AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಫಿನಾಲೆ ಆರಂಭದಲ್ಲೇ ವರ್ತೂರು ಸಂತೋಷ್​, ಡ್ರೋನ್​ ಪ್ರತಾಪ್​ ಮನೆಯವರ ಕಣ್ಣೀರು

ಡ್ರೋನ್​ ಪ್ರತಾಪ್​ ಹಾಗೂ ವರ್ತೂರು ಸಂತೋಷ್​ ಅವರ ಮನೆಯವರು ಬಿಗ್​ ಬಾಸ್​ ಫಿನಾಲೆ ಶೋ ನೋಡಲು ಬಂದಿದ್ದಾರೆ. ಈ ವೇಳೆ ಅವರು ಅಳುತ್ತಿರುವುದು ಕಂಡುಬಂದಿದೆ. ಹಾಗಾಗಿ ಮೊದಲು ಯಾರು ಎಲಿಮಿನೇಟ್​ ಆಗಿರಬಹುದು ಎಂಬ ಪ್ರಶ್ನೆ ಮೂಡಿದೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಫಿನಾಲೆಯ ಸಂಚಿಕೆ ಭಾರಿ ಕೌತುಕ ಮೂಡಿಸಿದೆ.

ಬಿಗ್​ ಬಾಸ್​ ಫಿನಾಲೆ ಆರಂಭದಲ್ಲೇ ವರ್ತೂರು ಸಂತೋಷ್​, ಡ್ರೋನ್​ ಪ್ರತಾಪ್​ ಮನೆಯವರ ಕಣ್ಣೀರು
ಬಿಗ್​ ಬಾಸ್​ ಫಿನಾಲೆ
ಮದನ್​ ಕುಮಾರ್​
|

Updated on: Jan 27, 2024 | 5:46 PM

Share

110ಕ್ಕೂ ಹೆಚ್ಚು ದಿನಗಳ ಕಾಲ ವೀಕ್ಷಕರನ್ನು ರಂಜಿಸಿದ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಕಾರ್ಯಕ್ರಮ ಈಗ ಫಿನಾಲೆ (BBK 10 Finale) ಹಂತಕ್ಕೆ ಬಂದಿದೆ. ಅದ್ದೂರಿ ಸೆಟ್​ನಲ್ಲಿ ಫಿನಾಲೆ ಶೂಟಿಂಗ್​ ನಡೆಯುತ್ತಿದೆ. ವರ್ತೂರು ಸಂತೋಷ್​ (Varthur Santhosh), ತುಕಾಲಿ ಸಂತೋಷ್​, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್​ (Drone Prathap), ವಿನಯ್​ ಗೌಡ, ಕಾರ್ತಿಕ್​ ಮಹೇಶ್​ ಅವರು ಫಿನಾಲೆಯಲ್ಲಿ ಹಣಾಹಣಿ ನಡೆಸುತ್ತಿದ್ದಾರೆ. ಇವರ ಪೈಕಿ ಯಾರಿಗೆ ಬಿಗ್​ ಬಾಸ್​ ಟ್ರೋಫಿ ಸಿಗಲಿದೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. ಶನಿವಾರ (ಜ.27) ಬೆಳಗ್ಗೆಯೇ ಫಿನಾಲೆ ಸಂಚಿಕೆಯ ಶೂಟಿಂಗ್​​ ಆರಂಭ ಆಗಿದೆ. ಶೂಟಿಂಗ್​ ಸೆಟ್​ನ ಕೆಲವು ಫೋಟೋಗಳು ಲಭ್ಯವಾಗಿವೆ.

ಡ್ರೋನ್​ ಪ್ರತಾಪ್​ ಅವರು ಬಿಗ್​ ಬಾಸ್​ ಮನೆಯಲ್ಲಿ ಸ್ಟ್ರಾಂಗ್​ ಸ್ಪರ್ಧಿ ಆಗಿದ್ದಾರೆ. ಇಷ್ಟು ವರ್ಷಗಳ ಕಾಲ ತಂದೆ-ತಾಯಿಯಿಂದ ದೂರಾಗಿದ್ದ ಅವರು ಮತ್ತೆ ಕುಟುಂಬದವರ ಜೊತೆ ಸಂಪರ್ಕ ಬೆಳೆಸಿಕೊಳ್ಳಲು ಸಾಧ್ಯವಾಗಿದ್ದು ಇದೇ ಶೋ. ಆರಂಭದಲ್ಲಿ ಅಳುತ್ತಿದ್ದ ಅವರು ಈಗ ಫಿನಾಲೆಗೆ ಬಂದಿದ್ದಾರೆ. ಫಿನಾಲೆ ಸಂಚಿಕೆ ನೋಡಲು ಡ್ರೋನ್​ ಪ್ರತಾಪ್​ ಅವರ ತಾಯಿ ಸಹ ಆಗಮಿಸಿದ್ದಾರೆ. ಆದರೆ ಅವರು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಬಂತು ಪ್ರತಾಪ್​ನ ಡ್ರೋನ್​; ಅಂದು ಚುಚ್ಚುಮಾತು, ಇಂದು ಮೆಚ್ಚುಗೆ ಮಾತು

ಅದೇ ರೀತಿ ವರ್ತೂರು ಸಂತೋಷ್​ ಕೂಡ ಬಿಗ್​ ಬಾಸ್​ ಆಟದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ಅಪಾರ ಜನಬೆಂಬಲ ಸಿಕ್ಕಿದೆ. ಬಿಗ್​ ಬಾಸ್​ ಟ್ರೋಫಿ ಗೆದ್ದರೆ ಅದರಿಂದ ಬರುವ ಹಣವನ್ನು ಹಳ್ಳಿಕಾರ್​ ತಳಿಯ ಸಂರಕ್ಷಣೆಗೆ ಬಳಸುವುದಾಗಿ ಅವರು ಹೇಳಿದ್ದಾರೆ. ಬಿಗ್​ ಬಾಸ್​ ಫಿನಾಲೆ ಶೋ ನೋಡಲು ಬಂದ ಅವರ ತಾಯಿ ಕೂಡ ಅಳುತ್ತಿರುವುದು ಕಂಡುಬಂದಿದೆ. ಹಾಗಾಗಿ ಸಂಚಿಕೆಯ ಆರಂಭದಲ್ಲಿ ಯಾರು ಎಲಿಮಿನೇಟ್​ ಆಗಿರಬಹುದು ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ.

ಇದನ್ನೂ ಓದಿ: ‘ಡ್ರೋನ್​ ಪ್ರತಾಪ್​ ಒಳ್ಳೆಯ ಹುಡುಗ’: ಕೊನೇ ಕ್ಷಣದಲ್ಲಿ ಒಪ್ಪಿಕೊಂಡ ವಿನಯ್​ ಗೌಡ

ಕಿಚ್ಚ ಸುದೀಪ್​ ಅವರು ಝಗಮಗಿಸುವ ವೇದಿಕೆಯಲ್ಲಿ ಫಿನಾಲೆ ಸಂಚಿಕೆ ನಡೆಸಿಕೊಡುತ್ತಿದ್ದಾರೆ. ಇದರ ಚಿತ್ರೀಕರಣ ಗ್ರ್ಯಾಂಡ್​ ಆಗಿ ನಡೆಯುತ್ತಿದೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಇಂದು (ಜನವರಿ 27) ಹಾಗೂ ಭಾನುವಾರ (ಜನವರಿ 28) ಸಂಜೆ 7.30ಕ್ಕೆ ಫಿನಾಲೆ ಎಪಿಸೋಡ್​ ಪ್ರಸಾರ ಆಗಲಿದೆ. ಈಗಾಗಲೇ ಎಲಿಮಿನೇಟ್​ ಆದ ಸ್ಪರ್ಧಿಗಳ ಜೊತೆ ಹಲವು ಸೆಲೆಬ್ರಿಟಿಗಳು ವೇದಿಕೆಯಲ್ಲಿ ಮನರಂಜನೆ ನೀಡಲಿದ್ದಾರೆ. ಬಿಗ್​ ಬಾಸ್​ ವಿನ್ನರ್​ಗೆ 50 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಬಳ್ಳಾರಿ ದಂಗಲ್​​​: ಜನಾರ್ದನ ರೆಡ್ಡಿ ಮನೆಯಲ್ಲಿ ರಾಶಿ ರಾಶಿ ದೊಣ್ಣೆ ಪತ್ತೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಅಶ್ಲೀಲ ಪದ ಬಳಕೆ ವಿರುದ್ಧ ಸಿಡಿದೆದ್ದ ಜನಪದ ಕಲಾವಿದರು: ಕಾರಣ ಇಲ್ಲಿದೆ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಫಾಸ್ಟ್ ಫುಡ್ ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್, ಓಡಿ ಪ್ರಾಣ ಉಳಿಸಿಕೊಂಡ ಜನ
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ