ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್ ರೀ-ಎಂಟ್ರಿ; ಬದಲಾಗಲಿದೆ ಲೆಕ್ಕಾಚಾರ?

|

Updated on: Oct 28, 2023 | 8:39 AM

ಕೋರ್ಟ್ ಜಾಮೀನು ನೀಡುವಾಗ ಹೆಚ್ಚಿನ ಷರತ್ತನ್ನು ಹಾಕಿಲ್ಲ. ಹೀಗಾಗಿ ಅವರು ಬಿಗ್ ಬಾಸ್​ಗೆ ಮರಳಲು ಅವಕಾಶ ಇತ್ತು. ಈ ಕಾರಣದಿಂದಲೇ ಸಂತೋಷ್ ಅವರು ಬಿಗ್ ಬಾಸ್​ಗೆ ರೀ ಎಂಟ್ರಿ ಪಡೆಯಲಿದ್ದಾರೆ.

ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್ ರೀ-ಎಂಟ್ರಿ; ಬದಲಾಗಲಿದೆ ಲೆಕ್ಕಾಚಾರ?
ವರ್ತೂರು ಸಂತೋಷ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂರನೇ ವಾರ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಮಧ್ಯೆ ಹಲವು ಬೆಳವಣಿಗೆಗಳು ಮನೆಯಲ್ಲಿ ನಡೆದಿವೆ. ಹುಲಿ ಉಗುರು ಹೊಂದಿರುವ ಪ್ರಕಣದಲ್ಲಿ ಬಿಗ್ ಬಾಸ್ (Bigg Boss) ಮನೆಯಿಂದ ವರ್ತೂರು ಸಂತೋಷ್ ಅವರು ಔಟ್ ಆಗಿದ್ದರು. ಅವರು ಮತ್ತೆ ಬರುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಅವರು ದೊಡ್ಮನೆಗೆ ಇಂದು (ಅಕ್ಟೋಬರ್ 28) ಎಂಟ್ರಿ ಕೊಡಲಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಮೂಲಕ ವೀಕೆಂಡ್ ಎಪಿಸೋಡ್​ಗೆ ಅವರು ಲಭ್ಯವಾಗಲಿದ್ದಾರೆ.

‘ಬಿಗ್ ಬಾಸ್’ ಮನೆ ಒಳಗೆ ಹೋಗುವಾಗ ವರ್ತೂರು ಸಂತೋಷ್ ಅವರು ಹುಲಿ ಉಗುರು ಹೊಂದಿರುವ ಚೈನ್ ಧರಿಸಿದ್ದರು. ಅವರ ಲಾಕೆಟ್ ಎಲ್ಲರ ಕಣ್ಣು ಕುಕ್ಕಿತ್ತು. ವನ್ಯಜೀವಿಗಳ ಅಂಗಾಂಗವನ್ನು ಇಟ್ಟುಕೊಳ್ಳುವಂತಿಲ್ಲ. ಹಾಗೊಮ್ಮೆ ಇಟ್ಟುಕೊಂಡರೆ ಅದು ಕಾನೂನಿಗೆ ವಿರುದ್ಧವಾದುದು. ಈ ಕಾರಣದಿಂದಲೇ ಸಂತೋಷ್ ಅವರನ್ನು ಬಂಧಿಸಲಾಗಿತ್ತು. ಅಕ್ಟೋಬರ್ 27ರಂದು ಅವರಿಗೆ ಜಾಮೀನು ಸಿಕ್ಕಿದೆ.

ಕೋರ್ಟ್ ಜಾಮೀನು ನೀಡುವಾಗ ಹೆಚ್ಚಿನ ಷರತ್ತನ್ನು ಹಾಕಿಲ್ಲ. ಹೀಗಾಗಿ ಅವರು ಬಿಗ್ ಬಾಸ್​ಗೆ ಮರಳಲು ಅವಕಾಶ ಇತ್ತು. ಈ ಕಾರಣದಿಂದಲೇ ಸಂತೋಷ್ ಅವರು ಬಿಗ್ ಬಾಸ್​ಗೆ ರೀ ಎಂಟ್ರಿ ಪಡೆಯಲಿದ್ದಾರೆ. ಈಗಾಗಲೇ ಅವರ ಹೆಸರು, ಫೋಟೋ ವಾಹಿನಿಗಳಲ್ಲಿ ಬಂದು ಸಾಕಷ್ಟು ಸುದ್ದಿ ಆಗಿದ್ದಾರೆ. ಒಂದೊಮ್ಮೆ ಬಿಗ್ ಬಾಸ್​ ಮನೆಗೆ ರೀ ಎಂಟ್ರಿ ಕೊಟ್ಟರೆ ವೀಕ್ಷಕರ ವರ್ಗ ಹೆಚ್ಚಲಿದೆ.

ಇದನ್ನೂ ಓದಿ: ಲೈಟ್ ಆಫ್​​ಗೂ ಮುನ್ನ ನಿದ್ದೆ; ವಿನಯ್-ಕಾರ್ತಿಕ್​ಗೆ ಬಿಗ್ ಬಾಸ್ ಕಠಿಣ ಶಿಕ್ಷೆ

ಕೆಲವು ಮೂಲಗಳ ಪ್ರಕಾರ ವೈಲ್ಡ್ ಕಾರ್ಡ್ ಮೂಲಕ ಸಂತೋಷ್​ ಅವರಿಗೆ ಎಂಟ್ರಿ ಕೊಡುವ ಸಾಧ್ಯತೆ ಇದೆಯಂತೆ. ಈಗ ಸಂತೋಷ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟರೆ ಲೆಕ್ಕಾಚಾರ ಬದಲಾಗಲಿದೆ. ಕಳೆದ ಸೀಸನ್​ನಲ್ಲಿ ದೀಪಿಕಾ ದಾಸ್ ಅವರು ದೊಡ್ಮನೆಯಿಂದ ಎಲಿಮಿನೇಟ್ ಆದರು. ಆ ಬಳಿಕ ಅವರಿಗೆ ವೈಲ್ಡ್ ಕಾರ್ಡ್ ಮೂಲಕ ಮತ್ತೆ ಬಿಗ್ ಬಾಸ್​ಗೆ ಬರೋಕೆ ಅವಕಾಶ ನೀಡಲಾಯಿತು. ಸಂತೋಷ್ ವಿಚಾರದಲ್ಲೂ ಹಾಗೆಯೇ ಮಾಡಲಾಗುತ್ತಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:07 am, Sat, 28 October 23