ಪತ್ನಿ ಬಿಗ್ ಬಾಸ್​ ಮನೆಯಲ್ಲಿದ್ದಾರೆಂದು ಬೇರೆ ನಟಿಯರ ಜೊತೆ ಪಾರ್ಟಿ ಮಾಡಿದ ವಿಕ್ಕಿ

ಬಿಗ್ ಬಾಸ್ ಮನೆಯಲ್ಲಿ ಆರು ಜನರು ಇದ್ದರು. ಈ ಪೈಕಿ ವಿಕ್ಕಿಯನ್ನು ಹೊರಕ್ಕೆ ಕಳುಹಿಸಲಾಗಿದೆ. ಅವರು ಹೊರ ಬರುತ್ತಿದ್ದಂತೆ ಇಶಾ ಮಾಲ್ವಿಯಾ, ಆಯೇಷಾ ಖಾನ್, ಸನಾ ಖಾನ್ ಜೊತೆ ಪಾರ್ಟಿ ಮಾಡಿದ್ದಾರೆ.

ಪತ್ನಿ ಬಿಗ್ ಬಾಸ್​ ಮನೆಯಲ್ಲಿದ್ದಾರೆಂದು ಬೇರೆ ನಟಿಯರ ಜೊತೆ ಪಾರ್ಟಿ ಮಾಡಿದ ವಿಕ್ಕಿ
ಇತರ ಹೀರೋಯಿನ್ ಜೊತೆ ವಿಕ್ಕಿ ಜೈನ್
Edited By:

Updated on: Jan 27, 2024 | 12:00 PM

ವಿಕ್ಕಿ ಜೈನ್ (Vicky Jain) ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 17’ರಿಂದ ಎಲಿಮಿನೇಟ್ ಆಗಿ ಬಂದಿದ್ದಾರೆ. ಅವರ ಪತ್ನಿ ಅಂಕಿತಾ ಲೋಖಂಡೆ ಇನ್ನೂ ಬಿಗ್ ಬಾಸ್ ಮನೆಯಲ್ಲೇ ಇದ್ದಾರೆ. ಹೊರಗೆ ಬಂದ ಬಳಿಕ ವಿಕ್ಕಿ ಜೈನ್ ಅವರು ಬೇರೆ ನಟಿಯರ ಜೊತೆ ಪಾರ್ಟಿ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅವರು ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಬಿಗ್ ಬಾಸ್ ಮನೆಯಲ್ಲಿ ಆರು ಜನರು ಇದ್ದರು. ಈ ಪೈಕಿ ವಿಕ್ಕಿಯನ್ನು ಹೊರಕ್ಕೆ ಕಳುಹಿಸಲಾಗಿದೆ. ಅವರು ಹೊರ ಬರುತ್ತಿದ್ದಂತೆ ಇಶಾ ಮಾಲ್ವಿಯಾ, ಆಯೇಷಾ ಖಾನ್, ಸನಾ ಖಾನ್ ಜೊತೆ ಪಾರ್ಟಿ ಮಾಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಂಕಿತಾ ಅಭಿಮಾನಿಗಳಿಗೆ ಶಾಕ್ ಆಗಿದೆ.

ಈಗ ನಟಿ ಪೂರ್ವ ರಾಣಾ ಜೊತೆಯೂ ವಿಕ್ಕಿ ಪಾರ್ಟಿ ಮಾಡಿದ್ದಾರೆ. ಅವರು ವಿಕ್ಕಿಯ ಜೊತೆ ಆಪ್ತವಾಗಿ ಕಾಣಿಸಿಕೊಂಡಿದ್ದಾರೆ. ಅವರು ಇಷ್ಟು ಆಪ್ತವಾಗಿ ಕಾಣಿಸಿಕೊಂಡಿದ್ದು ಅನೇಕರ ಕೋಪಕ್ಕೆ ಕಾರಣವಾಗಿದೆ. ಅಂಕಿತಾ ಅಭಿಮಾನಿಗಳು ಇದರಿಂದ ಅಸಮಾಧಾನಗೊಂಡಿದ್ದಾರೆ. ಈ ಫೋಟೋಗೆ ನಾನಾ ರೀತಿಯ ಕಮೆಂಟ್​ಗಳನ್ನು ಹಾಕಲಾಗುತ್ತಿದೆ.

‘ವಿಕ್ಕಿ ತಾಯಿಗೆ ಪಾಪ ಯಾವಾಗಲೂ ತಮ್ಮ ಮಗ ಏನೂ ಮಾಡುವುದಿಲ್ಲ ಅನಿಸುತ್ತದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಈ ಫೋಟೋ ಅಂಕಿತಾವರೆಗೂ ತಲುಪಬೇಕು’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ವಿಚ್ಛೇದನಕ್ಕೆ ಇನ್ನು ಕೆಲವೇ ದಿನಗಳು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ವಿಕ್ಕಿಯನ್ನು ಬೆಂಬಲಿಸಿದ್ದಾರೆ. ‘ವಿಕ್ಕಿ ಎಲ್ಲವನ್ನೂ ಓಪನ್ ಆಗಿ ಮಾಡಿದ್ದಾರೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್ ಮದುವೆ ಆಗಿದ್ದಾರೆ. ಈ ದಂಪತಿ ‘ಬಿಗ್ ಬಾಸ್​’ಗೆ ಆಗಮಿಸಿದರು. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅವರು ದೊಡ್ಮನೆ ಸೇರಿದರು. ಇಬ್ಬರ ಮಧ್ಯೆ ಸಾಕಷ್ಟು ಬಾರಿ ಕಿತ್ತಾಟ ಆಗಿದೆ. ಸಾಕಷ್ಟು ವೈಮನಸ್ಸು ಮೂಡಿದೆ. ವಿಕ್ಕಿ ನಡುವಳಿಕೆಯನ್ನು ಅನೇಕರು ಟೀಕೆ ಮಾಡಿದ್ದಿದೆ. ಇಬ್ಬರೂ ಸದಾ ಕಿತ್ತಾಡಿಕೊಳ್ಳುತ್ತಲೇ ಇದ್ದಿದ್ದರಿಂದ ಇವರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಇದನ್ನೂ ಓದಿ: ಫಿನಾಲೆಗೂ ಮೊದಲೇ ಎಲಿಮಿನೇಟ್ ಆದ ವಿಕ್ಕಿ ಜೈನ್; ಗಳಗಳನೆ ಅತ್ತ ಪತ್ನಿ ಅಂಕಿತಾ

ವಿಕ್ಕಿ ಅವರು ಔಟ್ ಆಗಿ ಹೊರಗಿನಿಂದ ಪತ್ನಿಗೆ ಬೆಂಬಲ ನೀಡುತ್ತಿದ್ದಾರೆ. ಜನವರಿ 28ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಅಂಕಿತಾ, ಮುನಾವರ್ ಫಾರೂಕಿ ಮೊದಲಾದವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಈ ಪೈಕಿ ಯಾರು ಕಪ್ ಎತ್ತುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:00 pm, Sat, 27 January 24