Drone Prathap: ತಾನು ಎಂಥ ಚಾಲಾಕಿ ಎಂಬುದನ್ನು ಕೊನೆಗೂ ತೋರಿಸಿದ ಡ್ರೋನ್ ಪ್ರತಾಪ್; ಎಲ್ಲರಿಗೂ ಶಾಕ್
Bigg Boss Kannada: ಪ್ರತಾಪ್ಗೆ ಸಿಕ್ಕ ಪಾಸ್ ಕಸಿದುಕೊಳ್ಳಲು ಕಾರ್ತಿಕ್ ಮಹೇಶ್ ಮುಂದಾದರು. ಬಲವಂತವಾಗಿ ಮೈಮೇಲೆ ಬಿದ್ದು ಪಾಸ್ ಕಿತ್ತುಕೊಂಡರು. ಇದರಿಂದ ಪ್ರತಾಪ್ ಅವರಿಗೆ ನಿಜಕ್ಕೂ ಬೇಸರ ಆಯಿತು. ಪಾಸ್ ಕಳೆದುಕೊಂಡ ಪ್ರತಾಪ್ ಅವರು ಬೇಸರ ಮಾಡಿಕೊಂಡವರಂತೆ ನಟಿಸಿದರು. ಆದರೆ ಸೂಕ್ತ ಸಮಯ ಬಂದಾಗ ತಮ್ಮ ಚಾಲಾಕಿ ಬುದ್ಧಿ ತೋರಿಸಿದರು.
‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ರಿಯಾಲಿಟಿ ಶೋನಲ್ಲಿ ಡ್ರೋನ್ ಪ್ರತಾಪ್ (Drone Prathap) ಅವರು ಸಖತ್ ಇಂಟರೆಸ್ಟಿಂಗ್ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆರಂಭದಲ್ಲಿ ಅವರನ್ನು ಎಲ್ಲರೂ ಟಾರ್ಗೆಟ್ ಮಾಡಿದ್ದರು. ಅದರಿಂದ ಅವರು ಗಳಗಳನೆ ಕಣ್ಣೀರು ಹಾಕಿದ್ದು ಕೂಡ ಉಂಟು. ನಂತರ ಸುದೀಪ್ ಅವರ ಧೈರ್ಯ ತುಂಬಿದ ಬಳಿಕ ಪ್ರತಾಪ್ ಕೊಂಚ ಹುಮ್ಮಸ್ಸು ಪಡೆದುಕೊಂಡಿದ್ದರು. ಡ್ರೋನ್ ವಿಚಾರದಲ್ಲಿ ಅವರು ಸುಳ್ಳು ಹೇಳಿದ್ದರು ಎಂಬುದು ಅನೇಕರ ಆರೋಪ. ಅದೇ ವಿಚಾರಕ್ಕೆ ಅವರು ಹೆಚ್ಚು ಟೀಕೆಗೆ ಒಳಗಾಗಿದ್ದರು. ಆ ಟೀಕೆಗಳನ್ನೆಲ್ಲ ಬದಿಗಿಟ್ಟು ಪ್ರತಾಪ್ ಅವರು ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಆಟ ಆಡುತ್ತಿದ್ದಾರೆ. ತಾವು ಎಂಥ ಚಾಲಾಕಿ ಎಂಬುದನ್ನು ಪ್ರತಾಪ್ ಅವರು ಈಗ ವಿವರಿಸಿದ್ದಾರೆ. ಅವರ ಬುದ್ಧಿವಂತಿಕೆ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ.
ಪ್ರತಿ ವಾರ ನಾಮಿನೇಷನ್ ಪ್ರಕ್ರಿಯೆ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತದೆ. ಈ ವಾರ ನಾಮಿನೇಷನ್ ಮಾಡುವ ಅಧಿಕಾರ ಪಡೆಯಲು ಒಂದು ಟಾಸ್ಕ್ ನೀಡಲಾಗಿತ್ತು. ಮನೆಯ ತುಂಬ ಬಲೂನ್ಗಳನ್ನು ಇರಿಸಲಾಗಿತ್ತು. ಆ ಪೈಕಿ ಕೆಲವು ಬಲೂನ್ನಲ್ಲಿ ನಾಮಿನೇಷನ್ ಪಾಸ್ ಇಡಲಾಗಿತ್ತು. ಯಾರಿಗೆ ಆ ಪಾಸ್ ಸಿಗುತ್ತೋ ಅವರು ಅದನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ತಮಗೆ ಸಿಕ್ಕ ಪಾಸ್ ಅನ್ನು ಬೇರೆಯವರು ಕಸಿದುಕೊಳ್ಳದಂತೆ ಕಾಪಾಡಿಕೊಳ್ಳಬೇಕು. ಡ್ರೋನ್ ಪ್ರತಾಪ್ ಅವರಿಗೆ ಮೊದಲು ಪಾಸ್ ಸಿಕ್ಕಿತು.
ಇದನ್ನೂ ಓದಿ: Varthur Santhosh: ಮತ್ತೆ ಬಿಗ್ ಬಾಸ್ ಮನೆಗೆ ಬಂದ ವರ್ತೂರು ಸಂತೋಷ್; ಹುಲಿ ಉಗುರು ಕೇಸ್ ಬಳಿಕ ಹೊಸ ಆಟ ಶುರು
ಪ್ರತಾಪ್ಗೆ ಸಿಕ್ಕ ಪಾಸ್ ಕಸಿದುಕೊಳ್ಳಲು ಕಾರ್ತಿಕ್ ಮಹೇಶ್ ಮುಂದಾದರು. ಬಲವಂತವಾಗಿ ಮೈಮೇಲೆ ಬಿದ್ದು ಪಾಸ್ ಕಿತ್ತುಕೊಂಡರು. ಇದರಿಂದ ಪ್ರತಾಪ್ ಅವರಿಗೆ ನಿಜಕ್ಕೂ ಬೇಸರ ಆಯಿತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಮನೆಯಲ್ಲಿ ಮಾತಿನ ಚಕಮಕಿ ಕೂಡ ನಡೆಯಿತು. ಪಾಸ್ ಕಳೆದುಕೊಂಡ ಪ್ರತಾಪ್ ಅವರು ಬೇಸರ ಮಾಡಿಕೊಂಡವರಂತೆ ನಟಿಸಿದರು. ಆದರೆ ಸೂಕ್ತ ಸಮಯ ಬಂದಾಗ ತಮ್ಮ ಚಾಲಾಕಿ ಬುದ್ಧಿ ತೋರಿಸಿದರು.
ಇದನ್ನೂ ಓದಿ: ‘777 ಚಾರ್ಲಿ’ ನಟಿ ಸಂಗೀತಾ ಶೃಂಗೇರಿಗೆ ಕಷ್ಟ ಆಗಿದೆಯಾ ಬಿಗ್ ಬಾಸ್ ಜರ್ನಿ?
ಟ್ವಿಸ್ಟ್ ಏನೆಂದರೆ ಡ್ರೋನ್ ಪ್ರತಾಪ್ ಅವರಿಗೆ ಸಿಕ್ಕ ಪಾಸ್ ಒಂದಲ್ಲ. ಬರೋಬ್ಬರಿ ನಾಲ್ಕು ಪಾಸ್ ಅವರಿಗೆ ಸಿಕ್ಕಿತ್ತು. ಆದರೆ ಅದನ್ನು ಬೇರೆ ಬೇರೆ ಕಡೆಗಳಲ್ಲಿ ಮುಚ್ಚಿಟ್ಟುಕೊಂಡಿದ್ದರು. ತಮಗೆ ಸಿಕ್ಕಿದ್ದು ಒಂದೇ ಪಾಸ್ ಎಂಬ ರೀತಿಯಲ್ಲಿ ಅವರು ನಟಿಸಿದರು. ಬಿಗ್ ಬಾಸ್ ಆದೇಶ ನೀಡಿದ ಬಳಿಕ ತಮ್ಮ ಬಳಿ ಇರುವ ಎಲ್ಲ ಪಾಸ್ಗಳನ್ನು ಪ್ರತಾಪ್ ಹೊರತೆಗೆದರು. ‘ಎಲ್ಲವನ್ನೂ ಒಂದೇ ಕಡೆ ಇಟ್ಟುಕೊಂಡರೆ ನಿಮಗೆ ಗೊತ್ತಾಗುತ್ತದೆ ಅಂತ ಬೇರೆ ಬೇರೆ ಕಡೆಗಳಲ್ಲಿ ಪಾಸ್ ಇಟ್ಟುಕೊಂಡಿದ್ದೆ’ ಎಂದು ಪ್ರತಾಪ್ ಹೇಳಿದ್ದು ಕೇಳಿ ಮನೆಮಂದಿಯೆಲ್ಲ ಶಾಕ್ ಆದರು. ‘ಇವನು ಎಂಥ ಚಾಲಾಕಿ ಗುರೂ’ ಎಂದು ಎಲ್ಲರ ಅಚ್ಚರಿ ವ್ಯಕ್ತಪಡಿಸಿದರು. ಕಲರ್ಸ್ ಕನ್ನಡದಲ್ಲಿ ಅ.30ರಂದು ಈ ಸಂಚಿಕೆ ಪ್ರಸಾರ ಆಯಿತು. ಜಿಯೋ ಸಿನಿಮಾದಲ್ಲಿ ಉಚಿತವಾಗಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:45 pm, Mon, 30 October 23