿನೇಷನ್ ಆಗಬೇಕೋ ಅಥವಾ ಬೇಡವೋ’ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದರು. ಇದಕ್ಕೆ ಮನೆ ಮಂದಿ ಉತ್ತರಿಸಿದ್ದಾರೆ. ‘ನಾವು ಒಂದು ವಾರ ಸ್ಟ್ರಗಲ್ ಮಾಡಿದ್ದೇವೆ. ಇದಕ್ಕೆ ಸಂತೋಷ್ ಅವರ ಕೊಡುಗೆ ಇರಲಿಲ್ಲ. ಹೀಗಾಗಿ ಅವರು ನಾಮಿನೇಟ್ ಆಗಬೇಕು’ ಎಂದು ಬಹುತೇಕರು ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ. ಹೀಗಾಗಿ, ಅವರು ನಾಮಿನೇಟ್ ಆಗೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಮೂಲಕ ದೊಡ್ಮನೆಯಲ್ಲಿ ಇರಲು ವರ್ತೂರು ಸಂತೋಷ್ ಅರ್ಹರಲ್ಲ ಎಂಬರ್ಥದಲ್ಲಿದೆ ಮನೆ ಮಂದಿಯ ನಿರ್ಧಾರ. ಇಂದು (ಅಕ್ಟೋಬರ್ 31) ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿರುವ ಎಪಿಸೋಡ್​ನಲ್ಲಿ ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಶೋ ನೋಡೋಕೆ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ